Category: ಪರಾಗ
ವಾಟ್ಸಾಪ್ ಕಥೆ 54 : ಪರಸ್ಪರ ಕಾಳಜಿ.
ಜಪಾನ್ ದೇಶದಲ್ಲಿ ಬಹುತೇಕರು ಮನೆಗಳನ್ನು ಮರಮುಟ್ಟುಗಳಿಂದಲೇ ಕಟ್ಟಿಕೊಳ್ಳುತ್ತಾರೆ. ಒಬ್ಬವ್ಯಕ್ತಿ ತಾನು ಮನೆ ನಿರ್ಮಿಸಿದ ಐದುವರ್ಷಗಳ ನಂತರ ಅದನ್ನು ಸ್ವಲ್ಪ ನವೀಕರಣ ಮಾಡೋಣವೆಂದು ಆಲೋಚಿಸಿದ. ಅದಕ್ಕೆ ಬೇಕಾದ ಪರಿಕರಗಳನ್ನು ಹೊಂದಿಸಿಕೊಳ್ಳಹತ್ತಿದ. ಕೆಲಸ ಪ್ರಾರಂಭ ಮಾಡುವಾಗ ಹಳೆಯ ಮರಗಳನ್ನು ಜೋಡಿಸಿದ್ದ ಭಾಗಗಳನ್ನು ಬಿಡಿಸತೊಡಗಿದ. ಅವನಿಗೆ ಅಲ್ಲಿ ಒಂದು ಹಲ್ಲಿ ಕಾಣಿಸಿತು....
ಮೂಡಿದ ಬೆಳದಿಂಗಳು.
ಮೈಸೂರು ದಸರಾ ವಸ್ತು ಪ್ರದರ್ಶನ ನೋಡಲು ತಮ್ಮ ಮೊಮ್ಮಕ್ಕಳೊಡನೆ ಸ್ವಾಮಿ ಮಾಸ್ತರರು ಹೋಗಿದ್ದರು. ಬೆಳಕಿನ ಸಾಲುಸಾಲು ದೀಪಗಳಿಂದ ಅಲಂಕೃತಗೊಂಡಿದ್ದ ಅಂಗಡಿಗಳ ಮುಂದೆ ಗಿಜುಗುಟ್ಟುವ ಜನಸಂದಣಿ. “ಹಿಂದೆ ಮುಂದೆ ನೋಡಿಕೊಂಡು ನಡೆಯಿರಿ ಮಕ್ಕಳೆ. ಕಳೆದುಹೋದೀರಿ” ಎಂದು ಮೊಮ್ಮಕ್ಕಳನ್ನು ಎಚ್ಚರಿಸಿದರು. “ತಾತ ನೀವು ಜೋಪಾನ, ನಾವು ಕಳೆದು ಹೋಗುವ ಭಯವಿಲ್ಲ....
ಎಲ್ಲಾ ಅವನ ಕೃಪೆ
”ಎಷ್ಟು ಸಲ ತೂಗಿ,ಸರಿ ತೂಕ ನೋಡುವುದು; ಒಂದಿಷ್ಟು ಹೆಚ್ಚು ಬಂದರೇನೀಗ ಆ ಟೊಮೆಟೋ ತೂಕಕ್ಕೆ….!?”ತರಕಾರಿಯವನ ಬಳಿ ತಕರಾರುಮಾಡುತ್ತಿದ್ದ ಆ ಮುದುಕಿಯನ್ನು ನೋಡಿದ ವಸುಂಧರಾ ತನ್ನ ಖರೀದಿ ತೀರಿಸಿ ನಡು ನೆಟ್ಟಗೆ ಮಾಡಿ ಇತ್ತ ತಿರುಗಿದ ಆ ವೃದ್ಧೆಯನ್ನು ಬೆರಗಾಗಿ ನೋಡಿದಳು!. “ಓಹ್…,ಕನಕಮ್ಮ ನೀವಾ?”“ಹೌದು.., ನೀನು ವಸುಂಧರಾ ತಾನೇ?...
ವರ್ತುಲದೊಳಗೆ…..ಭಾಗ 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು….) ರಾಘವ ದಂಪತಿಗಳು ಹೇಳಿದ ಎಲ್ಲಾ ವಿವರಗಳನ್ನು ತಾಳೆಹಾಕಿದಾಗ ಲಲಿತಾರವರಿಗೆ ಭಾರತದಲ್ಲೂ ಇಂತಹ ಕೆಲವು ಅಧ್ಯಾತ್ಮ ಸಂಸ್ಥೆಗಳ ಬಗ್ಗೆ ಓದಿದ್ದು ನೆನಪಾಯಿತು. ಧರ್ಮಗುರುಗಳೆಂದು ಅಧ್ಯಾತ್ಮ ಬೋಧನೆಯ ಮುಖವಾಡವಿಟ್ಟುಕೊಂಡು ಜನರಿಂದ ಅಪಾರವಾದ ಧನಸಂಗ್ರಹಿಸಿ ಐಷಾರಾಮಿ ಆಶ್ರಮಗಳನ್ನು ನಿರ್ಮಿಸಿಕೊಂಡಿದ್ದ ಕೆಲವರ ಹೆಸರುಗಳು ಕಣ್ಮುಂದೆ ಬಂದವು. ಧನವೊಂದಿಗರ ಪೋಷಣೆಯಲ್ಲಿ...
ವರ್ತುಲದೊಳಗೆ….ಭಾಗ 1
“ಲಲಿತಾ, ಅಲ್ಲಿಗೆ ಹೋಗಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆಯಾ? ಆ ಪ್ರದೇಶದ ಸುತ್ತಮುತ್ತಲಿನ ಪರಿಚಯ, ರೀತಿರಿವಾಜುಗಳ ಬಗ್ಗೆ ವಿಚಾರಿಸಿದೆಯಾ? ಅಲ್ಲಿ ವ್ಯವಸ್ಥೆ ಹೇಗಿದೆ? ಮುಖ್ಯಸ್ಥರು ಯಾರು? ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಹೆಜ್ಜೆಯಿಡು. ನೀನು ಒಪ್ಪಿಕೊಂಡಿರುವ ಜವಾಬ್ದಾರಿ ಗುರುತರವಾದುದು. ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಎಚ್ಚರಿಕೆ, ಆತುರ ಬೇಡ. ಯಾವುದಕ್ಕೂ ಫೊನ್ ಮಾಡು,...
ವಾಟ್ಸಾಪ್ ಕಥೆ 53 : ಕಾಯಕವೇ ಕೈಲಾಸ.
ಒಂದು ಚಪ್ಪಲಿ ಮಾರುವ ಅಂಗಡಿ. ಒಬ್ಬ ವ್ಯಕ್ತಿ ಚಪ್ಪಲಿ ಕೊಡುಕೊಳ್ಳಲು ಅದರೊಳಕ್ಕೆ ಬಂದನು. ಅಲ್ಲಿದ್ದ ಪರಿಚಾರಕನು ಅವನನ್ನು ನಗುಮೊಗದಿಂದ ಸ್ವಾಗತಿಸಿ ಖುರ್ಚಿಯಲ್ಲಿ ಕುಳ್ಳಿರಿಸಿದ. ಗ್ರಾಹಕನಿಗೆ ಎಂತಹ ಚಪ್ಪಲಿಗಳು ಬೇಕು ಎಂಬುದನ್ನು ಕೇಳಿ ತಿಳಿದುಕೊಂಡ. ನಂತರ ಹಲವಾರು ನಮೂನೆಗಳ ಚಪ್ಪಲಿಗಳನ್ನು ಮುಂದೆ ಹರಡಿದ. ಪ್ರತಿಯೊಂದನ್ನೂ ಅಳತೆ ಮತ್ತು ಆಯ್ಕೆಯ...
ವಾಟ್ಸಾಪ್ ಕಥೆ 52 : ವ್ಯಾಮೋಹ.
ಒಂದು ಪುಟ್ಟ ಕೆರೆಯಿತ್ತು. ಅದರ ನೀರು ಬಹಳ ಕಾಲದಿಂದ ಪಾಚಿಕಟ್ಟಿ ಹೊಲಸಾಗಿತ್ತು. ಹೊಸನೀರು ಬಂದಿರಲಿಲ್ಲ. ಮಲೆತುಹೋಗಿದ್ದ ನೀರಿನಲ್ಲಿ ಹುಳುಗಳು ಬೆಳೆದು ಸುತ್ತೆಲ್ಲ ದುರ್ವಾಸನೆ ಬೀರುತ್ತಿತ್ತು. ಒಂದು ಕಪ್ಪೆಯು ಅದರಲ್ಲೇ ಬಹಳ ಕಾಲದಿಂದ ವಾಸಿಸುತ್ತಿತ್ತು. ಅದು ಅಲ್ಲಿದ್ದ ಹುಳುಗಳನ್ನೆ ತಿಂದುಕೊಂಡು ಬದುಕಿತ್ತು. ಒಂದು ದಿನ ಆ ಕೆರೆಗೆ ಹಂಸವೊಂದು...
ನಿಮ್ಮ ಅನಿಸಿಕೆಗಳು…