Daily Archive: April 14, 2016
ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ. ಯುಗಾದಿಯ ವೈಶಿಷ್ಟ್ಯಃ- ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ.ಚೈತ್ರಮಾಸದ ಶುಕ್ಲ ಪ್ರತಿಪದೆ[ಪಾಡ್ಯ]ಯ...
ಟಿ.ವಿ. ರಿಪೋರ್ಟರ್ ಆ ಮನೆಯ ದೊಡ್ಡ ಗೇಟ್ ದಾಟಿ ಮನೆಯೊಳಗೆ ಬಂದ. ಸೋಫ಼ಾದ ಮೇಲೆ ಪ್ರೇರಣಾ ಆಸ್ಪತ್ರೆಯ ಸಂಸ್ಥಾಪಕರಾದ ಮಧುಕರ್ ಜೋಶಿ ಕುಳಿತಿದ್ದರು. ಸಂದರ್ಶನಕ್ಕಾಗಿಯೇ ಕ್ಲಪ್ತ ಸಮಯಕ್ಕೆ ತಯಾರಾಗಿದ್ದರು. “ಸರ್, ಪ್ರೇರಣಾ ಆಸ್ಪತ್ರೆಯ ಬಗ್ಗೆ ಏನೇನೋ ವದಂತಿ ಕೇಳಿ ಬರ್ತಿದೆ ಅದ್ಕೆ ನಿಮ್ಮತ್ರಾನೇ ಕೇಳೋನಾಂತ” ನೇರವಾದ...
ನಾನು ಸರಿ, ನೀನು ಸರಿ ಇಬ್ಬರು ಸರಿ ಸರಾಸರಿ ಇರದಿದ್ದರೆ ದೂರ ದುಬಾರಿ ದೂರ ಸರಿವುದೆ ಸರಿ ದಾರಿ ! || ನೀನಿಲ್ಲ ಸರಿ, ನಾನಿಲ್ಲ ಸರಿ ಸರಿ..ಸರಿ ಆಕ್ರಂದನ ಭಾರಿ ಕಂದನ ಅಸಹಾಯಕತೆ ಪರಿ ಹುಟ್ಟಿದ ಗಳಿಗೆಯ ಸವಾರಿ.. || ನಾನಿಲ್ಲ ಸರಿ, ನೀವೆಲ್ಲ...
‘ಅಮ್ಮಾ,ಸೂಟುಕೇಸಲ್ಲಿ ನೆಲ್ಲಿಚಟ್ಟು ಇಟ್ಟಿದ್ದೀಯಾ…ಮರ್ತುಬಿಡ್ಬೇಡ ಮತ್ತೆ..??’..ಮಗಳು ಉವಾಚ…ಅಮೇರಿಕಕ್ಕೆ ಕುಟುಂಬ ಸಮೇತ ಹೊರಡುವ ತಯಾರಿ ನಡೆಯುತ್ತಿತ್ತು..ಎಲ್ಲಾ ಸಾಮಾನುಗಳ ಜೊತೆಗೆ ನೆಲ್ಲಿಚಟ್ಟಿಗೆ ಮೊದಲ ಸ್ಥಾನ…ಹಾಗೆಯೇ ಅದಕ್ಕೆ ವಿದೇಶ ಪ್ರಯಾಣದ ಯೋಗ..!! ಮನೆಯೊಳಗೆ ಅದೊಂದಿದ್ದರೆ ಮನಸ್ಸಿಗೆ ನೆಮ್ಮದಿ.. ನೆಲ್ಲಿಕಾಯಿಯನ್ನು ತಿಳಿಯದವರು ಇಲ್ಲ ಅಂತಲೇ ಹೇಳಬಹುದು.ನಿಸರ್ಗದಲ್ಲಿ ಸಿಗುವ ಪರಿಪೂರ್ಣ ಔಷದೀಯ ಫಲ ಇದಾಗಿದೆ.ಅಮೃತಫಲವೆಂದು ಕರೆಸಿಕೊಳ್ಳುವ...
ಅಗಲಿಕೆ ನೀನೇ ಹೆತ್ತುಕೊಟ್ಟ ಕೂಸು ಬಿಟ್ಟು ಹೋದದ್ದು ಸರಿಯೇ? ನಿನ್ನ ಅಗಲಿಕೆಯಿಂದ ಕನಸು ಅನಾಥವಾಗಿದೆ ಹರಿತ ಕ್ಷತ್ರಿಯನ ಕತ್ತಿ ನಿನ್ನ ನೆನಪುಗಳ ಬುತ್ತಿ ಎರಡಕ್ಕೂ ಹರಿತವಿದೆ ಒಂದಿಷ್ಟೂ ಅರಿವಿಲ್ಲ ಮತ್ತು ಕರುಣೆಯಿಲ್ಲ ಇದೇನಾ? ಕೆಂಪು ರೆಕ್ಕೆಗಳ ಪಾರಿವಾಳ ಹಾರಿಬಂತು ಬಂದೂಕಿನ ನಳಿಗೆಯೊಳಗೆ ಗುಂಡುಗಳು ಯುದ್ಧವೆಂದರೆ ಇದೇನಾ? ...
ನಡೆಯುತ್ತೇನೆ ಮುಳ್ಳುಗಳ ದಾರಿಯಲ್ಲಿ ನಿಲ್ಲುತ್ತೇನೆ ಕೆಂಡಗಳ ಕೊಂಡದಲ್ಲಿ ಮಲಗುತ್ತೇನೆ ಅರೆಬೆಂದ ಚಿತೆಗಳ ಮೇಲೆ ಆಗೆಲ್ಲ ನೆನಪು ಮಾಡಿಕೊಳ್ಳುತ್ತೇನೆ ಅವಳ ಮುಗುಳ್ನಗುವನ್ನು ತುಂಗಾ ನದಿಯ ತಟದಲ್ಲಿ ನಿಂತವಳ ಕೆನ್ನೆಯ ಮೇಲೆ ಬಿದ್ದ ಸೂರ್ಯನ ಬೆಳಕಲ್ಲಿ ಹೊಳೆಯುವ ಅವಳ ಝುಮುಕಿಯಲ್ಲಿ ಜೋಕಾಲಿಯಾಡುತ್ತೇನೆ ಕೈ ಸೋತು ಕೆಳಗೆ ಬಿದ್ದಾಗ ಅವಳ ಮಡಿಲಲ್ಲಿ...
ನನ್ನ ಕನಸಿನ ಚೆಲುವೆಯು, ಬಾನಿನಿಂದ ಧರೆಗಿಳಿದು ಬಂದಿರುವ ಅನುಭವವೊಂದು ಮೂಡಿದೆ, ನನ್ನನೇ ಮರೆತಿರುವೆ ಆ ಕ್ಷಣದಿಂದಲೇ. ಪ್ರೀತಿಯೆಂಬ ಮಾಯ ಕಡಲಲ್ಲಿ, ಈಜು ಬಾರದೇ ಧುಮಿಕಿರುವ ಭಾವನೆಯೊಂದು ಚಿಗುರಿದೆ. ನಿನ್ನದೇ ನೆನಪಿನಲ್ಲಿ ಮನವು ತೇಲಾಡುತ್ತಿದೆ. ಕಣ್ಣುಗಳಲ್ಲಿ ನಿನ್ನದೇ ಚಿತ್ರವ, ಸೆರೆಹಿಡೆಯುವ ಆಸೆಯೊಂದು ಅರಳಿದೆ. ನಿನ್ನಲ್ಲಿಯೇ ನಾ ಸೆರೆಯಾದೆ....
ನಿಮ್ಮ ಅನಿಸಿಕೆಗಳು…