Monthly Archive: November 2017
ಕುಂಕುಮ ಕೆಂಪು, ಎಲೆ ಹಸಿರು, ಕಡು ಕಪ್ಪು ಗಾಜಿನ ಬಳೆಗಳ ಸಾಲು. ಪುಟ್ಟದಾದ ಬಲ್ಬ್ ಬೆಳಕಲ್ಲಿ ಮಿರ ಮಿರ ಮಿಂಚುವ ಗಾಜಿನ ಬಳೆಗಳು. ನೋಡಲು ಬಲು ಸುಂದರವಾದರೂ ಕೊಳ್ಳಲು ಏಕೋ ಕಷ್ಟವಾಗುತ್ತಿತ್ತು. ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿರುವ ಗಾಜಿನ ಬಳೆಗಳ ಕಾರುಬಾರು ಸಂಪೂರ್ಣ ಸ್ಥಗಿತವಾಗಿದೆ...
ದೇಸಿ ಸಂಸ್ಕೃತಿ ಮತ್ತೆ ಪಾರಂಭವಾಗಿದೆ. ಆಧುನಿಕತೆಯಲ್ಲಿ ಪುರಾತನತ್ವ ಮತ್ತೆ ಮೈಗೂಡುತ್ತಿದೆ. ದಿನ ನಿತ್ಯ ಬಳಕೆಯ ವಸ್ತುಗಳ ಜೊತೆ ಅಲಂಕಾರಿಕ ವಸ್ತುಗಳಾಗಿ ಎಲ್ಲೆಡೆ ‘ಮರದ ವಸ್ತುಗಳು’ ಕಾಣಿಸಿಕೊಳ್ಳುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಲಕ್ಷದೀಪೋತ್ವವದಲ್ಲಿ ವಸ್ತುಪ್ರದರ್ಶನ ಕೇಂದ್ರ ಬಿಂದುವಾಗಿದೆ. ಪ್ರದರ್ಶನದಲ್ಲಿ ಮರದ ಆಟಿಕೆಗಳು, ಅಲಂಕಾರಿಕ ವಸ್ತುಗಳು...
ತಂತ್ರಜ್ಞಾನಗಳ ಭರಾಟೆ ಮುಂದುವರಿಯುತ್ತಿದ್ದಂತೆ ಹಿರಿಯರು ಬಳಸುತ್ತಿದ್ದ ನೈಸರ್ಗಿಕ ವಸ್ತುಗಳು ಕಣ್ಮರೆಯಾಗುತ್ತಿವೆ. ಹಳ್ಳಿಗಳಲ್ಲಿಯೂ ಇಂದು ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಸಾಮಾಗ್ರಿಗಳು ಕಾಣಸಿಗುವುದು ಅಪರೂಪವಾಗಿದೆ. ಆದರೆ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಕಲ್ಲಿನ ಕೆತ್ತನೆಯಿಂದ ಮಾಡಿದ ಮನೆಯಲ್ಲಿ ದಿನನಿತ್ಯದ ಕೆಲಸಗಳಿಗೆ ಬಳಸುವ ಅಳಿವಿನಂಚಿನಲ್ಲಿರುವ ವಿವಿಧ ಸಾಮಾಗ್ರಿಗಳು ಗಮನ ಸೆಳೆದವು. ಲಕ್ಷದೀಪೋತ್ಸವದಲ್ಲಿ ಪ್ರತಿ...
ಸುತ್ತಲೂ ಜನಸಂದಣಿ. ನೆಲದಲ್ಲಿ ಕೂತು ಹಾಳೆಟೋಪಿ[ಮುಟ್ಟಾಲೆ]ಯನ್ನು ಹೆಣೆಯುತ್ತಾ ಕೂತ ಹಿರಿ ವಯಸ್ಸಿನ ವ್ಯಕ್ತಿ. ಅದರ ಕಡೆಗೆ ಕುತೂಹಲದ ಕಣ್ಣುಗಳನ್ನು ನೆಟ್ಟು ಆ ಬಗ್ಗೆ ವಿಚಾರಿಸುತ್ತಿರುವವರು. ಅವರಲ್ಲೊಂದಷ್ಟು ಜನ ಕೊಳ್ಳುವ ಇರಾದೆ ವ್ಯಕ್ತಪಡಿಸುವವರು…. ಈ ಚಿತ್ರಣಕಂಡು ಬಂದದ್ದು ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನದಲ್ಲಿ. ಅಡಿಕೆ ಹಾಳೆಯನ್ನು ಕಚ್ಚಾವಸ್ತುವನ್ನಾಗಿ...
ಅನಾದಿ ಕಾಲದ ಮಣ್ಣಿನ ಪಾತ್ರೆಗಳಿಗೆ ಮರುಜೀವ ದೊರೆತಿದೆ. ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದರ ಮೂಲಕ ಪ್ರಕೃತಿಯನ್ನು ಸಂರಕ್ಷಿಸಿ ಎಂಬ ಸಂದೇಶವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಮೂಲಕ ಸಾರಲಾಗುತ್ತಿದೆ. ಇಲ್ಲಿಯ ವಸ್ತು ಪ್ರದರ್ಶನ ಮಳಿಗೆಯೊಂದರಲ್ಲಿ ವೈವಿಧ್ಯಮಯ ಮಣ್ಣಿನ ದಿನಪಯೋಗಿ ವಸ್ತುಗಳು ಕಂಗೊಳಿಸುತ್ತಿವೆ. ಹಳ್ಳಿಯ ಸೊಗಡನ್ನು ಬಿಂಬಿಸುವ...
ಅದ್ಯಾವುದೋ ಕೆಲಸ ನಿಮಿತ್ತ ಎರಡು ದಿನಗಳು ಪ್ರವಾಸದಲ್ಲಿದ್ದು ಅಂದು ಬೆಳಗ್ಗೆಯಷ್ಟೇ ಮನೆ ತಲುಪಿದ್ದೆವು. ಮನೆಯಲ್ಲೇ ಇದ್ದೆ. ಮಟ ಮಟ ಮಧ್ಯಾಹ್ನ ಒಂದೂ ಮೂವತ್ತರ ಹೊತ್ತು. ಸೆಖೆಗಾಲ ಬೇರೆ, ಸೂರ್ಯ ನೆತ್ತಿಗೇರಿ ಉಗ್ರ ರೂಪ ತಾಳಿ ಉರಿದು ಬೀಳುತ್ತಿದ್ದ. ಮನೆಯೊಳಗಿದ್ದರೂ ತಡೆಯದ ಆಸರು, ಬಿಸಿಲಿಗೋ ಪ್ರಯಾಣದ ಆಯಸಕ್ಕೋ ಇನ್ನಿಲ್ಲದ...
ಎಂಥದೋ ತೊಳಲಿಕೆಯ ವಿಧ್ವಸ್ತ ಮನದಲ್ಲಿ ಮನೆ ತಲುಪಿದೆ ಒಂದು ಕೈಯಲ್ಲಿ ವಾಕರ್ ಇನ್ನೊಂದರಲ್ಲಿ ಪೈಪು ಹಿಡಿದು ಸಸಿ ಮಕ್ಕಳಿಗೆ ನೀರು ಹನಿಸುತ್ತಿರುವ ಅಮ್ಮನನ್ನು ಕಂಡಿದ್ದೇ ಈಗ ಎಲ್ಲದಕ್ಕೂ ಬೇರೆಯದೇ ಬಣ್ಣ ಬಂದಿದೆ -ಡಾ. ಗೋವಿಂದ ಹೆಗಡೆ +8
ಚೀನಾದ ಪೂರ್ವಾ ಕರಾವಳಿಯಲ್ಲಿರುವ ಪ್ರಮುಖ ವಾಣಿಜ್ಯನಗರಿ ಶಾಂಘೈ. ನಾಲ್ಕು ವರುಷಗಳ ಹಿಂದೆ ಉದ್ಯೋಗನಿಮಿತ್ತವಾಗಿ ನಾನು ಕೆಲಸಮಾಡುತ್ತಿದ್ದ ಸಂಸ್ಥೆಯ ಶಾಂಘೈ ಘಟಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ಚೀನಾದಲ್ಲಿ ಮನುಷ್ಯರನ್ನು ಬಿಟ್ಟು ಇನ್ನೆಲ್ಲಾ ಪ್ರಾಣಿ-ಪಕ್ಷಿ-ಕೀಟಗಳನ್ನು ತಿನ್ನುತ್ತಾರೆ, ಸಸ್ಯಾಹಾರಿಗಳಿಗೆ ಸರಿಯಾದ ಊಟ ಸಿಗದು ಎಂಬ ಮಾತು ಪ್ರಚಲಿತ. ಹೀಗಿರುವಾಗ,ಶಾಂಘೈನಲ್ಲಿ ನಾಲ್ಕುದಿನಗಳಿದ್ದು...
‘ನೋಡೋಕೆ ಭಾರೀ ದೊಡ್ಡ ಕುಳಾ ನಮ್ಮಯ ರಂಗೂ ಮಾಮ ಬೆಳ್ಸಿದ್ದಾನೆ ತನ್ನ ದೇಹಾನ ಇಲ್ಲ ಲಂಗೂ ಲಗಾಮ!’ ಮೊನ್ನೆ ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಗೆಳೆಯನ ಪುಟ್ಟ ಮಗ ಪುಸ್ತಕವೊಂದನ್ನು ಓದುತ್ತಾ ತಮಾಷೆಯಲ್ಲಿ ಹಾಡುತ್ತಿದ್ದ! “ಯಾವ್ದು ಪುಟ್ಟಾ ಪುಸ್ತಕ?” ಅಂತ ಕೇಳಿದೆ. ತೋರಿಸಿದ. ನೋಡಿದೆ. “ಹೂವೇ...
ಭಾರತದ ಉತ್ತರ ತುದಿಯಲ್ಲಿ ದೇಶದ ಕಿರೀಟವೆಂಬಂತೆ ಕಾಶ್ಮೀರ ನೆಲೆಸಿದೆ. ಕಾಶ್ಮೀರಕ್ಕೆ ಪ್ರವಾಸ ಹೋಗಲು ಒಂದು ತಿಂಗಳು ಮುಂಗಡವಾಗಿಯೇ ಎಲ್ಲಾ ಸಿದ್ಧತೆಯಾಗಿತ್ತು. ಒಂದು ವಾರ ಕಳೆಯಿತು. ಹೀಗೆಯೇ ಒಂದು ಬೆಳಗ್ಗೆ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾಹಿತಿಯೊಂದು ಬೇಸರ ಮೂಡಿಸಿತು. ಶ್ರೀನಗರ ವಿಮಾನ ನಿಲ್ದಾಣದ ಬಳಿ ಗಲಭೆಯಲ್ಲಿ ಬಿಎಸ್ಎಫ್ ಯೋಧನೊಬ್ಬನು...
ನಿಮ್ಮ ಅನಿಸಿಕೆಗಳು…