Monthly Archive: April 2018

8

ಅಪ್ಪನಿಗೊಂದು ನಮನ

Share Button

ಅಪ್ಪ ಎಲ್ಲರ ಬದುಕಿನಲ್ಲಿಯೂ ವಿಶೇಷವಾದ ವ್ಯಕ್ತಿ. ಅಪ್ಪನನ್ನು ನಾವು ಮರೆಯುವಂತೆಯೇ ಇಲ್ಲ. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಬಹು ಜತನದಿಂದ ಬೆಳಸುವ ಅಪ್ಪನಿಗೆ ಮಕ್ಕಳ ಮೇಲೆ ಅತೀವ ಪ್ರೀತಿ, ಮಮತೆ, ವಾತ್ಸಲ್ಯ ವಿಪರೀತ ಕಾಳಜಿ . ಮಕ್ಕಳ ಸುಂದರ ಬದುಕಿಗಾಗಿ ಅವಿರತವಾಗಿ ಶ್ರಮಿಸುವ ಅಪ್ಪ, ಅದಕ್ಕಾಗಿ ಯಾವ ತ್ಯಾಗಕ್ಕು...

2

ಪ್ರೀತಿಯೆಂಬ ಮಾಯೆ‌..

Share Button

ಹೃದಯಗಳ ಕಣಿವೆಯಲ್ಲಿ ಪ್ರವಾಸ ಹೊರಟಿದ್ದೆ. ನನಗೊಂದು ಹೃದಯ ಡಿಕ್ಕಿ ಹೊಡೆಯಿತು. “ಅಬ್ಬಾ, ಯಾಕಿಷ್ಟು ಭಾರವಾಗಿದ್ದೀಯಾ?” ಹೊಡೆತದ ನೋವಿಗೆ ಕೇಳಿದೆ. “ಪ್ರೀತಿಯ ನೋವಿಗೆ ಭಾರವಾಗಿದ್ದೇನೆ.” ನಿಡುಸುಯ್ದು ಅದು ಹೇಳಿತು. ಮುಂದೆ ಹೋದಾಗ ಕಾಮನಬಿಲ್ಲಿನಂತೆ ವರ್ಣಮಯವಾಗಿ , ಚಿಟ್ಟೆಯಂತೆ ತೇಲುತ್ತಾ ಸಾಗುವ ಹೃದಯವನ್ನು ಕಂಡು ಆಶ್ಚರ್ಯದಿಂದ ಕಣ್ಣು ಬಿಟ್ಟು ನಿಂತಿದ್ದೆ....

8

ಬಾಯಿ ಹುಣ್ಣು !…ಹೇಗೆ ಉಣ್ಣಲಿ ಇನ್ನು?!

Share Button

ಇದು ಬಾಯಿ ಹುಣ್ಣು ಕಾಣಿಸಿಕೊಂಡಾಗ ಹಲವರ ಅಳಲು. ಬಾಯಿಯ ಒಳಭಾಗ(ನಾಲಿಗೆ,ವಸಡು,ಕೆನ್ನೆಯ ಒಳಭಾಗ ಹಾಗೂ ತುಟಿಯ ಒಳಭಾಗ) ದಲ್ಲಿಕಾಣಿಸಿಕೊಳ್ಳುವ ನೋವಿನಿಂದ ಕೂಡಿದ ಸಣ್ಣ ಗುಳ್ಳೆಗಳಿಗೆ ಬಾಯಿಹುಣ್ಣು (Mouth Ulcer) ಎನ್ನುವರು. ಒಂದರಿಂದ ಹಲವಾರು ಗುಳ್ಳೆಗಳು ಒಮ್ಮೆಲೇ ಕಾಣಿಸಿಕೊಳ್ಳಬಹುದು. ಏನನ್ನೂ ತಿನ್ನಲೂ,ಕುಡಿಯಲೂ ಹಾಗೂ ಮಾತನಾಡಲೂ ಆಗದಂತಹ ಪರಿಸ್ಥಿತಿ.ಸಾಧಾರಣವಾಗಿ ಏಳರಿಂದ ಹತ್ತು...

11

ತೇಲುವ ಆ ಮೋಡದ ಮೇಲೆ…

Share Button

ಪುಟ್ಟ ಹಳ್ಳಿಯಲ್ಲಿ ಬಾಲ್ಯ ಕಳೆದ ನಮಗೆ ಅಲ್ಲಿ ಆಗಿನ ಕಚ್ಚಾಮಣ್ಣಿನ ರಸ್ತೆಯ ಮೇಲೆ ವಿಪರೀತ ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ಲಾರಿ, ಬಸ್ಸುಗಳನ್ನು ನೋಡುವುದೇ ಆಧುನಿಕತೆಯ ಸಂಪರ್ಕ ಎನಿಸುತ್ತಿತ್ತು. ಬಾನಿನಲ್ಲಿ ಅಪರೂಪಕ್ಕೆ ಕಾಣಸಿಗುತ್ತಿದ್ದ ‘ಲೋಹದ ಹಕ್ಕಿ’ ವಿಮಾನದ ಸದ್ದು ಅಪ್ಪಿ-ತಪ್ಪಿ ಕೇಳಿಸಿದರೆ, ಮನೆಯಂಗಳಕ್ಕೆ ಓಡೋಡಿ ಬಂದು ಅದು ಕಾಣಿಸುವಷ್ಟೂ ದೂರ...

2

ಆಲ್ಬರ್ಟ್ ಐನ್ ಸ್ಟೈನ್ : ‘ದೇವರು ಪಗಡೆ ಆಡುವುದಿಲ್ಲ!’

Share Button

ತನ್ನ ಮರಣಕ್ಕೆ ಒಂದು ವರ್ಷ ಮೊದಲೇ, 1954 ರಲ್ಲಿ, ಐನ್ ಸ್ಟೈನ್ ತನ್ನ ನಿಡುಗಾಲದ ಗೆಳೆಯ ಲೀನಸ್ ಪೌಲಿಂಗ್ (ರಸಾಯನಶಾಸ್ತ್ರಜ್ಞ ಮತ್ತು ಎರಡುಬಾರಿ ನೋಬೆಲ್ ವಿಜೇತ) ಜೊತೆ ಒಂದು ಆತ್ಮೀಯ ಸಂಭಾಷಣೆಯಲ್ಲಿ ನಿರತರಾಗಿದ್ದರು. ಐನ್ ಸ್ಟೈನ್ ಅನ್ನುತ್ತಾರೆ, “ನನ್ನ ಜೀವನದಲ್ಲಿ ನಾನು ಮಾಡಿದ ಒಂದು ತಪ್ಪು ಏನೆಂದರೆ,...

0

ತಿಳಿದವರು ಹೇಳಿದ ಅಳಿಯದ ಮಾತು

Share Button

ಇಂದು ಅದೆಕೋ ಮಾಹಾಭಾರತದ ಒಂದು ಬಹು ಮುಖ್ಯ ಪಾತ್ರದ ನೆನಪಾಗುತ್ತಿದೆ.ತನ್ನಲ್ಲಿರುವ ಸ್ನೇಹಭಾವದಿಂದಲೇ ಪ್ರಸಿದ್ಧಿಯಾದ, ತನ್ನನ್ನು ನಂಬಿದವರಿಗಾಗಿ ಜೀವವನ್ನೇ ನೀಡಿದ ಆ ವ್ಯಕ್ತಿ ಬೇರಾರೂ ಅಲ್ಲ, ಆತನೇ ದುರ್ಯೋಧನ… ಇತ ಪಾಂಡವ ದ್ವೇಷಿಯಾದರು ಸಹ ಅರ್ಜುನನಿಗೆ ಸರಿ ಸಮಾನವಾಗಿ ನಿಲ್ಲಬಲ್ಲ ಕರ್ಣನ ವಿಧ್ಯೆಯನ್ನು ನೋಡಿ ಅದಕ್ಕೆ ತಕ್ಕಂತೆ ತನ್ನ...

2

ಎಷ್ಟೊಂದು ಚಂದ ಬಾಲ್ಯ 

Share Button

  ಎಷ್ಟೊಂದು ಚಂದ ಬಾಲ್ಯ ಮರೆಯಲು ಅದು ಅಸಾಧ್ಯ ಓಣಿಯ ಮಕ್ಕಳೆಲ್ಲರೂ ಸೇರಿ ಆಡುತ್ತಿದ್ದ ಗೋಲಿ ಲಗೋರಿ ಕೋಲಾಟ ಕಾಲ್ಚೆಂಡು ಸಾಧ್ಯವೇ ಮರೆಯಲು ಚಿನ್ನಿ ದಾಂಡು //ಎಷ್ಟೊಂದು// ಮಳೆ ಬೀಳುವ ಕ್ಷಣದಲಿ ನೆನೆದು ಕಾಗದ ದೋಣಿಯ ತೇಲಿ ಬಿಟ್ಟು ಮೈಕೈಯೆಲ್ಲ ಕೆಸರಾಗಲು ಅಮ್ಮನ ಏಟಿಗೆ ಅಳಲು  //ಎಷ್ಟೊಂದು...

2

ದುಬೈ: ‘ಸಂಕೀರ್ಣ’ ನೃತ್ಯ ವೈಭವ

Share Button

ದುಬೈಯ ಭಾರತೀಯ ದೂತಾವಾಸದ  ಸಭಾಂಗಣದಲ್ಲಿ  ಏಪ್ರಿಲ್ 13 ರ  ಸಂಜೆ ಜರುಗಿದ “ಸಂಕೀರ್ಣ”  ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮದ ಅತಿಥಿಗಳು, ಗುರು, ವಿದುಷಿ, ಶ್ರೀಮತಿ  ಸಪ್ನಾ  ಕಿರಣ್  ಹಾಗು  ಶ್ರೀ  ಕಿರಣ್  ಕುಮಾರ್  ಕದ್ರಿ ಯವರು ಸಾಂಪ್ರದಾಯಿಕ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು .   ನಾಟ್ಯ ದೇವಾ ನಟರಾಜನಿಗೆ ಭಕ್ತಿ ಪೂರ್ವಕ “ಪುಷ್ಪಾಂಜಲಿ“ಯೊಂದಿಗೆ ನಾಟ್ಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸಂಕೀರ್ಣದ ವಿದ್ಯಾರ್ಥಿನಿಯರುನಂತರ ವಿಘ್ನ ವಿನಾಶಕ ಗಣಪನನ್ನು ಗಣೇಶ ಕೌತುವಂ ,ಶಕ್ತಿಯನ್ನು ಕಾಳಿ ಕೌತುವಂ ಮೂಲಕ, ಥೊಡ್ಯಾ ಮಂಗಳಂ ನಲ್ಲಿ ಮಹಾವಿಷ್ಣುವನ್ನು, ಭಕ್ತ  ಕನಕದಾಸರ ಹಾಡಿನ ಮೂಲಕ ದೇವಿ ಸರಸ್ವತಿಯನ್ನು, ಪುರಂದರ ದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ” ದ  ಮೂಲಕ  ದೇವಿಲಕ್ಷ್ಮೀ ಗೆ ನಾಟ್ಯ ವಂದನೆ ಸಲ್ಲಿಸಿದರು . ಈ ಕಾರ್ಯಕ್ರಮದಲ್ಲಿ ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ...

1

ಬಾರದಿರು ಮತ್ತೊಮ್ಮೆ

Share Button

ಮತ್ತೊಮ್ಮೆ ಬಾರದಿರು ನನ್ನ ಮನಸಿನ ಮಂದಿರಕೆ ನೋವ ಸಿಡಿಲಿಗೆ ಒಡೆದು ಹೋಗಿಹ ಭಾವ ಕಂದರಕೆ. ನನ್ನ  ಭಾವದ ಭಿತ್ತಿಯ ತುಂಬಾ ನಿನ್ನ ವದನದ ಚಿತ್ರ ನಿನ್ನ ಕೇಳದೇ ನಾನೇ ಕಲ್ಪಿಸಿದ ನನ್ನ ಚಿತ್ತ ಸದನದ ಮಿತ್ರ. ನಿನಗೇಕೆ ಅರಿಯದಾಯ್ತು ನಾ  ನಿನ್ನ ಕಾಳಜಿ, ನೆನಪಿಗಿಟ್ಟ ಸಮಯದ ಮೀಸಲು. ಹಾಗಾಗಿಯೇ...

4

ಯುಗಾದಿಯ ದ್ವಿಪಾತ್ರ

Share Button

ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ. ಯುಗಾದಿಯ ವೈಶಿಷ್ಟ್ಯಃ– ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ. ಯುಗಾದಿಯಲ್ಲಿ ಎರಡು...

Follow

Get every new post on this blog delivered to your Inbox.

Join other followers: