Monthly Archive: July 2019
ಪೀಠಿಕೆ: ನಮ್ಮ ಕುಶಲ ಹಾಸ್ಯ ಪ್ರಿಯರ ಸಂಘದ ವತಿಯಿಂದ ಪ್ರವಾಸವೊಂದನ್ನು ಆಯೋಜಿಸುವ ಹೊಣೆಯಿಂದ ಸುಳ್ಯದಲ್ಲಿರುವ ತಮ್ಮನಿಗೆ ಫೋನಾಯಿಸಿದೆ. ಮಡಿಕೇರಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ. ಆಗಲೇ ತಿಳಿಸಿದ ವಿಷಯವಾಗಿತ್ತು, ಅವನು ಹೋಗುತ್ತಿರುವ ಈಶಾನ್ಯ ಭಾರತದ ಪ್ರವಾಸ. “ನೀನೂ ಯಾಕೆ ಬರಬಾರದು, ಸೀಟಿದೆಯಾ ಎಂದು ವಿಚಾರಿಸುವೆ” ಎಂದಾಗ ಮನಸ್ಸು ಖುಷಿ ಗೊಂಡಿದ್ದು...
1) ಜಾತಿ ಜಾತಿ ಅಂತಾ ಬಡಿದಾಡು ಮಂದಿ ಕೋತಿ ಹಂಗ ಆಡತಾರ ಜಾತಿ ಜಾತಿ ಅನ್ನದವರು ಎದೆಯೊಳಗ ಪ್ರೀತಿ ತುಂಬಿಕೊಂಡಾರ. . (2) ನಿನ್ನ ನೋಡಿ ನೋಡಿ ನನ್ನ ಕಣ್ಣು ಬಿದ್ದು ಹೋಂಟಾವು ಆ ನನ್ನ ಕಣ್ಣಾಗ ನಿನ್ನ ಪ್ರೀತಿ ಅನ್ನುದು ಹೊಳ್ಳ್ಯಾಡತಾವು . (3) ನಿನ್ನ...
ಹಕ್ಕಿಯಾಗಲೆ ಆಗಸವನಳೆಯಲು, ಚುಕ್ಕಿಯಾಗಲೆ ಆಗಸವನಾಳಲು? ಅಳೆವ ಆಳ್ವ ಮಾತಂತಿರಲಿ, ಹಾಳಾಗದೆ ಉಳಿಯಬೇಕು.. ಮೋಡವಾಗಲೆ ಮಳೆ ಸುರಿಸಲು, ಆವಿಯಾಗಿ ಸಾಗರನ ಎದೆಯಿಂದ? ಹನಿಯಾಗುವುದು, ಮಳೆಯಾಗುವುದು ಅಂತಿರಲಿ, ನದಿಯಾಗಿ ಉಳಿಯಬೇಕು… ಹೂವಾಗಲೆ ಜಗದ ಮೆಚ್ಚುಗೆಗೆ, ಹಣ್ಣಾಗಲೇ ಮತ್ತೆ ರುಚಿಯ ಹೆಚ್ಚುಗೆಗೆ? ಹೂವಾಗಿ ಹಣ್ಣು ಆಗುವುದು ಅಂತಿರಲಿ ಮಾಗಬೇಕು – ಮರವಾಗಬೇಕು.....
ವೃದ್ಧಾಪ್ಯ ಬಂದಂತೆ ಸಹಜವಾಗಿ ಮನುಜನಿಗೆ ಮರೆವು ಬರುತ್ತದೆ. ಆದರೆ ಕೆಲವರಿಗೆ ಅಕಾಲದಲ್ಲೂ ಮಿತಿತಪ್ಪಿ ಮರೆವು ಬರುವುದನ್ನು ಕಾಣುತ್ತೇವೆ. ಒಂದು ಕಾರ್ಯಕ್ರಮದಲ್ಲಿ ಕೆಲವಾರು ಹೆಂಗಳೆಯರು ಸೇರಿದಲ್ಲಿ ಮರೆವಿನಬಗ್ಗೆ ತಮ್ಮ ತಮ್ಮ ಅನುಭವವನ್ನ ಹಂಚಿಕೊಳ್ತಾರೆ. ಕೆಲವರ ಅನುಭವ ಓದಿ— ನನಗೆ ಇತ್ತೀಚಿಗೆ ಕಂಡಾಬಟ್ಟೆ ಮರೆವು ನೋಡಿ!. .ಏನಾದ್ರೂ ಒಳಗಿಂದ ತರುವುದಕ್ಕೆಂದು...
ಕೂರದಿರು ಮೂಲೆ ಗುಂಪಾಗಿ ಮಂಕು ಬಡಿದಂತೆ , ಬದುಕು ಸದಾ ಪ್ರವಾಹಿ ಹರಿಯೋ ನದಿಯಂತೆ . ನಿಜ …. ಒಂಟಿ ಕೈಯ್ಯಿಂದ ತಟ್ಟಲಾಗದು ಚಪ್ಪಾಳೆ, ಮನ ಬಯಸುವುದು ಆಸರೆ ತುಸು ದೂರ ಸಾಗುವಾಗ ಬಿಸಿಲು ಸರಿದು ಇಳಿ ಸಂಜೆ ಕಾಲಿಡೋ ವೇಳೆ . ಬದುಕಾಗದಿರಲಿ ನಿರೀಕ್ಷೆಗಳ ಆಗರ,...
ಅಮೇರಿಕಾದಲ್ಲಿ ನಾವಿದ್ದ ಮನೆಯಿಂದ ಮೊಮ್ಮಗನ ಶಾಲೆಗೆ ಹೆಚ್ಚೇನೂ ದೂರವಿಲ್ಲದಿದ್ದರೂ, ನಡುವೆ ಸಿಗುವಂತಹ ದೊಡ್ಡದಾದ ಹೈವೇ ನನ್ನನ್ನು ಅಧೀರಳನ್ನಾಗಿಸುವುದಂತೂ ನಿಜ. ಐದಾರು ಲೇನ್ ಗಳಲ್ಲಿ ರಾಮಬಾಣದಂತೆ ಅತೀ ವೇಗವಾಗಿ ರಪ ರಪನೆ ಚಲಿಸುವ ನೂರಾರು ಕಾರುಗಳನ್ನು ನೋಡುವಾಗ, ಅದನ್ನು ನೋಡಿ ಖುಷಿ ಪಡುವ ಬದಲು ನನಗೆ ಹೆದರಿಕೆಯೇ ಜಾಸ್ತಿಯಾಗುತ್ತಿತ್ತು....
ಬೆಳಗ್ಗೆದ್ದ ಕೂಡಲೇ ಹಾಲು ಮತ್ತು ಪೇಪರ್ ಬಂದಿದೆಯಾ ನೋಡುವಾ ಅಂತ ಬಾಗಿಲು ತೆರೆದು ಮನೆಯ ಹೊರಗೆ ಬಂದೆ. ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡ ವ್ಯಕ್ತಿಯೊಬ್ಬರು ನಮ್ಮನೆಯ ಗಿಡಗಳಲ್ಲಿ ಅರಳಿದ ಹೂವುಗಳನ್ನು ಕೊಯ್ಯುತ್ತಿದ್ದರು. ನನ್ನನ್ನು ನೋಡಿದ ತಕ್ಷಣ ತನಗೇನೂ ಗೊತ್ತಿಲ್ಲದವರಂತೆ ನಟಿಸುತ್ತಾ ಮುಂದೆ ನಡೆದರು. ನಾನೂ ಏನೂ ಹೇಳಲಿಲ್ಲ....
ಏಕೆ ಈ ಮುನಿಸು ಓಡುವ ಮೋಡಗಳೇ ನಾಲ್ಕು ಹನಿಯ ಚೆಲ್ಲುವ ಮನಸು ನಿಮಗಿಲ್ಲವೇಕೆ ಬಾಯಾರಿದ ಒಡಲು ಬೇಡಿದೆ ಬರಿದಾದ ಎದೆಯ ತಣಿಸಬಾರದೆ ಬಿರಿದ ಭೀಕರ ಬರದ ಬೇಗೆಯ ತಡೆಯಲು ನೀ ಬರಬಾರದೆ ಆಷಾಡವೂ ಕಳೆದುಹೋಯ್ತು ಆದರೂ ಒಂದು ಹನಿಯ ಸುಳಿವಿಲ್ಲ ಮೇವಿಲ್ಲದೆ ನೀರಿಲ್ಲದೆ ಬಳಲಿದ ಜೀವಗಳಿಗಿನ್ನು ಉಳಿಗಾಲವಿಲ್ಲ...
ಈಗಿನ ಒಡಿಶಾ ರಾಜ್ಯದ ಭುವನೇಶ್ವರದಿಂದ 64 ಕಿ.ಮೀ ದೂರದ ಕೋನಾರ್ಕದಲ್ಲಿರುವ ಸೂರ್ಯ ದೇವಾಲಯವು , ಅದ್ಭುತ ವಾದ ಶಿಲ್ಪವೈಭವಕ್ಕೆ ಹೆಸರುವಾಸಿಯಾಗಿದೆ. ಸೂರ್ಯನು ಏಳು ಕುದುರೆಗಳಿಂದ ಒಯ್ಯಲ್ಪಡುವ 24 ಚಕ್ರಗಳುಳ್ಳ ರಥವನ್ನೇರಿ ಬರುವಂತೆ ಕಟ್ಟಲಾದ ಭವ್ಯ ಮಂದಿರವಿದು. ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಗಂಗ ವಂಶದ...
ಗೋರಿಯಲ್ಲಡಗಿ ಕೂತರೂ ಎಲುಬಿನ ಚೂರುಗಳು ಪೂರ್ತಿ ಮಣ್ಣಾಗಿಲ್ಲ. ನಡುವಯಸ್ಸಿನ ಬಿಳಿಗೂದಲುಗಳು ಮೊಳೆತು ಚಿಗುರುತ್ತಿದ್ದರೂ ಭೂಮಿಯಾಳದ ಒಲ್ಮೆ ಮರಿದುಂಬಿಯೇ… ಜರಿನೂಲು, ರೇಷ್ಮೆಯ ನುಣುಪು ಎಳೆಗಳು, ಹೂ ಪಕಳೆಗಳು ತಿಂಗಳನ ತಂಪು ಬುಟ್ಟಿಯ ಅಲಂಕರಿಸುತ್ತವೆ. ಹೃದ್ಗೋಚರ ದೀರ್ಘಕದಲ್ಲಿ ಪಡಿಮೂಡಿದ ಮಂಜಿಷ್ಠ ಪದೇ ಪದೇ ಸೆಳೆಯುತ್ತದೆ ಕೊರೆಯುತ್ತದೆ, ಬಸವಳಿಸುತ್ತದೆ. ನಯನ ದ್ವಯಗಳ...
ನಿಮ್ಮ ಅನಿಸಿಕೆಗಳು…