Daily Archive: September 10, 2020

4

ಆಗಸದಷ್ಟು ಹರವು 

Share Button

ಮನೆಯಮುಂದೆ ರಂಗೋಲಿಯಂತೆ ಮುಗ್ಧವಾಗಿ ಯಾವುದೇ ಮಾತಿಗು ಕಿರುನಗೆಯನ್ನೇ ಉತ್ತರನೀಡುತ್ತೀಯ ತೋಟಗಳಲ್ಲಿ ತಿರುಗಾಡುತ್ತಾ ಕುಸುಮ ಲಾಲಿತ್ಯವನ್ನು ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೀಯ ಇಡೀ ಜೀವನಕ್ಕಾಗುವಷ್ಟು ನಿನ್ನದೊಂದು ಪುಟ್ಟ ಪ್ರಪಂಚವೆಂದು ಮತ್ತಾವುದೋ ದೊಡ್ಡ ಪ್ರಪಂಚವನ್ನು ತಿಳಿಯಬೇಕೆಂದು ಸುದೀರ್ಘ ಪಯಣಕ್ಕೆ ಮುಂದಾಗುತ್ತೀಯ ಬೆಳಕನ್ನು ಜೊತೆಯಾಗಿಸಿಕೊಂಡು ತಾರೆಗಳ ಆಸರೆಯಿಂದ… ಆಗಸದಷ್ಟು ಹರವಿನೊಂದಿಗೆ ದಿಗಿಲಿನ ಸುತ್ತೂ ಬೇಲಿಯ ಹಾಕಿ ಸಂಭ್ರಮದಿಂದ ಮುನ್ನಡೆಯುತ್ತೀಯ...

7

ಚೈತನ್ಯಮಯ ಚ್ಯವನ

Share Button

ತಪ್ಪು ಮಾಡಬಾರದು ಅದು ರಾಕ್ಷಸ ಗುಣ.ಒಂದು ವೇಳೆ ತಪ್ಪು ಮಾಡಿದರೆ ತಪ್ಪೆಂದು ತಿಳಿದಾಗ ಪಶ್ಚಾತ್ತಾಪ ಪಟ್ಟುಕೊಳ್ಳುವುದು ಮಾನವೀಯ ಗುಣ. ಅದಕ್ಕೂ ಮಿಗಿಲಾಗಿ ತಪ್ಪಿಗೆ ಪ್ರಾಯಶ್ಚಿತವಾಗಿ ತಾನೇ ಸ್ವತಃ ಶಿಕ್ಷೆ ಅನುಭವಿಸಿ ತೃಪ್ತಿ ಪಟ್ಟುಕೊಳ್ಳುವುದು ಜೀವ ದೇವ ಗುಣವಂತೆ. ಹಾಗೆಯೇ ತನಗೇನಾದರೂ ತೊಂದರೆಯಾದರೆ…!  ಬೇರೆಯವರಿಂದ ಅಪಘಾತವೋ ಅಂಗ ಊನತೆಯೋ...

10

ಬಸ್ ಪಯಣದಲ್ಲಿ ಚಿಂತನ ಮಂಥನ

Share Button

2020  ಮಾರ್ಚ್ 11 ರಂದು ಬೆಳಗ್ಗೆ   ತಿಂಡಿ ತಿಂದು 8 ಗಂಟೆಗೆ ಮೈಸೂರು ಮನೆಯಿಂದ ಹೊರಟು ಮಂಗಳೂರಿಗೆ ಹೋಗುವ ಬಸ್ ಹತ್ತಿದೆ. 8.30 ಕ್ಕೆ ಹೊರಟ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟೇ ಸಿಕ್ಕಿದ್ದು ಖುಷಿ ಎನಿಸಿತು. ಕಿಟಕಿಗೆ ತಲೆ ಆನಿಸಿ ಹೊರಗೆ ನೋಡುತ್ತಲಿದ್ದರೆ ಬೇರೊಂದು ಲೋಕ ಕಾಣುತ್ತದೆ....

4

‘ತೆರೆದಂತೆ ಹಾದಿ’ ಪುಸ್ತಕ ಪರಿಚಯ

Share Button

ಪುಸ್ತಕ : ತೆರೆದಂತೆ ಹಾದಿ ಲೇಖಕರು: ಜಯಶ್ರೀ ಕದ್ರಿ ಪ್ರಕಾಶನ:ಕೃತಿ ಆಶಯ ಪಬ್ಲಿಕೇಶನ್ ಬೆಲೆ:150 ಸುಧಾ ಮೂರ್ತಿಯವರ ‘ಯಶಸ್ವಿ’ ಕಾದಂಬರಿ ಮತ್ತು ಮಿಷನ್ ಮಂಗಲ್ ಸಿನಿಮಾ ನೋಡಿದೆ. ಅದರಲ್ಲೇನು ವಿಶೇಷ,  ಸಾಮ್ಯತೆ ಎಂದು ಕೇಳುವೀರೇನೋ? ನನಗೆ ಮಹಿಳೆಯರು ತಮ್ಮ ಕಾರ್ಯಕ್ಷೇತ್ರದಲ್ಲಿ, ಅಲ್ಲದೇ ಹೌಸ್ ವೈಫ್  ಆದರೂ ಮನೆಯಲ್ಲಿ ಮಾಡುವ...

5

ಕವಿನೆನಪು 11 : ಜಿ ಪಿ ರಾಜರತ್ನಂ ಹಾಗೂ ಕೆ ಎಸ್ ನ ಆತ್ಮೀಯತೆ

Share Button

ಒಂದು ಕವಿಗೋಷ್ಠಿಯಲ್ಲಿ ನಮ್ಮ ತಂದೆಯವರು ಕವಿತಾವಾಚನ ಮಾಡಿದಾಗ ಜನರ ಮೇಲೆ ಅದು ಅಷ್ಟೊಂದು ಪರಿಣಾಮ ಬೀರಿರಲಿಲ್ಲ.ಇಷ್ಟೊಂದು ಒಳ್ಳೆಯ ಪದ್ಯದ ಭಾವ ಸಂವಹನವಾಗದೆ ಹೋದುದನ್ನು ಗಮನಿಸಿದ ರಾಜರತ್ನಂ ತಕ್ಷಣ ಎದ್ದು ನಿಂತು “ಇದೊಂದು ಉತ್ತಮ ಪದ್ಯ. ಇದನ್ನು ಈಗ ನಾನು ಓದುತ್ತೇನೆ. ಇಲ್ಲಿ ಬರುವ ಪದುಮ ನನ್ನ ಕವನಗಳಲ್ಲಿ ಬರುವ...

8

ಪುಸ್ತಕ ನೋಟ: ಮೇಘದ ಅಲೆಗಳ ಬೆನ್ನೇರಿ

Share Button

ಶ್ರೀಮತಿ ಹೇಮಮಾಲಾ ಬಿ. ಮೈಸೂರು ಇವರು ಬರೆದ “ಮೇಘದ ಅಲೆಗಳ ಬೆನ್ನೇರಿ” ಅನ್ನುವ ಪ್ರವಾಸಕಥನದ ಪುಸ್ತಕದ ಬಗ್ಗೆ ಕಿರುವಿಮರ್ಶೆ.“ಲಿವಿಂಗ್ ರೂಟ್ ಬ್ರಿಡ್ಜ್” (ಅಂದರೆ ಜೀವಂತ ಸೇತುವೆಗಳು) ಬಗ್ಗೆ ಕೇಳಿರುವಿರಾ? ಕಾಡ ತೊರೆಗಳನ್ನು ದಾಟಲು ಜೀವಂತ ಸೇತುವೆಗಳು. ಗುಡ್ಡಗಾಡು ಜನರ ಬುದ್ಧಿವಂತಿಕೆ ಹಾಗೂ ಪ್ರಕೃತಿಯ ಸಂಪನ್ನತೆ ಒಟ್ಟಿಗೆ ಮೇಳೈಸಿ...

3

ಸೋರುಗಲ್ಲದ ಚಂದ್ರಮ

Share Button

ಹಾಲುಗಲ್ಲದ ಚಂದ್ರಮಗೆ ಸೋರುವ ಹುಣ್ಣೆ? ರಕ್ತ ಲಸಿತ ಬೆಳದಿಂಗಳೆ ಈ ಬನದಲ್ಲಿ? ಎಷ್ಟು ಮುದ್ದಾಗಿದ್ದಾನೆ ಈ ಸೋರುಗಲ್ಲದ ಚಂದ್ರಮ! ಬಿಮ್ಮಗೆ ಬಿಗಿವ ಕಡಲಮುಸುಡಿಗೆ ಮಂಗಳಾರತಿ ಬೆಳಗತಕ್ಕವನೆ ಈತ! ಅಲ್ಲಲ್ಲ, ಅವನ ಹಿಂದೆ ಮುಂದೆಯೆ ಉರಿವ ಮತ್ಸರದ ಮಡದಿಯರು ಶಪಿತ ಕೆನ್ನೆಗೆ ಮುತ್ತುಗಳ ಮಳೆ ಜಡಿದು ಅಲ್ಲ ,...

7

ಭೂಲೋಕದ ಕಲ್ಪವೃಕ್ಷ..!

Share Button

ಬಹು ಆಹಾರಪ್ರಿಯರಾದ  ನಾವು ತೆಂಗಿನಕಾಯಿ ಹಾಲು ಹಾಕದ ಪಾಯಸವನ್ನು ಊಹಿಸುವುದು ಸ್ವಲ್ಪ ಕಷ್ಟ. ತೆಂಗಿನಕಾಯಿ ರುಬ್ಬಿ ಹಾಕಿ ಮಾಡುವ ನೂರಾರು ವೈವಿಧ್ಯಮಯ ಅಡುಗೆಗಳ ಸವಿರುಚಿ ಉಂಡ ನಾಲಿಗೆಯು ಬೇರೆ ತರಹದ ಅಡಿಗೆಗೆ ಒಗ್ಗಿಕೊಳ್ಳಲಾರದು. ತೆಂಗು ಬಳಸಿ ತಯಾರಿಸುವ     ಯಾವುದೇ ತರಕಾರಿಯ ಸಾಂಬಾರ್, ಮಜ್ಜಿಗೆಹುಳಿ, ಪಲ್ಯ, ವಿವಿಧ ಎಲೆಗಳ...

16

ಕಲ್ಪವೃಕ್ಷವನ್ನು ನೆನೆಯುತ್ತಾ…

Share Button

ದಕ್ಷಿಣಭಾರತದ ಹೆಚ್ಚಿನ ಅಡುಗೆಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು. ಬೆಳಗಿನ ಉಪಾಹಾರಗಳಾದ ಇಡ್ಲಿ, ದೋಸೆಗಳ ಜೊತೆಗೆ ಕಾಯಿಚಟ್ಣಿ ಇದ್ದರೆ ಸೊಗಸು. ಕೋಸಂಬರಿ, ಪಲ್ಯಗಳ  ರುಚಿ ಹೆಚ್ಚಿಸಲು ತೆಂಗಿನಕಾಯಿಯ  ತುರಿಯ ಅಲಂಕಾರ ಬೇಕೇ ಬೇಕು.   ಸಾಂಬಾರ್ , ಮಜ್ಜಿಗೆ ಹುಳಿ, ಕೂಟು ಇತ್ಯಾದಿ ವ್ಯಂಜನಗಳಿಗೆ...

Follow

Get every new post on this blog delivered to your Inbox.

Join other followers: