Daily Archive: January 14, 2021
ಸಮೃದ್ಧ ಸಂಕ್ರಾಂತಿ
ದೇಹ ತ್ಯಜಿಸುವ ಸುಮುಹೂರ್ತ ಸಾಮಿಪ್ಯ ಅದುವೇ ಉತ್ತರಾಯಣ ಪುಣ್ಯಕಾಲ! ಶರಶಯ್ಯೆಯಲ್ಲಿ ಹರಿಸ್ಮರಣೆ!! ಮಹಾಭಾರತದಿ ಇಚ್ಚಾಮರಣಿ ಭೀಷ್ಮ..!! ತೆರೆದಿರಲಂದು ನಾಕದ್ವಾರ….!!! ಮತ್ತಿಲ್ಲಿ ಉತ್ತಿ ಬಿತ್ತಿದ ಬೆಳೆ ಬೆಳೆದು ಹಸನಾಗಿ ರೈತನೆದೆಯಲಿ ಸುಗ್ಗಿ! ಹರುಷದಿ ಲೋಗರ ಮನ ಹಿಗ್ಗಿ!! ಇಳೆ ಬೆಳಗಿ ಮಳೆ ಸುರಿಸಿ ಜೀವೋತ್ಪತ್ತಿ ಸೂರ್ಯದೇವನ ಹಬ್ಬ !ಬೀರಿ...
ವಿಶ್ವ ಮಾನವ
ಗುರು ಪರಮಹಂಸರ ಶಿಷ್ಯ, ವಿಶ್ವ ಮಾನವ ಸ್ವಾಮಿ ವಿವೇಕಾನಂದರಿಗೆ ಗೌರವ ನುಡಿ ನಮನ ಯುವಪಡೆಗೆ ನಿಮ್ಮ ನುಡಿಗಳೇ ಸಾಧನ ವಿಶ್ವ ಸಂದೇಶ ಸಾರಿದ ವೀರ ಸನ್ಯಾಸಿಯ ಚಿಂತನ ಯುವಪೀಳಿಗೆಯ ಬಡಿದಬ್ಬಿಸಿದ ದಿವ್ಯವಾಣಿಯು ಜನಮಾನಸ ಗೆದ್ದ ಕಂಚಿನ ಕಂಠದ ಧ್ವನಿಯು ಮನದ ಕತ್ತಲೆಯನು ಓಡಿಸುವ ಜ್ಞಾನದೀವಿಗೆಯು ಸಾಧನೆಯ ಮಂತ್ರ...
ಕವಿ ಕೆ ಎಸ್ ನ ನೆನಪು 28 : ಪ್ರವಾಸಗಳ ಮೋಹ
1970 ರಲ್ಲಿ ನಿವೃತ್ತಿಯಾದ ನಂತರ ನಮ್ಮ ತಂದೆಯವರಿಗೆ ಪ್ರವಾಸ ಒಂದು ಆದ್ಯತೆಯಾಗಿಬಿಟ್ಟಿತ್ತು.ಹಾಗೆಂದುಸೇವೆಯಲ್ಲಿದ್ದಾಗ ಪ್ರವಾಸಗಳಿಗೆ ಹೋಗುತ್ತಿರಲಿಲ್ಲವೆಂದಲ್ಲ. ಆಕಾಶವಾಣಿ ಕವಿ ಸಮ್ಮೇಳನ, ಸಾಹಿತ್ಯ ಸಮ್ಮೇಳನ,ಇಂಥವುಗಳಿಗೆ ಅನಿವಾರ್ಯವಾಗಿ ಹೋಗಬೇಕಾದ ಪ್ರಸಂಗ ತಪ್ಪಿಸುವಂತಿರಲಿಲ್ಲ. ಕರಾವಳಿಯ ನಂಟು ಕರಾವಳಿ ಪ್ರದೇಶಗಳಿಗೆ ಪ್ರವಾಸ ಹೋಗುವುದು ಅವರಿಗೆ ಅತ್ಯಂತ ಪ್ರಿಯವಾದವಿಷಯವಾಗಿತ್ತು. ಪೇಜಾವರ ಶ್ರೀಗಳು ,ಬನ್ನಂಜೆ ಗೋವಿಂದಾಚಾರ್ಯ, ಎಮ್ ಜಿ...
ಸುರಹೊನ್ನೆಯ ಜೊತೆಗಿನ ನನ್ನ ಒಡನಾಟ, ಪಯಣ
ಫೇಸ್ ಬುಕ್ ಪ್ರಪಂಚಕ್ಕೆ ಕಾಲಿಟ್ಟಾಗ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಪರಿಚಯವಾದ ಮೊದಲ ಸಾಥಿಯೆ ಸುರಹೊನ್ನೆ ಅಂತರ್ಜಾಲ ಪತ್ರಿಕೆ. ಇಲ್ಲಿ ಮೊದಲು ಗಮನ ಸೆಳೆದದ್ದು ಲೋಗೋದಲ್ಲಿ ಇರುವ- “ಸುರಹೊನ್ನೆ ಕನ್ನಡ ಅಕ್ಷರದ ಮೇಲೆ ಅಕ್ಕರೆ ಉಳ್ಳವರಿಗಾಗಿ ಮೀಸಲಾದ ಜಾಲತಾಣ” ಈ ವಾಕ್ಯಗಳು. ಈ ಪತ್ರಿಕೆಯ ಅಚ್ಚುಕಟ್ಟುತನ, ಶಿಸ್ತು, ಹೊಸಬರ ಬರಹಗಳಿಗೆ ಆಸ್ಥೆಯಿಂದ...
ಸವಿಯಾದ ಸುರಹೊನ್ನೆ
ದೂರವಾಣಿ ಇಲಾಖೆಯಲ್ಲಿ ವೃತ್ತಿಪರಳಾಗಿದ್ದು ಅಲ್ಲಿಂದ ನಿವೃತ್ತಳಾದ ಬಳಿಕ ಏನು ಮಾಡಬೇಕೆಂದು ತೋಚಲಿಲ್ಲ. ನಮ್ಮ ಗೆಳತಿ ಹೇಮಮಾಲಾರು, ತಾವು ಉದ್ಯೋಗದಲ್ಲಿದ್ದ ಅಂತರಾಷ್ಟ್ರೀಯ ಕಂಪೆನಿಯಿಂದ ಸ್ವಯಂನಿವೃತ್ತಿ ಪಡೆದ ಬಳಿಕ ಪ್ರವೃತ್ತಿಯಾಗಿ ಅವರಿಷ್ಟದ “ಸುರಹೊನ್ನೆ” ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ನಡೆಸುತ್ತಿರುವ ಬಗ್ಗೆ ತಿಳಿಸಿದರು. ಅದರಲ್ಲಿ, ಆರಂಭಿಕ ಬರಹಗಾರರಿಗೆ ಪ್ರೋತ್ಸಾಹ ನೀಡುವ...
ಹುಬ್ಬಳ್ಳಿ ಪರಿಚಯ
ನಮಸ್ಕಾರ್ರಿ ಬರ್ರಿ ಬರ್ರಿ ತಣ್ಣ ನೀರ ಅದಾವ ತೊಗೊರಿ ಕೈಕಾಲ ಮಾರಿ ತೊಕ್ಕೊರಿ ಬಿಸಲಾಗ ಬಂದೀರಿ. ಕುಂದರ್ರಿ ಆರಾಮ ಮಾಡ್ರಿ. ಚಹಾ ಕುಡಿತಿರೇನು? ಕೇಳೊದೇನ ಬಂತು ನಮ್ಮ ಹುಬ್ಬಳ್ಳಿಗ ಬಂದಮ್ಯಾಲ ಚಹಾ ಕುಡಿಯಾಕಬೇಕ… ಮತ್ತ ಬರೆ ಚಹಾ ಅಷ್ಟ ಅಲ್ಲ ಬಿಸಿ ಬಿಸಿ ಚಹಾದ ಜೋಡಿ ಗರಮಾ ಗರಮ್ ಮಿರ್ಚಿ ಭಜಿ, ಘಮಘಮ ಗಿರ್ಮಿಟ್ ಇದ್ರ...
ನಿಮ್ಮ ಅನಿಸಿಕೆಗಳು…