Daily Archive: April 22, 2021
‘ಭಾಲ್ಕಾ ತೀರ್ಥ್’ ನಿಂದ 4ಕಿಮೀ ದೂರದಲ್ಲಿ ಗುಜರಾತಿನ ಪ್ರಸಿದ್ಧವಾದ ಸೋಮನಾಥ ಕ್ಷೇತ್ರವಿದೆ. ಸಂಜೆಯ ವೇಳೆಗೆ ಸೋಮನಾಥ ತಲಪಿದೆವು. ಅರಬೀ ಸಮುದ್ರ ತೀರದಲ್ಲಿ ಕಂಗೊಳಿಸುವ ಭವ್ಯವಾಗಿರುವ ಮಂದಿರವಿದು. ಈ ದೇವಾಲಯಕ್ಕೆ ಹೋಗುವ ಮುನ್ನ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಕೈಯಲ್ಲಿ ಬ್ಯಾಗ್ , ಮೊಬೈಲ್ ಇತ್ಯಾದಿ ಇರಬಾರದು ಎಂಬ ನಿಯಮವಿದೆ. ಪುಟ್ಟ...
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ ಬರುತ್ತದೆ…ಈ ನಡುವೆ ಗೆಳತಿ ಸಂಧ್ಯಾಳೊಂದಿಗೆ ಒಡನಾಟ ,ಪ್ರವಾಸ ಶುರುವಾಯಿತು…ಅದೂ ಕೃತಕವೆನಿಸಿತು ..ಮುಂದಕ್ಕೆ ಓದಿ) ಶ್ರೀಕಂಠೇಶ್ವರನ ದೇವಸ್ಥಾನದ ಮುಂಭಾಗದಲ್ಲೇ ಕಾರು ನಿಂತಿತ್ತು. ಅದರಿಂದ ಇಳಿದ...
ಇಂಗ್ಲೆಂಡಿನ ಸೋಮರ್‌ಸೆಟ್ ಪ್ರಾಂತ್ಯದ ‘ಬಾತ್’ ನಗರದಲ್ಲಿರುವ ಬಿಸಿನೀರ ಬುಗ್ಗೆಯನ್ನು ಕಂಡಾಗ ಮನದಂಗಳದಲ್ಲಿ ತೇಲಿ ಬಂದದ್ದು ಹಿಮಾಲಯದ ತಪ್ಪಲಲ್ಲಿರುವ ಬಿಸಿನೀರಬುಗ್ಗೆಗಳು. ಯಮುನೋತ್ರಿ, ಕೇದಾರದಲ್ಲಿರುವ ಗೌರೀಕುಂಡ, ಬದರೀನಾಥ, ಮಣಿಕರ್ಣಿಕ ಇತ್ಯಾದಿ. ಇಂಗ್ಲೆಂಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ‘ರೋಮನ್ ಬಾತ್’ ನೋಡಲು ಹೊರಟಾಗ ಅಲ್ಲಿನ ಸ್ಥಳ ಪುರಾಣವನ್ನು ಗೂಗಲ್ ಸರ್ವಜ್ಞನಿಂದ ಕೇಳಿ...
ನಾನು ಬಾಲಕನಾಗಿದ್ದಾಗ ಒಮ್ಮೆ ನಮ್ಮ ಮನೆಗೆ ಬಂದ ತಂದೆಯ ಚಿಕ್ಕಪ್ಪ ಪುಟ್ಟರಾಮಯ್ಯ ಬಾಗಿಲ ಹತ್ತಿರ ನಿಂತಿದ್ದ ನನ್ನನ್ನು ಕಂಡು ”ಅಚ್ಚಣ್ಣ ಮನೇಲಿ ಇದಾನೇನು?” ಎಂದು ಕೇಳಿದರು . ನನಗೆ ಅವರು ಯಾರನ್ನು ಕೇಳುತ್ತಿದ್ದಾರೆಂದು ಸ್ಪಷ್ಟವಾಗಲಿಲ್ಲ. ”ಯಾರು? “ಎಂದು ಕೇಳಿದೆ. “ಅದೇ ಕಣೋ ನಿಮ್ಮಪ್ಪ. ನಾವೆಲ್ಲ ಕೂಗೋದು...
ಅದೇನೋ ಚಿಕ್ಕವಯಸ್ಸಿನಿಂದಲೂ ನಾನು ಓದುವ ಶಾಲೆ ಮನೆಯಿಂದ ತುಂಬಾ ದೂರ. ಕಾಲೇಜು ಓದುವಾಗಲಂತೂ ಒಂದೂರಿಂದ ಮತ್ತೊಂದೂರಿಗೆ ಓಡಾಟ. ನಾವಿದ್ದ ಊರಿನ ಮನೆಯಿಂದ ರೈಲ್ವೇಸ್ಟೇಷನ್ ಸಾಕಷ್ಟು ದೂರ. ಮತ್ತು ಕಾಲೇಜಿದ್ದ ಊರಿನ ಸ್ಟೇಷನ್‌ನಿಂದಲಂತೂ ನಮ್ಮ ಕಾಲೇಜ್ ಸಿಕ್ಕಾಪಟ್ಟೆ ದೂರ. ಹಾಗಾಗಿ ಮೊದಲಿನಿಂದಲೂ ನನ್ನದು ಓಡು ನಡಿಗೆ. ನನ್ನ ನಡಿಗೆಯ ಅಪಾರ ವೇಗವನ್ನು...
(ಋ) ವಿಶಿಷ್ಟ ಜನಸಾಮಾನ್ಯ ಸ್ತ್ರೀಯರು ಸ್ವಾತಂತ್ರ್ಯ ಹೋರಾಟಗಾರ್ತಿಯರು: ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಂಚೆ ಕ್ರಿಸ್ತಪೂರ್ವದಿಂದಲೂ ಬಗೆ ಬಗೆಯಾದ ಹೋರಾಟದಲ್ಲಿ ಭಾಗವಹಿಸಿದ ಬಹುಮಂದಿ ಸ್ತ್ರೀಯರು ಸಮಾಜದ ಉನ್ನತ ವರ್ಗಕ್ಕೆ ಸೇರಿದವರು. ಹೆಚ್ಚಿನ ಸವಲತ್ತುಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪಡೆದ ಮನೆತನಕ್ಕೆ ಸೇರಿದವರು. ಇವರಿಗೆ ತಮ್ಮ ವ್ಯಕ್ತಿ-ವಿಶೇಷತೆಯನ್ನು...
ನಾ ಬರೆದ ಕವನ ನನ್ನದಲ್ಲ – ನನ್ನದು ಮಾತ್ರವಲ್ಲ ನನ್ನಂತೆ ಇರುವ ಮನಸುಗಳದು ನೋವಿಗೆ ಕಂಬನಿ ಹರಿಸುವುದ ಬಿಟ್ಟು ನನ್ನಂತೆ ಕವನ ಕಟ್ಟಿ ನೋವ ಮರೆಯುವ ಗುಟ್ಟು ತಿಳಿಯದ ಮೃದು ಮನದ ಮಾನಿನಿಯರು, ಅದಕ್ಕೆಂದೆ ನಾ ಬರೆವೆ ಕವನಗಳಾ,,, ಈ ಕವನಗಳು ನನ್ನದಲ್ಲ ನನ್ನದು ಮಾತ್ರವಲ್ಲ,,, ನನ್ನ...
ಮಟ ಮಟ ಮಧ್ಯಾಹ್ನ ಕಾದ ಕಡಲ ತೀರದಿ ಮಳಲ ಹಾಸಿನ ಮೇಲೆ ಮೂಡಿದ ಹೆಜ್ಜೆ ಗುರುತುಗಳು ಅಲೆಯ ರಭಸಕ್ಕೆ ಅಳಿಸಿಹೋಯಿತು ಬೆಸ್ತರ ಬಲೆಯ ಜಾಲದ ಕುಣಿಕೆಗೆ ಸಿಲುಕಿ ಜೀವ ತೆತ್ತ ಅಮಾಯಕ ಮೀನಿನ ಹಾಗೆ !! . ಪಶ್ಚಿಮ ದಿಗಂತದಲ್ಲಿ ಇಂಚಿಂಚಾಗಿ ಕರಗುವ ಕೆಂಪು...
ಮಜಲುಗಳನ್ನು ದಾಟಿ ಹೋದವರು ಬರುತ್ತಲೇ ಇದ್ದಾರೆ, ನೋಡಲು; ಮುಗಿಯಿತೇ? ಎಂದು ನಿಟ್ಟುಸಿರು ಬಿಟ್ಟರೆ ಮತ್ತಷ್ಟು ಜನರು ಬಂದಿದ್ದರು, ಬೇಡಲು; ಏನೆಂದು ಹೇಳಲಿ ಈ ಕಥೆಯ ಹೋದವರೇ ತಿರುಗಿ ತಿರುಗಿ ಬರುತ್ತಾರೆ, ಮಾಡಲು; ಚಣಕಾಲ ಕೂರುವ ಹಾಗಿಲ್ಲ, ನಿಲ್ಲುವ ಹಾಗಿಲ್ಲ ತಿರುಗಿದ ಚಕ್ರ ಇನ್ನಷ್ಟು ಜನರನ್ನು ತಂದಿತ್ತು, ಕರೆಯಲು;...
ಪುಸ್ತಕದ ಹೆಸರು :- ಊದ್ಗಳಿ ಕವಯಿತ್ರಿ :- ದಾಕ್ಷಾಯಣಿ ನಾಗರಾಜ ಮಸೂತಿ ಪ್ರಕಾಶಕರು :- ದುಡಿಮೆ ಪ್ರಕಾಶನ ತಮ್ಮ ಸಣ್ಣ ಸಣ್ಣ, ಆದರೂ ಆಕರ್ಷಕ ಹನಿಗವನಗಳ ಮೂಲಕ ಪರಿಚಿತರಾದವರು ದಾಕ್ಷಾಯಣಿಯವರು. ಈಗ ಅವರ ಕವನಗಳೆಲ್ಲವೂ ಪುಸ್ತಕ ರೂಪ ಪಡೆದು ಕೈ ಸೇರಿರುವುದು ಸಂತಸದ ವಿಚಾರ. ಈ ಕವನ ಸಂಕಲನಕ್ಕೆ...
ನಿಮ್ಮ ಅನಿಸಿಕೆಗಳು…