Daily Archive: October 14, 2021

10

ಡಾlಶಿವರಾಮ ಕಾರಂತರ ಬದುಕಿನ ಬಗ್ಗೆ ಸಂಕ್ಷಿಪ್ತ ಚಿತ್ರಣ ..

Share Button

ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗು ಪಡುವಂತಾಗುತ್ತದೆ. ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,. “….ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ...

7

ಬೀಗದಿರು-ಬಾಗದಿರು

Share Button

ಗೆದ್ದಾಗ ಎದೆಯುಬ್ಬಿಸಿ ಬೀಗದಿರುಸೋತಾಗ ತಲೆ ತಗ್ಗಿಸಿಬಾಗದಿರುಗೆಲುವು ಸೋಲುಗಳುಜೀವನದ ಅವಿಭಾಜ್ಯ ಅಂಗ ಗತಕಾಲದ ಕೆಟ್ಟದನು‌ಮತ್ತೆಂದು ನೆನೆಯದಿರುಸತ್ಯದ ದಾರಿಯಲ್ಲಿಎಂದೆಂದು ನಡೆಯುತಿರುತೊರೆಯದಿರು ಎಂದೆಂದುಸಜ್ಜನರ ಸಂಘ ಮಿತ್ರ ದ್ರೋಹವನುಎಸಗದಿರುದ್ವೇಷಾಸೂಯೆಗಳಬೆಳಸದಿರುಶುದ್ಧ ಮಾಡುತಲಿರುನೀ ನಿನ್ನಂತರಂಗ ಕಷ್ಟಗಳನೆದುರಿಸುತಿರುಇಷ್ಟಗಳನರಸುತಿರುಉಪಕಾರಗಳನೆಂದುಮರೆಯದೆ ನೆನೆಯುತಿರುಗೊತ್ತಿದ್ದೂ ಸೇರದಿರುದುರ್ಜನರ ಸಂಘ ಏನಾಗುವುದೋಏನಾಗದಿರುವುದೋಮಾನವೀಯತೆಯಮರೆಯದಿರುಇರೋವರೆಗೂಕೊನೆಯುಸಿರುಅದತಾನೆ ಬಯಸುತಿದೆಸರ್ವ ಜನಾಂಗ -ನಟೇಶ +7

8

ಕರುನಾಡ ಮನೆಮನದ ಹಬ್ಬ..

Share Button

ವಿಜಯನಗರ ಅರಸರ ಕಾಲದ ನವಮಿ ದಿಬ್ಬವುಮೈಸೂರ ರಾಜ ಒಡೆಯರ್ ಕಾಲದಿ ದಸರವುಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವುಕರುನಾಡ ಮನೆ ಮನಗಳಂಗಳದಿ ಸಡಗರವು. ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿಅಟ್ಟಹಾಸದಿ ಮೆರೆದ ಮಹಿಷಾಸುರನ ಸಂಹಾರಿಕಪ್ಪು ಮಣ್ಣಿನ ಜನರ ಭಕ್ತಿಗೆ ಒಲಿದ ಮಹಾಮಾಯಿಕನ್ನಡಿಗರ ಅನಾವರತ ಪೊರೆಯುವ ಕರುಣಾಮಯಿ. ವಿಜಯ ದಶಮಿಯ ವೈಭವವ ಸವಿಯುವ...

11

ಕೌಟುಂಬಿಕ ಸಾಮರಸ್ಯ ಸಾರುವ ‘ಸಂಧಿಕಾಲ’, ಲೇ: ಶ್ರೀಮತಿ ವಸುಮತಿ ಉಡುಪ.

Share Button

ಶ್ರೀಮತಿ ವಸುಮತಿ ಉಡುಪರವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರು. ಇವರು ಹುಟ್ಟಿದ್ದು 18 ಏಪ್ರಿಲ್ರ 1948 ಲ್ಲಿ. ತಂದೆ ಶ್ರೀ ರಂಗಾಭಟ್ಟರು, ತಾಯಿ ಶ್ರೀಮತಿ ತ್ರಿಪುರಾಂಬ. ಇವರದ್ದು ಜಮೀನ್ದಾರಿ ಕುಟುಂಬ. ಇವರ ವಿದ್ಯಾಭ್ಯಾಸ ತಿರ್ಥಹಳ್ಳಿಯಲ್ಲಿ ಆಯಿತು. ಬಾಲ್ಯದಿಂದಲೇ ಕಥೆಗಳನ್ನು ಕೇಳುವ, ಸಿಕ್ಕಿದ ಕಥೆ ಪುಸ್ತಕಗಳನ್ನು ಆಸಕ್ತಿಯಿಂದ...

9

ದರ್ಪಣ- ಭೇಟಿಯ ಕ್ಷಣ

Share Button

ಅದೊಂದು ಸುಂದರವಾದ ಮುಸ್ಸಂಜೆ ಹೊತ್ತು… ಹೊರಹೊರಟಿದ್ದಾಗ ಸಣ್ಣ ತುಂತುರು ಮಳೆ…ಗಾಡಿಯಲ್ಲಿ ಕೂತು ಹೊರಟಾಗ ಗಿಡಮರಗಳು ಸುಳಿಗಾಳಿಗೆ ತಮ್ಮ ಮೇಲೆ ಬಿದ್ದ ಮಳೆ ಹನಿಯ ತಂಪು ಆಸ್ವಾದಿಸುತ್ತಿದ್ದಂತೆ ಭಾಸವಾಗುತ್ತಿತ್ತು.ಅಲ್ಲಲ್ಲಿ ಜನರ, ವಾಹನಗಳ ಚಲನವಲನ. ಒಂದು ಸಣ್ಣ ರಸ್ತೆ ಹೊಕ್ಕಾಗ ಎರಡು ವಾಹನಗಳು ಸಾಗಲು ಜಾಗವಿಲ್ಲದೆ ಎದುರುಬದುರು ನಿಂತು ನಾನು...

9

ಸೋಲೇ ಭವಿಷ್ಯವಲ್ಲಾ…

Share Button

ಬದುಕೊಂದು ಬೇವುಬೆಲ್ಲ ಬೆಸೆದುಕೊಂಡಿರುವಸಿಹಿಕಹಿ ಯಾನಸಾಗಿಸಲೇಬೇಕು ಇದರ ಜೊತೆಗೆ ನಮ್ಮಅನುದಿನದ ಪ್ರಯಾಣಹರಿಯುವ ನೀರಿನಂತೆ ಮನುಷ್ಯನಅನುಕ್ಷಣದ ವರ್ತಮಾನನಾವಿಡುವ ಪ್ರತಿಹೆಜ್ಜೆಯೂ ವಿಧಿಯಪೂರ್ವನಿಶ್ಚಿತ ತೀರ್ಮಾನಶ್ರಮಿಸಬೇಕು ನಾಳೆಗಾಗಿ ಇಂದಿನ ಈ ಅಮೂಲ್ಯ ಕ್ಷಣಬರುವುದನ್ನು ಸ್ವೀಕರಿಸಲೇಬೇಕು, ಇದುವೇ ಮಾನವನಿಗಾಗಿ ಕಾಲ ಮೀಸಲಿಟ್ಟಿರುವ ಜೀವನ…… ಕಷ್ಟವೆಂಬುದು ಸುಲಭವಲ್ಲಾಸುಲಭವಾಗಿ ನಿವಾರಣೆಯಾಗುವುದು ಕಷ್ಟವೇ ಅಲ್ಲಾಏರಿಳಿತವಿಲ್ಲದ ಮಾರ್ಗ ಹುಡುಕಿದರು ಸಿಗುವುದಿಲ್ಲಾಗೆಲುವು ಮಾತ್ರ...

6

ಹಳೆಯದು ಎಂದೂ ಹಳೆಯದೇ

Share Button

ಕಣ್ಣೀರಿಟ್-ಕೊರ್ಗೋದು ಕಮ್ಮಿಯಾಗ್ಲೀ, ಮಗಎಲ್ರೂ ಅಳ್ತಾ-ಗೋಳಿಟ್ರೆ-ಹೊರೋರ್ಯಾರ್ ನೊಗ ! ಹಳೆಯದು ಇಂದೂ-ಎಂದೂ ಹಳೇದೇಕಳೆಯೋಣ ಈ ಕ್ಷಣ ಹೆಚ್ಚು ನೆನಪಿಸಿಕೊಳ್ದೇಮರವೆಂದೂ ಮರುಗೋಲ್ಲಾ ಬಿದ್ದೆಲೆಗಳ್ಗೆಮತ್ತೆ ಚಿಗ್ರತ್ತೆ  ಮತ್ತದೇ ಬಲ-ಛಲದೋಳ್ಗೆಇರಲೇಬೇಕು ಹಂಗೇ ಜೀವನೋತ್ಸಾಹಹನಿಸ್ಬೇಕ್ ಹರಿಸ್ಬೇಕ್ ಜೀವಕ್-ಪ್ರೋತ್ಸಾಹ ಹಳೇದಿನಗ್ಳು ನಮ್ಗೆಲ್ಲಾರ್ಗೂ ಒಂದ್ಪರೀಕ್ಷೆಕಡೆಗೂ ಉಳ್ಕೊಂಡಿದೀವಿ ತೊಟ್ನವಧೀಕ್ಷೆಹಂಗೆಲ್ಲಾ ಸೋಲ್ಬಾರದು ಬಿಮ್ಮನೆ ಸುಮ್ಸುಮ್ನೆಹೆದುರ್ಸಿ ಬೆದರ್ಸಿ ಅಟ್ತೀವಿ problem-ನೆಆಗಿದೆ ಹೆಚ್ಚು...

7

ಆಕಾಶ ಮಲ್ಲಿಗೆ..

Share Button

ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ. ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ...

8

ಮಣಿಪಾಲದ ಮಧುರ ನೆನಪುಗಳು..ಭಾಗ 10

Share Button

ಕಮಲ ಮಹಲ್ ಹಾಗೆಯೇ ಮುಂದಕ್ಕೆ ನಡೆದಾಗ ಎಡಪಕ್ಕದಲ್ಲಿದೆ, ಪೇಶಾವಾಡ ರಜಪೂತರ ಸುಂದರ ವಿಶಾಲವಾದ ಮನೆ. ನೋಡಲು ಕೆಂಪುಕಲ್ಲಿನ ಕಟ್ಟಡದಂತೆಯೇ ತೋರುತ್ತಿದ್ದರೂ ಅದು ಪೂರ್ತಿ ಮರದ ಮನೆಯಾಗಿದೆ. ಅದರ ಹೊರಗಿನ ಜಗಲಿಗೆ ಅಳವಡಿಸಿದ ಜಗಲಿಯ ಬದಿಗೆ ತಡೆಯಾಗಿರುವ ಕುಸುರು ಕೆತ್ತನೆಯ ಗ್ರಿಲ್ ನೋಡಲು ಕಬ್ಬಿಣದಂತಿದೆ. ಅದರೆ ನಿಜವಾಗಿಯೂ ಅದು...

5

ಅಮೆರಿಕಾ ಪ್ರವಾಸದಲ್ಲಿ ನಡೆದ ಅವಾಂತರ

Share Button

2016 ಮೇ ತಿಂಗಳಲ್ಲಿ ನಾವು ನಾಲ್ಕು ಜನ ಗೆಳತಿಯರು ಅಮೆರಿಕ ಪ್ರವಾಸಕ್ಕೆ ಹೊರಟೆವು. ನನ್ನ ಇಬ್ಬರು ಗೆಳತಿಯರು ಬಾಸ್ಟನ್‌ನಲ್ಲಿ ನಡೆಯಲಿದ್ದ ಅಂತರ್ ರಾಷ್ಟ್ರೀಯ ರಸಾಯನ ಶಾಸ್ತ್ರದ ಸಮ್ಮೇಳನದಲ್ಲಿ ಭಾಗವಹಿಸುವವರಿದ್ದರು. ನಾವೂ ಅವರ ಜೊತೆ ಅಮೆರಿಕಾ ನೋಡಲು ಹೊರಟೆವು. ಅಮೆರಿಕಾ ಎಂದಾಕ್ಷಣ ನನ್ನ ಕಣ್ಣ ಮುಂದೆ ನಲಿದಾಡಿದ್ದು ನಯಾಗರಾ...

Follow

Get every new post on this blog delivered to your Inbox.

Join other followers: