Monthly Archive: November 2021
ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು ಬೇರೆ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಬಟ್ಟೆ ತಂದರೆ ಮಾತ್ರ ಕಥೆ ಮುಗಿಯುವುದಿಲ್ಲ.ಬಟ್ಟೆಯನ್ನ ಸರಿಯಾದ ಅಳತೆಗೆ ಹೊಲೆಯುವ ಟೈಲರ್ ಹುಡುಕುವುದು ಇನ್ನೊಂದು ಮೈಗ್ರೇನ್. ಟೈಲರ್ ಸಿಕ್ಕಿ...
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮುಂದೆ ಮುಂದೆ ನಡೆಯುತ್ತಾ ಇದ್ದ ಹಾಗೆ, ದೈಹಿಕ ಶಕ್ತಿ ಕುಂಠಿತವಾಗತೊಡಗಿತು. ಗಂಟಲೊಣಗಿ ಬಾಯಾರತೊಡಗಿತು. ನನ್ನ ಕೆಲವೇ ಅಗತ್ಯ ವಸ್ತುಗಳನ್ನೂ ¸ ಸಹ ಹೊರಲಾಗದು ಎಂದು ಗೊತ್ತಿದ್ದರಿಂದ, ಅಂದರೆ ಮುಂಚೆಯೇ ಟ್ರಾವಲ್ಸ್ ನವರು ತಿಳಿಸಿದ್ದರಿಂದ, ನೇಮಿಸಿಕೊಂಡಿದ್ದ ಶರ್ಪಾ ಸಹ ನನ್ನ ನಡಿಗೆಯ ನಿಧಾನಕ್ಕೆ...
ಈಗೆಲ್ಲಾ ಬದುಕುಹಾಗೋ, ಹೀಗೋ,ಈಗೋಗಳ ಆಗರಬತ್ತಿ ಹೋಗುತ್ತಿದೆ ಪ್ರೀತಿಯಸೆಲೆಯೆಲ್ಲ ಗೆಲುವಿಗೆ ಇಲ್ಲಿ ಬೆಲೆ ಇಲ್ಲಸೋಲನ್ನಾರೂ ಒಪ್ಪುತ್ತಿಲ್ಲಯಾರೆಲ್ಲರಿಗಿಂತ ಎತ್ತರಎನ್ನುವ ಭರಾಟೆಯಲ್ಲಿಒಬ್ಬರೊಬ್ಬರ ನಡುವೆದೊಡ್ಡದಾಗುತ್ತಿರುವ ಕಂದರನೀ ನನಗಿದ್ದರೆ ನಾ ನಿನಗೆಎಂಬುದೆಲ್ಲ ಹೋಯಿತೆಲ್ಲಿಗೆಈಗೆಲ್ಲಾ ನಿನ್ನ ದಾರಿ ನಿನಗೆನನ್ನ ದಾರಿ ನನಗೆ ಬದಲಾವಣೆ ಬೇಕು ಸರಿಇದಲ್ಲ ಬದಲಾಗುವ ಪರಿಎತ್ತರದವರಾದರೇನುಮತ್ತವರಲ್ಲಿ ತೋರಿಸಿ ಕರುಣೆಉತ್ತುಂಗಕ್ಕೇರಿದರೇನುಇರಲಿ ಸತ್ಸಂಗದಾಚರಣೆ ಹುಟ್ಟಿ ಬೆಳೆದಳಿಯುವುದುಜೀವ...
“ಗಂಗೇಚ, ಯಮುನೇಚೈವ, ಗೋದಾವರಿ ಸರಸ್ವತಿ…..”…ಇದೇನಪ್ಪಾ ಶ್ಲೋಕ ಶುರುವಾಯ್ತು ಅಂದ್ಕೊಡ್ರಾ? ಹೌದು..ಎಲ್ಲಾ ಪವಿತ್ರ ಜಲಗಳೂ ಬಾವಿ ನೀರಿನಲ್ಲಿ ಸೇರಿರುತ್ತವೆ ಎಂಬ ನಂಬಿಕೆಯೊದಿಗೆ, ಮನೆಯ ಒತ್ತಟ್ಟಿಗೇ ಇದ್ದ ಮಣ್ಣುಕಟ್ಟೆಯ ಬಾವಿಯಿಂದ ಬೆಳ್ಳಂಬೆಳಗ್ಗೆ ನೀರು ಸೇದಿ, ಅದೇ ತಣ್ಣೀರನ್ನು ತಲೆಗೆ ಮೈಗೆ ಸುರಿದುಕೊಂಡು ನನ್ನಜ್ಜ ಸ್ನಾನಮಾಡುತ್ತಿದ್ದುದು ನನ್ನ ಚಿಕ್ಕಂದಿನ ನೆನಪುಗಳಲ್ಲೊಂದು. ಮೊದಲೆಲ್ಲಾ,...
ಭಾವಪ್ರಪಂಚದ ದೊರೆಗೆಕಂಡಿದ್ದೆಲ್ಲಾ ಕವಿತೆ,ಸ್ಪುರಣೆಗೊಳ್ಳಲು ಹುಲ್ಲುಕಡ್ಡಿಯೇ ಸಾಕಾಯಿತುಚಿಮ್ಮಿಸುತಾ ಪದಗಳ ಒರತೆ.. ಹಾಗೆಂದು ಸರಳವೇನಲ್ಲಕವಿ ನೇಯುವ ಕವನ,ಒಳಗೊಳಗೇ ಬೇಯಬೇಕುನೋಯಬೇಕುವಿಷಯದ ಒಡಲಾಳವ ಭೇದಿಸಿಆಶಯ ಮೂಡಿಸಬೇಕು.. ನೋವಲಿದ್ದಾಗ ಖುಷಿಯನಗುನಗುತಲಿರುವಾಗ ದುಃಖದುಮ್ಮಾನಗಳತಾನಲ್ಲದ ಪಾತ್ರಕೆ ಪರಕಾಯ ಪ್ರವೇಶ,ಅನುಭವ ಕಲ್ಪನೆಗಳ ಸಮ್ಮಿಲನದಅಂಕೆಯಲಿರಬೇಕಾದ ಭಾವಾವೇಶ .. ಶೀರ್ಷಿಕೆ ನಗಣ್ಯವಾಗದೇ ಸೆಳೆತದ ಮಳೆಯಲಿಓದುಗ ಮಹಾಶಯ ತೋಯಬೇಕು,ಒಳಗಣ ಪದಗಳ ಲಾಲಿತ್ಯದಿ ಅಮೃತ ವಿಷವಾಗದ ಹಾಗೆಹದವರಿತುವಿಷಯ...
ಅಂದು ಶಿವರಾತ್ರಿ. ಶಿವಾಲಯಗಳಲ್ಲಿ – ಗಂಟೆ, ಜಾಗಟೆಗಳ ಸದ್ದಿನೊಂದಿಗೆ, ಓಂಕಾರದ ನಾದ ಹೊರ ಹೊಮ್ಮುತ್ತಿತ್ತು ಪುಷ್ಪಗಳಿಂದ, ಧೂಪ ದೀಪಗಳಿಂದ ಅಲಂಕೃತನಾದ ಶಿವನನ್ನು ಹೇಗೆ ತಾನೆ ಬಣ್ಣಿಸಲಿ?. ನಾನು ನೋಡ ನೋಡುತ್ತಿದ್ದಂತೇ, ಆ ದೀಪಗಳ ಮಧ್ಯೆ ಕಂಗೊಳಿಸುತ್ತಿದ್ದ ಶಿವಲಿಂಗ ನಿಧಾನವಾಗಿ ಜ್ಯೋತಿ ಸ್ವರೂಪವಾಗಿ ಇಡೀ ಗರ್ಭಗುಡಿಯ ತುಂಬಾ ವ್ಯಾಪಿಸಿತು....
ನಮ್ಮ ಪರಿಚಿತ ವಲಯದಲ್ಲಿ, ‘ಅವರಿಗೆ ಕಿಡ್ನಿ ಪ್ರಾಬ್ಲೆಂ ಇದೆಯಂತೆ..ಡಯಾಲಿಸಿಸ್ ಮಾಡಿಸಬೇಕಂತೆ…ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಬೇಕಂತೆ..’ ಇತ್ಯಾದಿ ಕೇಳಿರುತ್ತೇವೆ. ಹಾಗೆಯೇ, ಕೆಲವೊಮ್ಮೆ ಯಾವುದೋ ಕಾರಣಕ್ಕೆ ಆಕಸ್ಮಿಕವಾಗಿ ಮಿದುಳು ನಿಷ್ಕ್ರಿಯ (Brain Dead ) ಆದವರ ಕಣ್ಣು, ಕಿಡ್ನಿ, ಹೃದಯ ಮೊದಲಾದ ಅಂಗಗಳನ್ನು ಅಗತ್ಯವಿದ್ದವರಿಗೆ ಕಸಿ ಮಾಡಿ ಇನ್ನೊಬ್ಬರ ಜೀವನಕ್ಕೆ...
ಯುನೈಟೆಡ್ ಸ್ಟೇಟ್ಸನ ಇಂಡಿಯಾನದಲ್ಲಿರುವ ಹೆನ್ರಿವಿಲೆ ನಗರದಲ್ಲಿ ಒಬ್ಬ ಬಾಲಕನಿದ್ದನು. ಇವರ ತಂದೆ ವಿಲ್ ಬಡ್೯ಡೇವಿಡ್.ತಾಯಿ ಮಾರ್ಗರೇಟ್ ಈ ಬಾಲಕನಿಗೆ ಒಬ್ಬ ತಂಗಿ ಮತ್ತು ತಮ್ಮನಿದ್ದನು. ಬಾಲಕನು ಐದು ವರ್ಷದ ಮಗುವಿದ್ದಾಗ ಇವರ ತಂದೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾನೆ. ಜೀವನ ನಡೆಸುವುದಕ್ಕಾಗಿ ತಾಯಿಯು ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾಳೆ. ಕೇವಲ...
ಮಳೆ ಬಂತು ನೆನಪಿನ ಹೊಳೆ ತಂತುಮುತ್ತಿನ ಹನಿಗಳು ಸುತ್ತಲು ಮುತ್ತಲುಮನವು ಅರಳಿ ಹೊಸತನ ತಂದಿದೆ ನನ್ನಲ್ಲಿ ನಿನ್ನಲ್ಲಿ ಮಳೆಯೆಂದರೆ ಅದೊಂದು ಅದ್ಭುತ! ತುಂತುರು ಹನಿಯ ಸಿಂಚನ ಇರಲಿ ಜಡಿಮಳೆಯ ಸೋನೆ ಇರಲಿ, ಆರ್ಭಟಿಸಿ ಭೋರೆಂದು ಸುರಿಯುವ ಬಿರುಮಳೆಯೇ ಆಗಲಿ, ಪ್ರಕೃತಿಯ ಸೋಜಿಗವಾದ ಮಳೆ ಎಂದೆಂದಿಗೂ ಆಪ್ಯಾಯಮಾನವೇ. ಚಿಕ್ಕಂದಿನಲ್ಲಿ...
“ಲೇ, ಇವಳೇ… ಮನೆಗೆ ಯಾರು ಬಂದರು ಅಂತ ನೋಡೇ…..ಬಾಯಾರಿಕೆ ತೆಗೆದುಕೊಂಡು ಬಾ” ಅಂತ ಮನೆಯ ಯಜಮಾನನ ಮಾತು ಕಿವಿಗೆ ಬಿದ್ದ ಕೂಡಲೇ ನೀರಿನ ಚೊಂಬು ಮತ್ತು ಬೆಲ್ಲದ ತುಂಡುಗಳಿರುವ ಪುಟ್ಟ ತಟ್ಟೆಯ ಜೊತೆ ಬರುವ ಮನೆಯಾಕೆ ಬೆಲ್ಲ ಹಾಗೂ ನೀರನ್ನು ನೀಡಿ, ಬಂದವರ ಕಾಲಿಗೆ ನಮಸ್ಕರಿಸಿ “ಹೇಗಿದ್ದೀರಿ?...
ನಿಮ್ಮ ಅನಿಸಿಕೆಗಳು…