Monthly Archive: November 2021
ಈ ಲೇಖನದ ಶೀರ್ಷಿಕೆ ತುಸು ಆಶ್ಚರ್ಯ ತರುವಂಥಹದು. ಕೇವಲ ಮೂವತ್ತು ವರ್ಷಗಳ ಹಿಂದಿನ ಹಲವಾರು ಪದ್ಧತಿಗಳು, ಖಾದ್ಯಗಳು, ಸಾಮಾನುಗಳು, ಆಟಗಳು ಅದೃಶ್ಯವಾಗಿ ಜೀವನ ಬರಡಾಗಿರುವುದು ನಿಜಕ್ಕೂ ಖೇದನೀಯ. ಇವುಗಳ ಒಂದು ಅವಲೋಕನವೇ ಈ ಲೇಖನದ ಉದ್ದೀಶ್ಯ. ಕೂಡು ಕುಟುಂಬದ ಮೂಲಕ ಪ್ರಾರಂಭಿಸೋಣವೇ? ಹಿಂದೆ ಎಲ್ಲಾ ಕುಟುಂಬಗಳಲ್ಲೂ ತಂದೆ,...
ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ, ಮೊದಲ ಮಹಿಳಾ ಮುಖ್ಯಮಂತ್ರಿ, ಮೊದಲ ವೈದ್ಯೆ, ಮೊದಲ ಶಿಕ್ಷಕಿ ಇರುವಂತೆ ಮೊದಲ ವಕೀಲೆ ಕೂಡಾ ಇರುವ ಕುರಿತು ನಿಮಗೆಷ್ಟು ಗೊತ್ತು? ಹೌದು, ಕಾರ್ನೆಲಿಯಾ ಸೊರಾಬ್ಜಿ ಯವರು ಭಾರತದ ಮೊಟ್ಟಮೊದಲ ಮಹಿಳಾ ವಕೀಲರು. ಕೇವಲ ಇದೊಂದೇ ಅಲ್ಲ ತಮ್ಮ ಜೀವಮಾನದಲ್ಲಿ ಹಲವು ಮೊದಲುಗಳನ್ನು...
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಶರ್ಪಾ ಅವರು ಬಂದು, – ಹೋಗುತ್ತಾ, ಹೊಗುತ್ತಾ ನಾವುಗಳು ಎತ್ತರಕ್ಕೆ ಹೋಗುವುದರಿಂದ ಆಮ್ಲಜನಕದ ಕೊರತೆ ಇರುತ್ತದೆ. ಹಾಗಾಗಿ ದಯವಿಟ್ಟು ಯಾರೂ ಯಾರಿಗೂ ಕಾಯಬೇಡಿ. ನಿಮ್ಮ ನಿಮ್ಮ ಪಾಡಿಗೆ ನೀವು, ನೀವು ಹೋಗುತ್ತಾ ಇರಿ. ನಮ್ಮ ಗುಂಪಿನ ಮುಂದೆ ನಮ್ಮವರಲ್ಲಿ ಒಬ್ಬರು ಇರುತ್ತಾರೆ,...
ಪುಟ್ಟ ನೀರಿನ ಹನಿ ನಾನು ಮಳೆಯಾಗಿ ಇಳೆಗೆ ಇಳಿದಿರುವೆನನ್ಙಂತ ಅನೇಕ ಕಣಗಳ ಜೊತೆ ಸೇರಿ ಹಳ್ಳ ತೊರೆಯಾಗಿ ಹರಿದಿರುವೆನಾ ನಡೆದ ಹಾದಿಯನು ಮೆತ್ತಗಾಗಿಸಿ ಹಸಿರ ತುಂಬಿರುವೆನನ್ನ ನೋಡಿದ ರೈತನ ಮುಖದಲಿ ಹರುಷ ತಂದಿರುವೆಬಾಯಾರಿದ ಜೀವಗಳಿಗೆ ಅಮೃತ ಸಿಂಚನವಾಗಿರುವೆಮರಗಿಡಗಳ ಎಲೆಗಳನ್ನು ಸ್ವಚ್ಛವಾಗಿ ತೊಳೆದಿರುವೆಬೇರುಗಳಿಗೆ ಪೋಷಣೆಭರಿತ ಜೀವಜಲ ನೀಡಿರುವೆಕೆರೆ ಕೊಳ್ಳಗಳ...
ಯಾವುದೇ ಸಣ್ಣ-ಪುಟ್ಟ ಕಾರ್ಯವೂ ಯಶಸ್ವಿಯಾಗಬೇಕಾದರೆ ನಿಷ್ಠೆ, ಏಕಾಗ್ರತೆ ಬೇಕು. ವಿಶೇಷವಾದ ಕಾರ್ಯ ? ಪೂರ್ವಯೋಜಿತವಾಗಿದ್ದರೆ ಸುಗಮವಾಗಿ ಸಾಗ್ಕಾಬಹುದು. ಹಾಗಾದರೆ ಘನವಾದ ಕಾರ್ಯ..? ಬಲವಾದ ಶಕ್ತಿ, ಸಾಮರ್ಥ್ಯ ಬೇಕೇ ಬೇಕು. ಎಲ್ಲದಕ್ಕೂ ಮಿಗಿಲಾಗಿ ಚಾತುರ್ಯ, ಜಾಣ್ಮೆ ಅತೀ ಅಗತ್ಯ. ಮಾನವಾತೀತ ಕಾರ್ಯಕ್ಕೆ ‘ಸಿದ್ಧಿ’ ಬೇಕು. ಸಿದ್ಧಿ ಕೈಗೂಡಿದವರು ಎಂತಹ...
ಒಂದಲ್ಲ ಒಂದು ದಿನಇಂದಲ್ಲ ನಾಳೆ ನಾವೆಲ್ಲಹೋಗಲೇಬೇಕು ಅವನೆಡೆಗೆ. ನನ್ನದು ನಿನ್ನದು ಅವನದುಎಂದೆಲ್ಲಾ ಮೆರೆದ ನಾವೆಲ್ಲಹೋಗಲೇಬೇಕು ಅವನೆಡೆಗೆ. ಬಂಧು ಮಿತ್ರರ ಬಾಂಧವ್ಯಬಂಧನ ತೊರೆದು ನಾವೆಲ್ಲಹೋಗಲೇಬೇಕು ಅವನೆಡೆಗೆ. ಮನೆ ಮಡದಿ ಮಕ್ಕಳುಏನಿದ್ದರೂ ಕೂಡ ನಾವೆಲ್ಲಹೋಗಲೇಬೇಕು ಅವನೆಡೆಗೆ. ಆಸ್ತಿ ಅಂತಸ್ತು ಸುಖದ ಬಾಳಿನಸುಸ್ತಿ ಬಡ್ಡಿಯ ಕಟ್ಟಲು ನಾವೆಲ್ಲಹೋಗಲೇಬೇಕು ಅವನೆಡೆಗೆ. ಹೆಣ್ಣು ಹೊನ್ನು...
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಸ್ವಂತ ಭಾಷೆ ಹಾಗೂ ಬೇರೆಬೇರೆ ಭಾಷಾ ಪ್ರಭೇದಗಳನ್ನು ಹೊಂದಿರುತ್ತದೆ.ಭಾಷೆ ನಿಂತ ನೀರಲ್ಲ.ಅದು ಸದಾ ಪ್ರವಹಿಸುತ್ತಲೇ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತದೆ. ಸಮಾಜದಲ್ಲಿ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ಬದಲಾಗುತ್ತಾ ಬೆಳೆದುಬರುವಂತೆಯೇ ಭಾಷೆಯೂ ನಿರಂತರವಾಗಿ ಬದಲಾಗುತ್ತಾ ಬೆಳೆಯುತ್ತಿರುತ್ತದೆ....
“ಚಿತ್ತುಪ್ಪುಳಿ ಬೋಡಯೇ?…ಇಂದೇ..ಎಡ್ಡೆ ಚೀಪೆ ಉಂಡು!” (ಕಿತ್ತಳೆ ಹಣ್ಣು ಬೇಕಾ?..ಇಕೊಳ್ಳಿ..ಒಳ್ಳೆ ಸಿಹಿ ಇದೆ!)..ಇದು 1978 ನೇ ಇಸವಿಯ ಸುಮಾರಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯಪಟ್ಟಣ ಮಂಗಳೂರಿನ ಕೇಂದ್ರಸ್ಥಾನವಾದ ಹಂಪನಕಟ್ಟೆಯಲ್ಲಿ, ಬಿದಿರಿನಬುಟ್ಟಿ ತುಂಬಾ ಕಿತ್ತಳೆಹಣ್ಣನ್ನು ತುಂಬಿಕೊಂಡು, ತಲೆ ಮೇಲೆ ಹೊತ್ತು, ರಸ್ತೆ ಪಕ್ಕದಲ್ಲಿ ಓಡಾಡುತ್ತಾ ಮಾರಾಟ ಮಾಡುತ್ತಿದ್ದ, ಶಾಲೆಯ ಮುಖವನ್ನೇ...
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮಾರನೆಯ ದಿನ ಬೆಳಗ್ಗೆಯೇ ತಿಂಡಿ ತಿಂದು, ನೇಪಾಳದ ಎರಡು ಬಸ್ಸುಗಳಲ್ಲಿ ಎಲ್ಲರೂ ಜೈ ಭೊಲೇನಾಥ್, ಓಂ ನಮಃ ಶಿವಾಯ – ಎನ್ನುತ್ತಾ ಪ್ರಯಾಣ ಆರಂಭಿಸಿದಾಗ ಉತ್ಸಾಹ ಪುಟಿಯ ತೊಡಗಿತು. ಅಲ್ಲಿಂದ ಸುಮಾರು 6 – 8 ಗಂಟೆಗಳಷ್ಟು ಪ್ರಯಾಣ ಮಾಡಿ, ಸಂಜೆ...
ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಕಡಲ ತೀರ, ಅಲ್ಲಲ್ಲಿ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಜೂನ್ ತಿಂಗಳಾದ್ದರಿಂದ ಎಲ್ಲಿ ನೋಡಿದರೂ ಮರ ಗಿಡಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಸುಮಾರು...
ನಿಮ್ಮ ಅನಿಸಿಕೆಗಳು…