Monthly Archive: July 2022

3

ಪುಸ್ತಕ ಪರಿಚಯ: ಸಾರ್ಥಕ ಮನಗಳು

Share Button

ಪುಸ್ತಕ :- ಸಾರ್ಥಕ ಮನಗಳು(ಕಥಾ ಸಂಕಲನ)ಲೇಖಕರು :- ಸುಪ್ರೀತಾ ವೆಂಕಟ್ಪ್ರಕಾಶಕರು :- ಸ್ವ- ಪ್ರಕಾಶನಬೆಲೆ – 100/- ಹವ್ಯಾಸವೆನ್ನುವುದು ಬದುಕಿನ ಪಯಣದಲ್ಲಿ ಎಲ್ಲಾ ಜಂಜಾಟಗಳಿಂದ ತುಸು ವಿರಾಮ ಇತ್ತು ಮತ್ತೆ ಮುಂದೆ ಸಾಗಲು ಪ್ರೇರಣೆ ನೀಡುವಂಥದ್ದು. ನಿರಂತರವಾಗಿ ಉರುಳುವ ಕಾಲದಲ್ಲಿ, ನಿಭಾಯಿಸಬೇಕಾದ ಜವಾಬ್ದಾರಿಗಳ ನಡುವೆ ಬಹಳಷ್ಟು ಬಾರಿ...

6

ಸೌಂದರ್ಯವೆಲ್ಲಿದೆ?

Share Button

ಸೌಂದರ್ಯ ಹಾಗೂ ಆಕರ್ಷಣೆ ಈ ಎರಡೂ ಪದಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದೇ ಕರೆಯಬಹುದು. ಹೆಣ್ಣಿನ ಸೌಂದರ್ಯವೆನ್ನುವುದು ಎಲ್ಲರನ್ನೂ ಕ್ಷಣ ಮಾತ್ರದಲ್ಲಿ ಸೆರೆ ಹಿಡಿಯಬಲ್ಲ ಚುಂಬಕ ಶಕ್ತಿಯುಳ್ಳ ಒಂದು ವಿಶಿಷ್ಟ ಆಭರಣ. ಸೌಂದರ್ಯ ಹೆಣ್ಣಿಗೆ ಕಳಶಪಾಯವಿದ್ದಂತೆ. ಅನುರೂಪ ಸುಂದರಿಯನ್ನು ಎಲ್ಲರೂ ಗುರುತಿಸಿ ಮನ್ನಣೆ ನೀಡುತ್ತಾರೆ. ದೈವದತ್ತವಾದ...

6

ಕಾದಂಬರಿ: ನೆರಳು…ಕಿರಣ 28

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಜೋಕಾಲಿಯಲ್ಲಿ ಕುಳಿತಿದ್ದ ಜೋಯಿಸರು ಹಿಂದಿನ ದಿನ ಅರ್ಧ ಬರೆದು ಇಟ್ಟಿದ್ದ ಕುಂಡಲಿಯನ್ನು ಪೂರೈಸಲೋಸುಗ ತಮ್ಮ ಖಾಸಗಿ ಕೋಣೆಯತ್ತ ನಡೆದರು. ಭಾಗ್ಯ ತಾನು ತಂದ ಸೀರೆಯನ್ನು ಕಪಾಟಿನಲ್ಲಿಟ್ಟು ಜೋಯಿಸರು ಕೊಟ್ಟಿದ್ದ ಗಂಟುಗಳನ್ನು ಮೇಜಿನ ಮೇಲಿಟ್ಟಳು. ಮಾವಯ್ಯ ಹೇಳಿದಂತೆ ತುಂಬ ಎಚ್ಚರಿಕೆಯಿಂದ ನೋಡಬೇಕೆಂದು ಒಂದನ್ನು ಬಿಚ್ಚಿದಳು....

2

ಶಂಖದ ಮಹಿಮೆ

Share Button

ಶಂಖ ಪುರಾತನ ಕಾಲದಿಂದಲೂ ಪ್ರಸಿದ್ಧಿ. ಹಲವಾರು ಸ್ತೋತ್ರಗಳಲ್ಲಿ ಇದು ಉಲ್ಲೇಖವಾಗಿದೆ. ಮಹಾಲಕ್ಷ್ಮಿಸ್ತೋತ್ರದಲ್ಲಿ ‘ಶಂಖಚಕ್ರಗದಾಹಸ್ತ ಮಹಾಲಕ್ಷ್ಮಿ’ ಎಂದೂ ‘ಚತುರ್ಭುಜಾತ್ತಚಕ್ರಾನಿ ಗದಾ ಶಂಖಾದ್ಯುದಾಯುಧ’ ಎಂದು ಕೃಷ್ಣಸ್ತೋತ್ರದಲ್ಲೂ ಉಲ್ಲೇಖವಾಗಿರುವುದು ಇದಕ್ಕೆ ಸಾಕ್ಷಿ. ಶಂಖಕ್ಕೆ ಅತ್ಯಂತ ಪವಿತ್ರವಾದ ಸ್ಥಾನ ಭಾರತೀಯ ಸಂಸ್ಕೃತಿಯಲ್ಲಿದೆ. ಶಾಸ್ತ್ರಗಳ ಪ್ರಕಾರ ಶಂಖವು ಮನೆಯಲ್ಲಿದ್ದ ಮಾತ್ರದಿಂದಲೇ ಮನೆಯಲ್ಲಿರುವ ಋಣಾತ್ಮಕ ಶಕ್ತಿ,...

4

ಮಹಾ ಗುರುಭಕ್ತ ‘ಶಾಂತಿ’ಮುನಿ

Share Button

ಗುರುಶಿಷ್ಯ ಸಂಬಂಧವು ಪವಿತ್ರವಾದುದು, ಸರ್ವಕಾಲಿಕ ಶ್ರೇಷ್ಠವಾದುದು. ಅದು ಕೇವಲ ‘ಬಂದುಂಡು ಹೋಗುವ’ ಸಂಬಂಧವಲ್ಲ. ಬೆಳಗಿ ಬಾಳುವ ಭದ್ರಬುನಾದಿಯನ್ನು ತೋರಿಸುವಂತಾದ್ದು, ಯಾವುದೇ ಪೂಜಾ ಕೈಂಕರ್ಯದಲ್ಲೋ ಒಂದು ಸತ್ಕಾರ್ಯ ಆರಂಭಕ್ಕೋ ತಾಯಿ, ತಂದೆಯರಿಗೆ ಸಂಕಲ್ಪವಾದ ಕೂಡಲೇ ಗುರುವಿನ ಸ್ಥಾನ. ‘ಮಾತೃದೇವೋಭವ’ ‘ಪಿತೃದೇವೋಭವ’, ‘ಆಚಾರ್ಯದೇವೋಭವ’ ಎಂದು ಸಂಕಲ್ಪಿಸಿದ ಮೇಲಷ್ಟೇ ದೇವತಾ ಪ್ರಾರ್ಥನೆ,...

4

ಜೀವನ-ಪಯಣ

Share Button

ಜೀವನದ ಪಯಣವದುಭೂಮಿ ಸುತ್ತುತಿಹುದೆಂದುಹಗಲೊಂದು ಊರುರಾತ್ರಿ ಇನ್ನೊಂದು ಶೈಶ ಬಾಲ್ಯ ಯೌವನಹಿರಿ ಮುದಿತನವೆಲ್ಲನಿಲ್ದಾಣ ಒಂದೊಂದುಮಡದಿ ಮಕ್ಕಳುನೆಂಟರಿಷ್ಟರು, ಸ್ನೇಹಿತರುಎಲ್ಲ ಜೊತೆಗೆ ಪಯಣಿಗರು ಹಸಿವು ನೀರಡಿಕೆಯನುಇಂಗಿಪುದೆ ಉದ್ದಿಶ್ಯಅದಕೆಂದೆ ಮಾಳ್ಪುವುದುಬೇಕು ಬೇಡೆಲ್ಲವನು ಸವೆಸಿ ಹಗಲನು ಕಣ್ಬಿಟ್ಟುಕಣ್ಮುಚ್ಚಿ ರಾತ್ರಿಯನುಜೊತೆ ಜೊತೆಗೆ ಸವೆಸುವುದುಜೀವನದ ಹಾದಿಯನು ಎಡತೊಡರು ಸಮತಟ್ಟುಬಂದಂತೆ ದಾರಿಪಯಣದನುಭವ ತಾವಿಧ ವಿಧದ ರೀತಿಯಲಿ –ನಟೇಶ +4

7

ಅವಿಸ್ಮರಣೀಯ ಅಮೆರಿಕ-ಎಳೆ 32

Share Button

ನಾಲ್ಕು ವರ್ಷಗಳ ಬಳಿಕ…‌‌‌.. ನನ್ನ ನೌಕರಿ ಹಾಗೂ ಮನೆ ಕೆಲಸಗಳ ನಡುವೆ ಸಮಯ ಸರಿದುದೇ ತಿಳಿಯಲಾರದಂತಾಗಿತ್ತು… ಹಾಗೆಯೇ ನಾಲ್ಕು ವರುಷಗಳೂ ಸರಿದೇ ಹೋದವು. 2014ರ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ, “ನೀನು ನಮ್ಮ ಕೆಲಸ ಮಾಡಿದ್ದು ಸಾಕು, ಇನ್ನು ಮನೆಯಲ್ಲೇ ಕೆಲಸ ಮಾಡಿಕೊಂಡು ಆರಾಮವಾಗಿರು” ಎಂಬುದಾಗಿ ನನ್ನ ನಿವೃತ್ತಿಯನ್ನು...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 7

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸ್ವದೇಶಿ-ಸಂಸ್ಥೆಗಳು: ಕಲ್ಕತ್ತೆಯ ಮೆಡಿಕಲ್‌ ಕಾಲೇಜಿನ ಎರಡನೇ ಪದವೀಧರ ಮಹೇಂದ‌ರ್‌ ಲಾಲ್ ಸರ್ಕಾರ್‌ ಅವರಿಗೆ ಹೋಮಿಯೋಪತಿ ಅಲೋಪತಿಗಿಂತಲೂ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಚಿಕಿತ್ಸಾ ಪದ್ಧತಿ ಎಂಬುದು ಒಂದು ಸಂದರ್ಭದಲ್ಲಿ ಗಮನಕ್ಕೆ ಬಂದಿತು. ಇದನ್ನು ಬ್ರಿಟಿಷ್‌ ಮೆಡಿಕಲ್‌ ಅಸೋಸಿಯೇಷನ್‌ ಒಪ್ಪಲು ನಿರಾಕರಿಸಿತು ಮತ್ತು ಅವರನ್ನು...

17

ಬಸ್ ಪಯಣದ ಹಾದಿಗುಂಟ……

Share Button

ಕಳೆದ ಹದಿನೇಳು ವರ್ಷಗಳಿಂದಲೂ ಕಾರು ನನ್ನ ಸಂಗಾತಿ. ಎಲ್ಲಿಗೆ ಹೋಗಬೇಕೆಂದರೂ “ಎದ್ದೇಳು, ನಡಿ” ಅಂತ ನನಗೆ ನಾನೇ ಅಪ್ಪಣೆ ಕೊಡುವುದರ ಜೊತೆ ಕಾರಿಗೂ ಇಂಧನ ತುಂಬಿಸಿ “ಚಲ್ ಮೇರೀ ಗಾಡಿ” ಅನ್ನುತ್ತಾ ಪಯಣಿಸುವ ಅಭ್ಯಾಸ ರೂಢಿಯಾಗಿದೆ. ಹಾಗಂತ ಎಲ್ಲಿಗಾದರೂ ಹೋಗಬೇಕೆಂದರೆ ನನಗೆ ಕಾರೇ ಆಗಬೇಕೆಂದಿಲ್ಲ. ಆಗಾಗ ನಡೆದು...

5

ಅವಿಸ್ಮರಣೀಯ ಅಮೆರಿಕ-ಎಳೆ 31

Share Button

ರಾತ್ರಿಯಲ್ಲಿ ಹಗಲು..!! ನಾವಿದ್ದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಎಲ್ಲಿದ್ದರೂ, ಸಂಜೆ 3 ಗಂಟೆಯಾಗುತ್ತಿದ್ದಂತೆಯೇ ಎಲ್ಲಾ ವಾಹನಗಳ ದೀಪಗಳನ್ನೂ ಕಡ್ಡಾಯವಾಗಿ ಬೆಳಗಿಸಲೇ ಬೇಕಿತ್ತು. ಈ ನಡು ಮಧ್ಯಾಹ್ನ, ಅದೂ ಇನ್ನೂ ಪ್ರಖರವಾದ ಸೂರ್ಯನ ಬೆಳಕು ಇರುವಾಗಲೇ ಇದೇಕೆ ಹೀಗೆ ಎಂದು ನನಗೆ ಅರ್ಥವಾಗಲಿಲ್ಲ. ಆಮೇಲೆ ತಿಳಿದ ವಿಷಯ ನಿಜಕ್ಕೂ ಕುತೂಹಲಕಾರಿಯಾಗಿತ್ತು....

Follow

Get every new post on this blog delivered to your Inbox.

Join other followers: