Daily Archive: September 22, 2022
ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿರಂಗನ ಬೆಟ್ಟ ಹಾಗೂ ಸುತ್ತುಮುತ್ತಲಿನ ಅರಣ್ಯ ಪ್ರದೇಶದಲ್ಲಿ ‘ಸೋಲಿಗರು’ ಎಂದು ಕರೆಲ್ಪಡುವ ಬುಡಕಟ್ಟು ಗಿರಿಜನ ಸಮುದಾಯವಿದೆ. ಕಾಡಿನ ಒಳಗೆ ವಾಸಿಸುತ್ತಿದ್ದ ಇವರನ್ನು ಕೆಲವು ದಶಕಗಳ ಹಿಂದೆ ಕಾಡಿನಂಚಿನ ವಸತಿಗೆ ಸ್ಥಳಾಂತರಿಸಲಾಗಿದೆ. ಹಲವಾರು ಕುಟುಂಬಗಳು ಅಕ್ಕ-ಪಕ್ಕ ವಾಸಿಸುವ ಈ ಜಾಗವನ್ನು ‘ಹಾಡಿ’ ಅಥವಾ ‘ಪೋಡು’ ಅನ್ನುತ್ತಾರೆ....
ಧನ್ಯವಾದ ಸುರಹೊನ್ನೆ! ಹೌದು…ಸುರಹೊನ್ನೆಗೆ ಧನ್ಯವಾದ ತಿಳಿಸಲೆಂದೇ ನಾನೀ ಲೇಖನವನ್ನು ಬರೆಯ ಹೊರಟಿರುವುದು. ಕಳೆದ ಮೂರು ವರ್ಷಗಳಿಂದ ಸುಮಾರು ಐವತ್ತೆರಡು ಲೇಖನಗಳನ್ನು ಬರೆದು ಸುರಹೊನ್ನೆಯ ಓದುಗರೆದುರು ಇಟ್ಟಿದ್ದೇನೆ. ಸುರಹೊನ್ನೆಯ ಓದುಗರು ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಅನ್ನಲು ನಿಜವಾಗಿಯೂ ಖುಷಿಯಾಗುತ್ತಿದೆ. ಧನ್ಯವಾದ ತಿಳಿಸಲು ಕೆಲವು ಕಾರಣಗಳು ನನ್ನ ಮುಂದಿವೆ. ಕೆಲವನ್ನು...
ಹಸಿರ ಕಾಡಬಸಿರ ಕಾಡಿಹೊಸಗಿ ಕೊಂದ ಮೂಢರುಟಿಸಿಲ ಕಡಿದುಹಸಿಗೆ ಮಾಡಿಹಸುಬೆ ಹೊಟ್ಟೆ ಮೇದರು ಹಸಿತ ಬೇಡಹಸಿರಿಗೆಂದುಹಸಿರುಸಿರಿಗೆ ಕಾದಿದೆಹೊಸಗಿ ಹೋಗಿಮಸಣಕಿಡುವನುಸಿಯ ಹಾದಿ ಹಿಡಿದಿದೆ -ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ +5
ನಮ್ಮ ಧರ್ಮಸಂಸ್ಕೃತಿಯನ್ನು ಎತ್ತಿಹಿಡಿದು ಒಳ್ಳೆಯ ಆಳ್ವಿಕೆಯಿಂದ ಜನಮನ್ನಣೆ ಪಡೆದು, ಭಾರತೀಯ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸುವಂತೆ ಮಾಡಿದ ಮಹಾ ಮಹಾ ಪುರುಷರನ್ನು ನಮ್ಮ ಪುರಾಣೇತಿಹಾಸದ ಪುಟಗಳಿಂದ ನಾವು ನೋಡುತ್ತೇವೆ. ಈ ನಿಟ್ಟಿನಲ್ಲಿ ಹಲವಾರು ಮಂದಿ ಆಗಿ ಹೋಗಿದ್ದಾರೆ ನಿಜ. ಆದರೆ ಇಬ್ಬರನ್ನು ಮನವು ಅನುಕ್ಷಣವು ನೆನೆಯುತ್ತಿದ್ದು, ಅವರ ಹೆಸರು...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಮಾರನೆಯ ದಿನ ನಿಗದಿಪಡಿಸಿದಂತೆ ಮನೆಯವರೆಲ್ಲ ಕೇಶವಯ್ಯನವರ ಮನೆ ತಲುಪಿದರು. ಜೋಯಿಸರು, ಭಾಗ್ಯಳನ್ನು ಕಂಡು ಮಕ್ಕಳು ಓಡಿಬಂದು ತಮ್ಮ ಮುಂಜಿಕಾರ್ಯಕ್ರಮಕ್ಕೆ ಬರದೇ ಇದ್ದುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ವಿದುರಾಶ್ವತ್ಥ ಕ್ಷೇತ್ರಕ್ಕೆ ಮೊದಲೇ ಹೇಳಿಯಾಗಿತ್ತು. ಹೋಗಲಿಲ್ಲಾಂದರೆ ದೇವರು ಸಿಟ್ಟಾಗುತ್ತಾನಲ್ಲವಾ, ಅದಕ್ಕೇ ಹೋಗಿ ಬಂದೆವು. ಸಾರೀ..ಎಂದು ಅವರಿಬ್ಬರ...
ಆಗ ತಾನೆ ಬೆಳಕು ಹರಿದು ಅರ್ಧ ತಾಸು ಕಳೆದಿತ್ತು. ಜನ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು. ಕಂಟೆಪ್ಪನಿಗೆ ಚಕ್ ಬಂದಿದೆ ಅನ್ನುವ ಸುದ್ದಿ ಊರಲ್ಲಿ ಒಂದು ರೀತಿ ಸಂಚಲನ ಮೂಡಿಸಿತು. ಮೊದಲೇ ಲಿಂಗಾಪೂರ ಸಣ್ಣ ಹಳ್ಳಿ ಸುದ್ದಿ ಹರಡಲು ಬಹಳ ಸಮಯ ಬೇಕಾಗಲಿಲ್ಲ . ಕಂಟೆಪ್ಪ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಎಕ್ಸ್-ರೇ ಸ್ಪೆಕ್ಟ್ರೊಸ್ಕೊಪಿ” ಯ ಥಿಯರಿ ಮತ್ತು ಪ್ರಯೋಗ ಎರಡನ್ನೂ ಕರತಲಾಮಲಕ ಮಾಡಿಕೊಡಿದ್ದ ವಿದು ಭೂಷಣ ರೇ “ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ” ಮತ್ತು ಕಲ್ಕತ್ತ ವಿಶ್ವವಿದ್ಯಾನಿಲಯಗಳಲ್ಲಿ 1921ರಲ್ಲಿ ಭೌತಶಾಸ್ತ್ರದ ಅಧ್ಯಾಪಕರಾದರು. 1922ರಲ್ಲಿ ಸಿವಿ.ರಾಮನ್ ಅವರ ನೇತೃತ್ವದಲ್ಲಿ ವಾತಾವರಣದಲ್ಲಿ ಬೆಳಕಿನ ಚದುರುವಿಕೆ...
ಕಣಿವೆಯ ಹಾದಿಯಲ್ಲಿ… ಹೌದು.. ಊಟಕ್ಕೆ ತಡವಾದರೂ, ಅದರಿಂದ ನಮಗೆ, ಅದಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲೇ ಇದ್ದ ವಿಶಿಷ್ಟವಾದ ಅಂಗಡಿಗೆ ಭೇಟಿಕೊಡುವ ಅವಕಾಶವು ಲಭಿಸಿತು. ಈ ಹೋಟೇಲಿನಲ್ಲಿ ಬರೇ ಊಟ, ತಿಂಡಿ ಮಾತ್ರವಲ್ಲದೆ, ಅವರದೇ ಆದ ಈ ಅಂಗಡಿಯಲ್ಲಿ, ಅತೀ ಕಡಿಮೆ ದರದಲ್ಲಿ, ನೆನಪಿನ ಉಡುಗೊರೆಗಾಗಿ ಇರುವಂತಹ ಕೀ ಚೈನ್,...
ನಿಮ್ಮ ಅನಿಸಿಕೆಗಳು…