Daily Archive: November 10, 2022

8

ಮೌನದ ಧ್ವನಿ

Share Button

ನೀರವತೆಯ ಮೌನದಲಿಅಡಗಿಹ ಸದ್ದು, ಗದ್ದಲವಕೇಳ್ಪ ಕಿವಿಗಳು ನಿನಗಿದ್ದರೆಮಾತನಾಡದೆಏನೆಲ್ಲ ಹರಟುವವರ,ಕಿವಿ ಮುಚ್ಚಿದ್ದರೂಎಲ್ಲ ಗ್ರಹಿಸುವೆ ಕನಸಿನ ಬಣ್ಣದ ಲೋಕದಿವಿಹರಿಸುತೆಕಾಮನಬಿಲ್ಲಿನ ಮೇಲೇರಿಈ ಜಗವ ಸುತ್ತುವ ಮನನಿನ್ನದಾದರೆ,ಮೌನದಲಿ, ನಿಶ್ಯಬ್ಧದಲಿಶಬ್ಧವ ಹುಡುಕುವವನೀನಾದರೆ,ಎಲ್ಲೆ ಎಲ್ಲಿದೆಈ ಜಗದ ಸೊಬಗಿಗೆ ನಾ ಬರೆದ ಕವನಗಳಓದುವವರುಇಲ್ಲದಿದ್ದರೇನು,ಹಾಡುವ ಗಾಯಕರಾಗವ ಹಾಕದಿದ್ದರೇನುನೀರವ ಮೌನದಲಿಕೇಳುವುದುಸುಶ್ರಾವ್ಯ ಗಾನ ನನ್ನ ಕವನದ ಸಾಲುಗಳುಅಂಗಳದಲಿ ಬಿದ್ದತುಂತುರು ಮಳೆಹನಿಯ ಶಬ್ಧದಲಿಪ್ರತಿಧ್ವನಿಸುವ...

3

ಖಾಲಿ ಆಗಸ

Share Button

ನಭವೆಲ್ಲಾ ಏಕೋ ಖಾಲಿಇತ್ತ ಸೂರ್ಯನೂ ಇಲ್ಲದಅತ್ತ ಚಂದ್ರನೂ ಇಲ್ಲದನಕ್ಷತ್ರ ತಾರೆಗಳೂ ಕಾಣದಮುಸ್ಸಂಜೆಯ ಆಗಸವೆಲ್ಲಾಬಣ ಬಣ,ಹೃದಯಮನಸನ್ನು ಅಣಕಿಸುವಂತೆ ದೂರದಲೆಲ್ಲೋ ಹಾರಾಡುವಹಕ್ಕಿಗಳೆರಡಷ್ಟೆಕಾಣುತಿದೆ ಕಣ್ಣಳತೆಗೆಯಾವದೋ ಹಳೆಯಎರಡು ನೆನಪುಗಳಂತೆ ರಾತ್ರಿಯಷ್ಟೇ ಚಂದ್ರಮನಜೊತೆ ಜೊತೆಗೆ ಸುತ್ತಿ ಸುಳಿದಚುಕ್ಕೆಗಳ ಗೊತ್ತುಗುರಿಕಾಣುತ್ತಿಲ್ಲಉರಿದು ಸುಡುತ್ತಿದ್ದ ರವಿಮಂಕು ಕವಿದವನಂತೆಇಲ್ಲವಾದ ಜೊತೆಯಲ್ಲಿ ಆಡಿಕೊಂಡುಹೊಡೆದಾಡಿಕೊಂಡುಒಟ್ಟಿಗಿದ್ದ ಗೆಳೆಯರು,ಜೊತೆಗೆ ಬೆಳೆದವರುಕೈಹಿಡಿದು ನಡೆದವರುಎಲ್ಲಾ ತಮ್ಮದೇ ದಾರಿಯಲ್ಲಿಸಾಗಿದಂತೆ ಮುಸ್ಸಂಜೆಯ...

4

ಕಾಣದಂತೆ ಮಾಯವಾದನೋ: ಅಮರನಾಥ ಯಾತ್ರೆ ,ಹೆಜ್ಜೆ 2

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಅಮರನಾಥ ಗುಹೆಯ ಭೌಗೋಳಿಕ ಹಾಗೂ ವೈಜ್ಞಾನಿಕ ವಿವರಗಳನ್ನು ತಿಳಿಯೋಣವೇ? ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹಾ ದೇವಾಲಯ. ಇದು ಸುಮಾರು ಐದು ಸಾವಿರ ವರ್ಷಗಳಷ್ಟು ಪುರಾತನ ದೇಗುಲ ಎಂಬ ದಾಖಲೆಯಿದೆ. ಈ ರಾಜ್ಯದ ರಾಜಧಾನಿಯಾದ ಶ್ರೀನಗರದಿಂದ ನೂರಾ ನಲವತ್ತೊಂದು ಕಿ.ಮೀ. ದೂರದಲ್ಲಿರುವ...

12

ಕಾದಂಬರಿ: ನೆರಳು…ಕಿರಣ 43

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಒಂದೊಳ್ಳೆಯ ದಿನ ‘ಸಿರಿ’ ಮತ್ತು ‘ಶ್ರೀಧರ’ ಅವರಿಚ್ಚೆಯಂತೆ ಸತಿಪತಿಗಳಾದರು. ಸರ್ಕಾರಿ ಹುದ್ದೆಯನ್ನು ಸೇರಿದರೆ ಊರಿಂದೂರಿಗೆ ವರ್ಗಾವಣೆ ತಪ್ಪಿದ್ದಲ್ಲ ಎಂದರಿತ ಅವರಿಬ್ಬರೂ ತಮ್ಮಲ್ಲೇ ಚರ್ಚಿಸಿ ಒಂದು ಪುಟ್ಟದಾದ ಖಾಸಗಿ ಕ್ಲಿನಿಕ್ ತೆರೆದರು. ಜೊತೆಗೆ ಬೇರೆಬೇರೆ ಆಸ್ಪತ್ರೆಗಳಿಗೆ ಕನ್ಸಲ್ಟೇಷನ್ನಿಗೆ ಹೋಗಿ ಬರುತ್ತಿದ್ದರು. ಮನೆಯ ಪರಿಸ್ಥಿತಿಯನ್ನರಿತು ಅದರಂತೆ...

4

ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ..

Share Button

ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ/ನಾನೇನ್ ಮಾಡ್ಬೇಕ್ ಒಸಿ ಹೇಳು ಕನ್ನಡದಕ್ಷರಗಳ್ನ ಕಲಿಯೋಕೆ/ವಿದ್ಯೆ ಬುದ್ದಿ ಎಲ್ಲ ಕೊಡೋಳು ನೀನೇನಾ ಸರ್ಸೋತ್ತಮ್ಮ/ಇಸ್ಕೊಲ್ಗೆ ಹೋಗ್ಬೇಕಾ ಇಲ್ಲ ನಿನ್ತಾವ್ ಬಂದ್ರೆ ಸಾಕ ಹೇಳ್ಸ್ಕೊಳ್ಳೊಕೆ/ ಹೇಳ್ತೀನಿ ವಸಿ ಕೇಳು ಕನ್ನಡ್ದೋರ್ ಮಾಡ್ತಾ ಇರೋ ಅನ್ಯಾಯಗಳ್ನ/ಈಗ್ ನಮ್ಮೊರೆಲ್ಲ ಕನ್ನಡಾನ್ ಬಿಟ್ಟು ಮಾತಾಡ್ತಾರೆ ಬೇರೆ ಬಾಷೆಗಳ್ನ/ಗೌರವ...

Follow

Get every new post on this blog delivered to your Inbox.

Join other followers: