Monthly Archive: July 2023
ಅವರು ಹಂಗೆಇವರು ಹಿಂಗೆನಾವು ಹೆಂಗೆಅನ್ನುವುದರಲ್ಲಿಯೇಜೀವನವ ಕಳೆಯುವೆವು. ಗೆದ್ದಾಗ ಹಿಗ್ಗಿಸೋತಾಗ ಕುಗ್ಗಿಬಿದ್ದು ಎದ್ದಾಗ ಮುನ್ನುಗ್ಗಿಓಡುವುದರಲ್ಲಿಯೇಬದುಕನ್ನು ಕಳೆಯುವೆವು. ಸರಿಯನ್ನು ತಪ್ಪೆಂದುತಪ್ಪನ್ನು ಸರಿಯೆಂದುಸರಿ ತಪ್ಪುಗಳಾವುವೆಂದುಹುಡುಕುವುದರಲ್ಲಿಯೇಬಾಳನ್ನು ಕಳೆಯುವೆವು. ಜೊತೆಗಿದ್ದಾಗ ಕಡೆಗಣಿಸಿದೂರವಾದಾಗ ಪರಿತಪಿಸಿಮನದ ತೊಳಲಾಟದಲ್ಲಿಒದ್ದಾಡುವುದರಲ್ಲಿಯೇಸಮಯವ ಕಳೆಯುವೆವು. ಹೆತ್ತವರ ಕನಸು ನನಸಾಗಿಸದೇಗುರು ತೋರಿದ ಗುರಿ ಮುಟ್ಟದೇನಾಡು ನುಡಿಯ ರಕ್ಷಣೆ ಮಾಡದೇನಿಷ್ಪ್ರಯೋಜಕರಾಗಿ ಬಾಳುವುದರಲ್ಲಿಯೇಕಾಲವನ್ನು ಕಳೆಯುವೆವು. -ಶಿವಮೂರ್ತಿ.ಹೆಚ್. ದಾವಣಗೆರೆ....
ಬೆಳಗಾಗೆದ್ದ ಭಾಸ್ಕರನು ತನ್ನ ರಥಕ್ಕೆ ಏಳು ಕುದುರೆಗಳನ್ನು ಹೂಡಿ ತನ್ನ ದಿನಚರಿಯನ್ನು ಆರಂಭಿಸಿದನು. ಈಶಾನ್ಯ ರಾಜ್ಯಗಳ ನಿಸರ್ಗದ ಸೊಬಗಿಗೆ ಮನಸೋತವನು, ತನ್ನ ಮೊದಲ ಹೆಜ್ಜೆಯನ್ನು ಅಲ್ಲಿ ಇರಿಸಿ, ಸುತ್ತಲೂ ನೋಡಿದ. ಇನ್ನೂ ಬೆಳಗಿನ ಜಾವದ ಸಿಹಿ ನಿದ್ರೆಯಲ್ಲಿದ್ದ ಜನರನ್ನು ಎಚ್ಚರಿಸಿದ. ತನ್ನ ಹೊಂಬಣ್ಣದ ಕಿರಣಗಳಿಂದ ಹಸಿರುಟ್ಟ ಗಿರಿ...
ಅಂದು ನಸುಕು ಹೆಚ್ಚು ಮಸಕಾಗೇ ಇತ್ತು. ಮೂಡಣದಲ್ಲಿ ಸೂರ್ಯ ಕಣ್ಣು ಬಿಡಲಾಗದೆ ಪ್ರಯಾಸ ಪಡುತ್ತಿದ್ದ. ಕೋಳಿಕೂಗುವ ಹೊತ್ತಿಗೆ ಎದ್ದ ಅಕ್ಕ (ಅಮ್ಮ) ಕೊಟ್ಟಿಗೆಯಲ್ಲಿದ್ದ ಗಬ್ಬದ ಎಮ್ಮೆಯನ್ನು ಆಚೆಗೆ ಕಟ್ಟಿ, ಕೊಕ್ಕೊ ಅಂತಿದ್ದ ಕೋಳಿಯನ್ನು ಬಿಡಲು ಪಂಜರ ಎತ್ತಿದಳು. ತನ್ನ ಆರೇಳೂ ಮರಿಗಳು ಹೊರಬಂದುದನ್ನು ತಿರುತಿರುಗಿ ನೋಡಿ ಖಚಿತಪಡಿಸಿಕೊಂಡು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಗಿರೀಶ : ಕಿಚ್ಚು ಧಾರಾಕಾರವಾದ ಮಳೆ. ಕಪ್ಪು ಮೋಡಗಳಿಂದ ಕಪ್ಪಾದ ಆಕಾಶ, ಅದೂ ಮಧ್ಯಾಹ್ನದ ಸಮಯ. ಬೆಳಗ್ಗೆ ಸೂರ್ಯ ಮೂಡಿದ್ದನೆ? ಹಾಗಾದರೆ ಎಲ್ಲಿ? ಮೋಡಗಳ ಹಿಂದೆ ಕಳೆದು ಹೋಗಿದ್ದ. ಒಂದು ಗಂಟೆಯಿಂದ ಸುರಿಯುವ ಮಳೆ, ಬೇಗನೆ ನಿಲ್ಲುವ ಹಾಗೆ ಕಾಣದು. ಬಕೇಟಿನಲ್ಲಿ ಯಾರೋ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) 5 ವರ್ಷಗಳ ಬಳಿಕ ….. ಹೌದು…ಬರೇ ಪ್ರವಾಸ ಮಾಡುತ್ತಾ ಆನಂದಿಸುವುದಕ್ಕಾಗಿಯೇ ನಮ್ಮಿಬ್ಬರನ್ನು ಮೂರು ತಿಂಗಳ ವಾಸ್ತವ್ಯಕ್ಕಾಗಿ ಮತ್ತೊಮ್ಮೆ ಅಮೆರಿಕಕ್ಕೆ ಕರೆದಿದ್ದರು..ಮಗಳು ಮತ್ತು ಅಳಿಯ; ಮೊಮ್ಮಕ್ಕಳು ಸ್ವಲ್ಪ ದೊಡ್ಡವರಾದುದರಿಂದ ಸುತ್ತಾಡಲು ಅನುಕೂಲವೆಂಬ ಭಾವನೆಯೊಂದಿಗೆ. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಇಂಡಿಯನ್ ಏರ್ ಲೈನ್ಸ್ ನವರ ನೇರ...
ಬರುವನೇ ಮತ್ತೆ ಮಾಧವ?ನನ್ನ ಕಾಣದೆ ಹಾಗೆಯೇ ಹೋದವ! ಅರಳಿದ ಹೂವಲಿ ಬೆರೆತ ಕೊಳಲಗಾನವತನ್ಮಯದಿ ಕೇಳುತ ನಿನ್ನರಸಿ ಬಂದೆ ನನ್ನ ತಪ್ಪಿಸಿ ಸುಳ್ಳನೊಪ್ಪಿಸಿದವಅನ್ಯರನೊಲಿದ ಪರಿ ನೋಡಿ ನೊಂದೆ. ಲೋಕನಿಂದೆಯ ಮರೆತು ಅನುರಾಗದಲಿ ಬೆರೆತುನಿನ್ನೆಡೆಗೆ ಓಡೋಡಿ ಬಂದೆ ಯಮುನೆಯ ನೀರಲಿ ಕಲೆತ ಒಲವಧಾರೆಯನೆನಹುತ ತೇಲುತ ವಿರಹವ ಬೆದಕಿದೆ ಚಂದಿರನಿಲ್ಲದ ಇರುಳಿನ...
ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರಅಕ್ಕನಿಗೆ ಗೊತ್ತಾಗದಂತೆ ಕದ್ದು ಬಳೆದುಕೊಂಡ ತುಟಿಯ ಬಣ್ಣ ಮಾಮ ಕೊಡಿಸಿದ ಜರತಾರಿ ಲಂಗಈ ಕಿವಿಯಿಂದ ಆ ಕಿವಿಯವರೆಗೆ ದೊಡ್ಡಮ್ಮ ಮುಡಿಸಿದ ಕನಕಾಂಬರಿ ಮಾಲೆ ಸೇರಿದ ಬಂಧು ಬಳಗವೆಲ್ಲಾ ಎನ್ನ...
ನಿಮಗೆ ಬೇಸಿಗೆಕಾಲ….., ಮಳೆಗಾಲ….., ಚಳಿಗಾಲ….., ಈ ಮೂರರಲ್ಲಿ ಯಾವ ಕಾಲವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಎಂಬ ಪ್ರಶ್ನೆಗೆ ಹೆಚ್ಚಾಗಿ ಸ್ಪಂದಿಸುವವರೇ ಮಳೆಗಾಲವನ್ನು! ಏಕೆಂದರೆ ಈ “ಮಳೆಗಾಲ” ಎಂದರೆ ಮೈ-ಮನಗಳಿಗೆಲ್ಲ ರೋಮಾಂಚನ…..!, ಏನೋ ಒಂದು ರೀತಿಯ ಖುಷಿ….. ಮಕ್ಕಳಿಂದ ಹಿಡಿದು, ದೊಡ್ಡವರ ವರೆಗೆ ಮಳೆ ಬೀಳುವಾಗ ವರ್ಣಿಸಲದಳ ಅನುಭವ ನೀಡುತ್ತದೆ!. ...
ಆತ್ಮಕಥನ: ಹಾಡಾಗಿ ಹರಿದಾಳೆಲೇಖಕರು: ಶ್ರೀಮತಿ ಹೆಚ್.ಆರ್.ಲೀಲಾವತಿ. ಸಂಕಟಗಳಲ್ಲಿಯೂ ಹಾಡಾಗಿಯೇ ಮಿಡಿದವರು ಉಡುಗಣವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿಕಣ್ಣ ನೀರಿನಲಿ ಮಣ್ಣ ಧೂಳಿನಲಿ ಹೊರಳುತ್ತಿರುವರ ಸಹಚಾರಿ-ಜಿ.ಎಸ್. ಶಿವರುದ್ರಪ್ಪ ಈ ಭಾವಗೀತೆಯನ್ನು ಕೇಳಿದ ಎಂಥ ಅರಸಿಕನೂ, ಆ ಮೋಹಕ ಕಂಠಕ್ಕೆ ಪರವಶನಾಗುತ್ತಾನೆ. ಅರವತ್ತು ಎಪ್ಪತ್ತರ ದಶಕಗಳಲ್ಲಿ ಇದನ್ನು ಕೇಳಿ ತನ್ಮಯರಾಗದ...
ಒಂದೂರಿನಲ್ಲಿ ರಾಮಯ್ಯ, ಭೀಮಯ್ಯ ಎಂಬಿಬ್ಬರು ಸ್ನೇಹಿತರಿದ್ದರು. ಅವರಿಬ್ಬರೂ ವೃತಿಯಲ್ಲಿ ವ್ಯಾಪಾರಿಗಳು. ಒಮ್ಮೆ ಭೀಮಯ್ಯನಿಗೆ ವ್ಯಾಪಾರದಲ್ಲಿ ವಿಪರೀತ ನಷ್ಟವಾಗಿ ತುಂಬ ಕಷ್ಟ ಪರಿಸ್ಥಿತಿ ಒದಗಿತು. ಅವನ ದೈನಂದಿನ ಜೀವನ ನಡೆಸುವದೂ ಕಷ್ಟವೆನ್ನಿಸಿತು. ತುಂಬ ದುಃಖವಾಯಿತು. ಅವನ ಸ್ಥಿತಿ ಕಂಡು ಗೆಳೆಯ ರಾಮಯ್ಯನಿಗೆ ಕನಿಕರವಾಯಿತು. ಅವನನ್ನು ಸಮಾಧಾನ ಪಡಿಸಿ ”ವ್ಯಾಪಾರವೆಂದರೆ...
ನಿಮ್ಮ ಅನಿಸಿಕೆಗಳು…