Daily Archive: September 26, 2024
ಇಂದಿನ ಜಗತ್ತು ಚಲನಶೀಲವಾಗಿದೆ. ಸಂಪರ್ಕ ಮಾಧ್ಯಮಗಳು ಹಾಗೂ ಸಾರಿಗೆ ಸೌಕರ್ಯಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿ ಮನೋಭಾವ ಹೆಚ್ಚುತ್ತಿದೆ .ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವ್ಯಾಪ್ತಿಯಿಂದಾಗಿ ಪ್ರಪಂಚದ ಯಾವುದೇ ಸ್ಥಳದ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ದೇಶದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದಿಂದಾಗಿ ಉಂಟಾಗುವ...
ಚಿತ್ರಸೇನ :- ಈ ಹೆಸರಿನ ಹಲವು ವ್ಯಕ್ತಿಗಳು ಮಹಾಭಾರತದಲ್ಲೂ ಭಾಗವತದಲ್ಲೂ ಕಂಡು ಬರುತ್ತಾರೆ.ಇದರಲ್ಲಿ ಮುಖ್ಯನಾದವ ಚಿತ್ರಸೇನನೆಂಬ ಗಂಧರ್ವ. ಈತ ವಿಶ್ವಾವಸುವಿನ ಮಗ. ಒಮ್ಮೆ ದುರ್ಯೋಧನ ನಿಗೆ ಪಾಂಡವರು ಕಾಡಿನಲ್ಲಿ ಅನುಭವಿಸುತ್ತಿರುವ ಕಷ್ಟಕೋಟಲೆಯನ್ನು ನೋಡಿ ಆನಂದಿಸುವ ಹಂಬಲ ಉಂಟಾಗುತ್ತದೆ. ಅದಕ್ಕೆ ಶಕುನಿ, ದುಶ್ಯಾಸನ, ಮತ್ತು ಕರ್ಣರ ಬೆಂಬಲವೂ ಇತ್ತು. ಅವರೆಲ್ಲರೂ...
ಯಾವನಾದರೂ ಒಬ್ಬ ಯಾವುದಾದರೊಂದು ವಿಷಯದಲ್ಲಿ ಸಾಧನೆ, ಬುದ್ಧಿ, ತಪಸ್ಸುಗೈದು ಆತನ ಪ್ರತಿಭೆ ಬೆಳಕಿಗೆ ಬಂದರೆ ಸಮಾಜದಲ್ಲಿ ತಾನೇ ಗಣ್ಯವ್ಯಕ್ತಿ, ತನ್ನನ್ನು ಮೀರಿಸುವವರು ಯಾರೂ ಇಲ್ಲ ಎಂದು ಬೀಗುತ್ತಾ ದುರಹಂಕಾರ ಪಡುವವರನ್ನು ಎಲ್ಲೆಡೆ ಕಾಣುತ್ತೇವೆ. ಜಗತ್ತಿನಲ್ಲಿ ಅವರನ್ನು ಮೀರಿಸುವವರು ಇದ್ದಾರೆ ಎಂಬುದು ಅವರ ಗಮನಕ್ಕದು ಬರುವುದೇ ಇಲ್ಲ. ಆದರೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಭೂತಾನ್ ಎಂದಾಕ್ಷಣ ನೆನಪಾಗುವುದು ಅಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಗ್ಗುರುತಾದ ಟೈಗರ್ ನೆಸ್ಟ್. ಭಾರತದ ತಾಜ್ ಮಹಲ್‌ನಂತೆ, ಪ್ಯಾರಿಸ್‌ನ ಐಫೆಲ್ ಟವರ್‌ನಂತೆ ಇದು ಭೂತಾನಿನ ಸಾಂಸ್ಕೃತಿಕ ಐಕಾನ್. ಭೂತಾನಿನ ಪ್ರಮುಖ ನಗರವಾದ ಪಾರೋದಿಂದ ಹತ್ತು ಕಿ.ಮೀ. ದೂರದಲ್ಲಿರುವ ಈ ಗುಹೆಗೆ ‘ಪಾರೋ ತಕ್ತ್ಸಾಂಗ್’ ಎಂಬ...
ವಿನಾಕಾರಣ ನಾವು ಆಸ್ಪತ್ರೆಗಾಗಲೀ, ಸ್ಮಶಾನಕ್ಕಾಗಲೀ ಹೋಗಲಾರೆವು. ಏನಾದರೊಂದು ಹಿನ್ನೆಲೆ ಮತ್ತು ಕಾರಣಗಳಿಲ್ಲದೇ ಸುಖಾ ಸುಮ್ಮನೆ ಒಂದು ರೌಂಡು ಆಸ್ಪತ್ರೆಗೆ ಹೋಗಿ ಅಡ್ಡಾಡಿ ಬರೋಣ ಎಂದು ಹೋದವರಿಲ್ಲ. ತೀರಾ ಅಪರೂಪ. ಇನ್ನು ಸ್ಮಶಾನಕ್ಕೆ ವಾಯುವಿಹಾರಾರ್ಥ ಹೋಗಿ ಬಂದವರನ್ನು ಕೇಳಿಯೇ ಇಲ್ಲ! ಅಂದರೆ ಬದುಕಿನ ನಶ್ವರತೆ ಮತ್ತು ನೋವುಗಳನ್ನು ನಾವಾಗಿಯೇ...
10.ತೃತೀಯ ಸ್ಕಂದಅಧ್ಯಾಯ -೧ಭಾಗವತ ತತ್ವ ಜನ್ಮಜನ್ಮಾಂತರದಿ ಅರ್ಜಿಸಿದಕಿಂಚಿತ್ ಪುಣ್ಯ ವಿಶೇಷದಿಂಕ್ರಿಮಿ ಕೀಟ ಪಶು ಪಕ್ಷಿಜನ್ಮಗಳ ದಾಟಿಮಾನವ ಜನ್ಮವನ್ನೆತ್ತಿದರೂಕಾಮ ಕ್ರೋಧ ಮದ ಮತ್ಸರದಿಜನ್ಮ ವ್ಯರ್ಥಗೊಳಿಪಮನುಜಂಗೆಮುಕ್ತಿಪಥ, ಭಕ್ತಿಪಥ ಭೂಭಾರಹರಣಕ್ಕಾಗಿಕೃಷ್ಣನಾವತಾರವೆತ್ತಿದಹರಿಯು ಕೊಂದಪೂತನೀ, ಜರಾಸಂಧ, ಶಿಶುಪಾಲರಿಗೂಕುರುಕ್ಷೇತ್ರದಿ ಮಡಿದೆಲ್ಲಹದಿನೆಂಟಕ್ಷೋಹಿಣಿಸೈನ್ಯದೆಲ್ಲಯೋಧರಿಗೂವೀರ ಮರಣ, ಸ್ವರ್ಗಪ್ರಾಪ್ತಿ ಉಳಿದೆಲ್ಲ ಭಗವದ್ ಭಕ್ತರಕೈಬಿಡುವನೇ ಕೃಷ್ಣಅವರಿಗೆಲ್ಲನಿರಂತರ ಕೃಷ್ಣ ಸ್ತುತಿಯೇಭಕ್ತಿ ಮಾರ್ಗಮುಕ್ತಿ ಮಾರ್ಗ ಚೇತನ,...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಅವರ ಜೊತೆಯಲ್ಲಿ ಗೇಟಿನವರೆಗೂ ಹೋಗಿ ಬೀಳ್ಕೊಂಡು ಬಂದ ಮಹೇಶನ ಮನಸ್ಸು ಹತ್ತಿಗಿಂತ ಹಗುರವಾಗಿ ಗಾಳಿಯಲ್ಲಿ ತೇಲಿದಂತಾಯಿತು. ಈ ವಿಷಯವನ್ನು ಇವತ್ತೇ ಮನೆಯವರೊಂದಿಗೆ ಹಂಚಿಕೊಳ್ಳಬೇಕು. ಎಲ್ಲರಿಗಿಂತಾ ಹೆಚ್ಚು ಸಂತಸ ಪಡುವವಳು ದೇವಿ. ಅವಳಿಗೂ ಸಾಹುಕಾರ ರುದ್ರಪ್ಪನವರ ಬಗ್ಗೆ ಚೆನ್ನಾಗಿ ಗೊತ್ತು. ಅವರಿಗೆ ಯಾವುದೇ ಕೆಲಸ ವಹಿಸಿದರೂ...
ನಿಮ್ಮ ಅನಿಸಿಕೆಗಳು…