Monthly Archive: February 2025
ಅಶೋಕ ಮತ್ತು ಶಾರದಾ ದಂಪತಿಗಳಿಗೆ ತೋಟಗಾರಿಕೆ ಮಾಡುವುದರಲ್ಲಿ ತುಂಬ ಆಸಕ್ತಿ. ಅಶೋಕ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಹತ್ತಾರು ಊರುಗಳಲ್ಲು ಕೆಲಸ ನಿರ್ವಹಿಸಿ ವೈವಿಧ್ಯಮಯ ಅನುಭವಗಳನ್ನು ಪಡೆದಿದ್ದರು ನಿವೃತ್ತರಾಗುವಾಗ ಡಿ.ವೈಎಸ್‌ಪಿ., ಆಗಿದ್ದರು. ವಿಶ್ರಾಂತ ಜೀವನ ಕಳೆಯಲು ಮೈಸೂರನ್ನು ಆರಿಸಿಕೊಂಡಿದ್ದರು. ನಗರದಿಂದ ಸ್ವಲ್ಪ ದೂರದಲ್ಲಿ ಅರ್ಧ ಎಕರೆ ಜಾಗವನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಗೋದಾಮಣಿ ತೆಗೆದು ನೋಡಿದರು. “ಆಗಲಿ ಭಾಸ್ಕರ್ ನಾನು ಫಿಲಪ್ ಮಾಡಿ ತಂದು ಕೊಡ್ತೇನೆ.”“ಥ್ಯಾಂಕ್ಸ್ ಮೇಡಂ.” “ವಾಷಿಂಗ್ ಮಿಷನ್ ನಾಳೆ ಬರತ್ತಂತೆ.”“ಹೌದು. ನೀವು ಅಡ್ಜಸ್ಟ್ ಮಾಡಿಕೊಂಡು ಬಟ್ಟೆ….”“ಅದನ್ನು ನೀವು ಹೇಳಬೇಕಾ? ಡೋಂಟ್‌ವರಿ. ನಮ್ಮಲ್ಲಿ ಯಾವ ಸಮಸ್ಯೆಗಳೂ ಬರುವುದಿಲ್ಲ.”ಎಲ್ಲರ ಊಟದ ನಂತರ ಸರಸಮ್ಮ, ರಾಜಲಕ್ಷ್ಮಿ, ಗೌರಮ್ಮ,...
ವಿಜ್ಞಾನಿ ಡಾ.ಎಂ.ಎಚ್.ಮರಿಗೌಡ ಬೆಂಗಳೂರು ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದೇ ಪ್ರಸಿದ್ಧವಾಗಿತ್ತು. ಪಿಂಚಣಿದಾರರ ಸ್ವರ್ಗ ಎನ್ನುವ ಬಿರುದಿಗೂ ಪಾತ್ರವಾಗಿದ್ದು, ಒಳ್ಳೆಯ ಹವಾಮಾನಕ್ಕೆ, ಆರೋಗ್ಯಕರವಾದ ವಾತಾವರಣಕ್ಕೆ ಹೆಸರುವಾಸಿಯಾಗಿತ್ತು. ಇದಕ್ಕೆಲ್ಲಾ ಕಾರಣ ಇಲ್ಲಿದ್ದ ಅಸಂಖ್ಯಾತ ಉದ್ಯಾನವನಗಳು. ಇಂದು ಬೆಂಗಳೂರನ್ನು ಮಾಹಿತಿ ತಂತ್ರಾಂಶದ ರಾಜಧಾನಿ, ಸಿಲಿಕಾನ್ ಸಿಟಿ ಎಂದು ಹೊಗಳುವ ಭರಾಟೆಯಲ್ಲಿ...
32.ಪಂಚಮ ಸ್ಕಂದಅಧ್ಯಾಯ – 1ಪ್ರಿಯವ್ರತ ಮಹರ್ಷಿ ನಾರದರಿಂದತತ್ಪೋಪದೇಶ ಪಡೆದರಾಜೋತ್ತಮ, ಭಾಗವತೋತ್ತಮನಾಗಿಸದಾ ಆತ್ಮಾನಂದನುಭವಿಯಾಗಿಯೂಪುನಃ ರಾಜ್ಯಭಾರದಸೋಲೆ ಸಂಕೋಲೆಯಲಿಪ್ರಿಯವ್ರತ ಬಂದಿಯಾದ ಪರಿ,ಶ್ರೀಹರಿ ಚಿತ್ತದ ಪರಿ ಭಕ್ತಿಯೋಗವ ಸಾಧಿಸಿದಮಹನೀಯಕುಟುಂಬದಲ್ಲಿದ್ದೂಪರಮಾತ್ಮನ ಪಾದಾರವಿಂದಗಳಮಕರಂದ ರಸಪಾನವನ್ನನನುಭವಿಸಿದವಿರಕ್ತಿ ಭಾವಿ ಪ್ರಿಯವ್ರತನಅವಶ್ಯ ಸೇವೆಈ ಜಗದ ಭೂಮಂಡಲಕೆಅದರ ಒಳಿತು ಅಭಿವೃದ್ಧಿಗೆ ಬೇಕೆಂಬಬ್ರಹ್ಮದೇವನಾಣತಿಯಂತೆಮುಕ್ತಿಪಥಕೆಸ್ವಲ್ಪ ವಿರಾಮವಿತ್ತುರಾಜಪಥವ ಹಿಡಿದ ಪ್ರಿಯವ್ರತ ರಾಜಪಥ, ಕರ್ತವ್ಯಪಥ,ಸಕಲ ಮನುಜ ಪಥ,ಭಗವಂತನಿಚ್ಚೆಯ...
ಜನವರಿ 13,2025 ರಂದು ಪ್ರಯಾಗರಾಜ್ ನಲ್ಲಿ ಕುಂಭಮೇಳ ಆರಂಭವಾಗಿದ್ದಾಗ, ನಮಗೆ ಹಿಂದೊಮ್ಮೆ ಪ್ರಯಾಗದ ತ್ರಿವೇಣಿ ಸಂಗಮಕ್ಕೆ ಹೋಗಿ ಆಗಿದ್ದ ಕಾರಣ ಈ ಜನಜಂಗುಳಿಯಲ್ಲಿ ಹೋಗುವುದು ಬೇಡ, ‘ಜನ ಮರುಳೋ ಜಾತ್ರೆ ಮರುಳೋ’ ಎಂಬ ಅಭಿಪ್ರಾಯದಲ್ಲಿದ್ದೆವು. ನೋಡನೋಡುತ್ತಾ, ಅಕ್ಕಪಕ್ಕದವರು ಕುಂಭಮೇಳಕ್ಕೆ ಹೋಗುತ್ತಾರೆಂಬ ಸುದ್ದಿ ಕಿವಿಗೆ ಬೀಳತೊಡಗಿತು. ಒಂದೆರಡು ವಾರ...
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವ ಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಪೂಜೆ ಮಾಡಿ ತಮ್ಮ ಪಾಪವನ್ನು ಪರಿಹರಿಸಿಕೊಂಡು ಮೋಕ್ಷ ದೊರಕುತ್ತದೆಂಬುದು ಬಲವಾದ...
ಅಮ್ಮ ಕಟ್ಟಿದ ಗೂಡಲ್ಲಿ ಬಾಯಿ ತೆರೆದು ಗುಟುಕಿಗಾಗಿ ಕಾಯುತ್ತಿದ್ದೆಹಾರಿ ಬಂದು ಆಹಾರ ನೀಡುವ ಅಮ್ಮನ ಚಿಂವ್ ಗುಡುತ್ತಾ ಕರೆಯುತ್ತಿದ್ದೆ ಅಮ್ಮನ ಪೋಷಣೆಯ ಫಲವೂ ಎಂಬಂತೆ ರೆಕ್ಕೆ ಬಲಿಯತೊಡಗಿದವುಗೂಡಿನ ಹೊರಗೆ ಹಾರಬೇಕೆಂಬ ಇಚ್ಛೆ ಕನಸುಗಳು ಮೊಳಕೆಯೊಡೆದವು ಮೊದಮೊದಲು ಪುಟಿಯುತ್ತಾ ಗೂಡ ಬಾಗಿಲಿಗೆ ಬಂದೆನಂತರ ಹಾರುತ್ತಾ ಮರದ ಟೊಂಗೆಯ ಮೇಲೆ...
ದೂರದೂರಿನ ಈ ಪಯಣಕೊನೆಗೆ ಸೇರುವುದು ಸ್ಮಶಾನಇರುವುದು ನಾಲ್ಕಾರು ದಿವಸಇರಲಿ ಇರುವಷ್ಟು ದಿನ ಹರುಷ ಕಳೆದು ಹೋಗುವುದು ವರುಷನಡುವೆ ಯಾಕೆ ಸುಮ್ಮನೆ ವಿರಸಸಂಸಾರದಲ್ಲಿ ಇರಲಿ ಸರಸಅನುಭವಿಸು ನೀ ಪ್ರತಿ ದಿವಸನಿನ್ನದೆನ್ನುವುದು ಇಲ್ಲಿ ಏನಿಲ್ಲಅವನು ಆಡಿಸಿದಂತೆ ನಡೆಯುವುದೆಲ್ಲಬರಿ ಪಾತ್ರದಾರಿಗಳು ನಾವೆಲ್ಲಾಅವನೆದಿರು ಆಟ ನಡೆಯುವುದಿಲ್ಲ ಅವನು ಕುಣಿಸಿದಂತೆ ಕುಣಿಯಬೇಕಲ್ಲಯಾವ ಉನ್ಮಾದವೂ ಜೊತೆಯಾಗುವುದಿಲ್ಲಯಾವ...
“ಸಾರ್..ಸಾರ್.. ನಿಮ್ಮನ್ನು ಭೇಟಿಮಾಡಲು ಯಾರೋ ಬಂದಿದ್ದಾರೆ. ಒಳಗೆ ಕಳಿಸಲೇ?” ಎಂದು ಇಂಟರ್‌ಕಾಂನಿಂದ ಕೇಳಿಬಂತು ರಿಸೆಪ್ಷನಿಸ್ಟಳ ಧ್ವನಿ. ಆಗ ತಾನೇ ಬಿಸಿನೆಸ್ ಮೀಟಿಂಗ್ ಮುಗಿಸಿ ಆಫೀಸಿಗೆ ಹಿಂದಿರುಗಿದ್ದ ವಿಶ್ವಾಸ್‌ಗೆ ತಕ್ಷಣ ಯಾರನ್ನೂ ಭೇಟಿಮಾಡುವ ಆಸಕ್ತಿಯಿರಲಿಲ್ಲ. ಆದರೂ ಬಂದವರಾರೆಂಬ ಕುತೂಹಲದಿಂದ “ಅವರ ಹೆಸರೇನು?” ಎಂದು ಕೇಳಿದ.“ಅವರು ಕಂಟ್ರಾಕ್ಟರ್ ಮಾಧವ ಎನ್ನುವವರು”...
ತುಳಿಯುವವರು ತುಳಿಯುತ್ತಲೇ ಇರುತ್ತಾರೆಬೆಳೆಯುವವನು ಮೈ ಕೊಡವಿ ಏಳಬೇಕುತುಳಿದವರ ಎದಿರು ತಲೆ ಎತ್ತಿ ನಿಲ್ಲಬೇಕುಸೋಲುಗಳ ಮೀರಿ ಬೆಳೆದು ತೋರಿಸಬೇಕು ಸಾಧನೆಯ ಹಾದಿಯಲಿ ಮುನ್ನುಗ್ಗ ಬೇಕುತುಳಿತಕ್ಕೆ ಒಳಗಾದವರಿಗೆ ಪ್ರೇರಣೆಯಾಗಬೇಕುನೊಂದವರ ಕೈ ಹಿಡಿದು ಮೇಲೆತ್ತಬೇಕುಕಡು ಕತ್ತಲಲ್ಲೂ ಭರವಸೆಯ ಬೆಳಕ ಹಚ್ಚಬೇಕು ಬದುಕಿನಲ್ಲಿ ಸೋಲು ಗೆಲುವು ಎಲ್ಲವೂ ಉಂಟುನೋವು ನಲಿವು ಬಾಳಲಿ ಬಂದು...
ನಿಮ್ಮ ಅನಿಸಿಕೆಗಳು…