Daily Archive: February 6, 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 5: ‘ಡ ನಾಂಗ್’ ನ ನೆಲದಲ್ಲಿ…. 19/09/2024 19/09/2024 ರ ಬೆಳಗಾಯಿತು. ‘ಹಲೋ ಏಶಿಯಾ ಟ್ರಾವೆಲ್ಸ್’ ನಿಂದ ನಮಗೆ ಬಂದಿದ್ದ ವಾಟ್ಸಾಪ್ ಸಂದೇಶದ ಪ್ರಕಾರ ನಾವು ಬೆಳಗಿನ ಉಪಾಹಾರ ಮುಗಿಸಿ 10 ಗಂಟೆಗೆ ಸಿದ್ದರಿರಬೇಕಿತ್ತು .ಈ ಸಂಸ್ಥೆಯ ಸೂಕ್ತ ಮಾಹಿತಿಯನ್ನು ಅಚ್ಚುಕಟ್ಟಾಗಿ ಕೊಡುತ್ತದೆ...
“ಮಾತು ಬೆಳ್ಳಿ, ಮೌನ ಬಂಗಾರ”“ಮಾತನಾಡಿದರೆ ಮುತ್ತು ಉದುರುವಂತಿರಬೇಕು”“ಮಾತು ಬಲ್ಲವನಿಗೆ ಜಗಳವಿಲ್ಲ”“ಮಾತಿನಲ್ಲಿ ತೂಕವಿರಬೇಕು”. ಮೊದಲಾದ ನುಡಿಗಳು ವಿವೇಕವರಿತು ಹಿತಮಿತವಾದ ಮಾತನಾಡುವುದಕ್ಕೆ ಎಚ್ಚರಿಕೆಯ ಸಲಹೆಗಳು. ಹೌದು. ಮಾತು ಮಿತ್ರನನ್ನೂ ಸೃಷ್ಟಿಸುತ್ತದೆ, ಶತ್ರುವನ್ನೂ ಹುಟ್ಟಿಸುತ್ತದೆ. ಹದತಪ್ಪಿ ಮಾತನಾಡಿದ ಬಳಿಕ ಪಶ್ಚಾತ್ತಾಪ ಪಡುವವರು ಅನೇಕರಾದರೆ; ಅನಗತ್ಯವಾಗಿ ಕಠೋರ ಮಾತನ್ನಾಡಿದರೂ ತಾವು ಹೇಳಿದ್ದೇ ಸರಿಯೆಂದು...
ಕನ್ನಡ ಸಾಹಿತ್ಯ ಲೋಕದಲ್ಲಿ “ತ್ರಿವೇಣಿ” ಎಂಬ ಹೆಸರಿಗೆ ಮಹತ್ವದ ಸ್ಥಾನ ಇಂದಿಗೂ ಇದೆ. ಅವರು ಬರೆದಿರುವ ಕೃತಿಗಳು ಅಲ್ಪವೇ ಆದರೂ ಮಾಡಿರುವ ಹೆಸರು ಮುಗಿಲೆತ್ತರ. ಮಹಿಳಾ ಲೇಖಕಿಯರಲ್ಲಿ ಇಂದಿಗೂ ಅಗ್ರಸ್ಥಾನದಲ್ಲಿರುವ ತ್ರಿವೇಣಿಯವರ ಕೃತಿ “ಅವಳ ಮನೆ ” ಅವರ ಎಲ್ಲಾ ಕಾದಂಬರಿಗಿಂತಲೂ ಭಿನ್ನವಾಗಿದೆ. ಕತೆಯ ಓಟ ಸ್ವಲ್ಪ...
ಈಗೀಗ ವ್ಯಕ್ತಿತ್ವ ವಿಕಸನ ತರಬೇತುದಾರರು ನೆಗಟೀವ್ ಅಲ್ಲದ ಮತ್ತು ಪಾಸಿಟೀವ್ ಅಲ್ಲದ ಯಥಾಸ್ಥಿತಿಯ ಅವಲೋಕನ ಅಂದರೆ ಅಸರ್ಟಿವ್ ಚಿಂತನೆಯತ್ತ ಆಸಕ್ತಿ ತೋರುತ್ತಿದ್ದಾರೆ; ಅಸರ್ಟಿವ್ ಥಿಂಕಿಂಗ್ ಅನ್ನು ಪ್ರತಿಪಾದಿಸುತ್ತಿದ್ದಾರೆ. ಅಂದರೆ ಒಂದು ವಸ್ತು ಹೇಗಿದೆಯೋ ಹಾಗೆ, ಒಬ್ಬ ವ್ಯಕ್ತಿ ಹೇಗಿದ್ದಾರೋ ಹಾಗೆ ನೋಡುವ ದೃಷ್ಟಿ. ನಮ್ಮ ಭಾವನೆ ಮತ್ತು...
ಈ ಮನಸ್ಸು ತುಂಬಾ ಚುರುಕುಹುಡುಕಿ ತೆಗೆಯುವುದು ಹುಳುಕುನಡೆಯದು ಇಲ್ಲಿ ನಿನ್ನ ತಳಕು ಬಳಕುಮಾಡದಿರು ನೀ ಯಾರಿಗೂ ಕೆಡುಕು ಮಾಡಬೇಕು ಆದಷ್ಟು ಒಳಿತುದ್ವೇಷ ಅಸೂಯೆಯ ಮರೆತುಬೆರೆಯಬೇಕು ಎಲ್ಲರೊಡನೆ ಕಲೆತುನಲಿಯಬೇಕು ಒಂದಾಗಿ ಬೆರೆತು ನಂಬಿ ನಡೆದಾಗ ಬದುಕುಂಟುಪರಿಶ್ರಮ ಹೋರಾಟದಲ್ಲಿ ಗೆಲುವುಂಟುಅಂಟಿಕೊಂಡಷ್ಟು ಹೆಚ್ಚುವುದು ನಮ್ಮ ನಂಟುಕೂಡಿ ಕಳೆದಷ್ಟೂ ತುಂಬುವುದು ಗಂಟು ಬರುವುದಿಲ್ಲ...
“ಬಿದಿರು ನಿನಾರಿಗಲ್ಲದವಳು?” ಬಾನಂದೂರು ಕೆಂಪಯ್ಯನವರ ಕಂಠದಲ್ಲಿ ಕೇಳಿದ್ದ ಜನಪದಗೀತೆ ಕಣ್ಮುಂದೆ ಬರುತ್ತಿದೆ. ಏಕೆಂದರೆ ಹುಟ್ಟಿನಿಂದ ಅಂತ್ಯದ ದಿನದವರೆಗೂ ಮನುಷ್ಯನ ಜೀವನದಲ್ಲಿ ಉಪಯೋಗವಾಗುವ ಬಿದಿರಿನ ಹಲವಾರು ರೂಪಗಳು ಹೇಗೋ ಹಾಗೆಯೇ ಅಮ್ಮನ ಸೀರೆಯ ಉಪಯೋಗದ ಹಲವು ಮುಖಗಳನ್ನು ಕಂಡವಳು ನಾನು. ಡಿಸೆಂಬರ್ ತಿಂಗಳ ಇಪ್ಪತ್ತೊಂದನೆಯ ತಾರೀಖನ್ನು ಸೀರೆಯ ದಿನವೆಂದು...
29.ಚತುರ್ಥ ಸ್ಕಂದಅಧ್ಯಾಯ – 3ವೇನನ – ಪೃಥು – 2 ದುಷ್ಟ ರಾಜನ ನಿಗ್ರಹದಿಂಅನಾಯಕ ರಾಜ್ಯದಲಿಹೆಚ್ಚುತಿಹ ಉತ್ಪಾತವನಿಯಂತ್ರಿಸಲುಮತ್ತೆ ಪ್ರಾರಂಭ ಹುಡುಕಾಟ ವೇದಜ್ಞ ಬ್ರಾಹ್ಮಣರು, ಮಹರ್ಷಿಗಳುತಂತ್ರಶಕ್ತಿಯಿಂ ರಕ್ಷಿಸಲ್ಪಟ್ಟವೇನನನ ಶವದಎಡತೊಡೆಯಂ ಮಥಿಸಿಮಂತ್ರೋಕ್ತ ವಿಧಾನದಿಂಉದ್ಭವಿಸಿದಭಯಂಕರ ರೂಪಿಯವೇನನ ವ್ಯಕ್ತಿತ್ವದಲ್ಲಿದ್ದಪಾಪ ರೂಪಿಯ ಕಂಡುಅವನನ್ನು ನಿಗ್ರಹಿಸಿಸುಮ್ಮನಾಗಿಸಿ, ಮತ್ತೆ ವೇನನನ ಶವದಿಂಎಡ ಬಲ ತೋಳುಗಳಮಥಿಸಿಉದ್ಭವಿಸಿದಪುರುಷ, ಸ್ತ್ರೀ ರೂಪಿದೇಹ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಂಗಳವಾರ ಚಂದ್ರಮೋಹನದಾಸ್ ದಂಪತಿಗಳು 10 ಗಂಟೆಗೆಲ್ಲಾ ಆಶ್ರಮದಲ್ಲಿದ್ದರು. ಆಶ್ರಮದ ಮುಂದೆ ಕಸ ತುಂಬಿತ್ತು. ಒಳಗಡೆಯೂ ಕೂಡ ಮೂಲೆ ಮೂಲೆಯಲ್ಲಿ ಕಸವಿತ್ತು. ಅಲ್ಲಿದ್ದ ಹೆಂಗಸರು ಬಹಳ ಮಂದಿ ಹರಿದ ಸೀರೆ ಉಟ್ಟಿದ್ದರು. ಚಂದ್ರಮೋಹನದಾಸ್‌ನ ನೋಡಿ ಕೆಲವರು ಕೈ ಮುಗಿದರು.“ತಿಂಡಿ ಆಯ್ತಾ?”“ಒಂದೊಂದು ಬನ್ ಕೊಟ್ಟು ಅರ್ಧ...
ನಿಮ್ಮ ಅನಿಸಿಕೆಗಳು…