‘ತಪ್ಪಲೆಯೊಳಗಿಂದ..’ e- ಪುಸ್ತಕದ ಬಗ್ಗೆ..

Share Button

 

Tappaleyolaginda

 

ವಿಶಿಷ್ಟವಾದ  ಸ್ಥಳೀಯ ಅಡುಗೆಗಳು ಮತ್ತು ಮರೆತು ಹೋದ  ಸಾಂಪ್ರದಾಯಿಕ  ಅಡುಗೆಗಳನ್ನು ಪರಿಚಯಿಸುವ  ದೃಷ್ಟಿಯಿಂದ ‘ಸುರಹೊನ್ನೆ’ಯಲ್ಲಿ  ಆರಂಭಿಸಿದ ಅಂಕಣ ಸೂಪರ್ ಪಾಕ.  ಅಂಕಣ ಆರಂಭವಾಗಿನಿಂದ ಇಂದಿನವರೆಗೆ ವಿವಿಧ ಬರಹಗಾರರ 50 ಕ್ಕೂ ಹೆಚ್ಚು ಬರಹಗಳು  ಪ್ರಕಟವಾಗಿವೆ.

ಅಡುಗೆಗೆ ಸಂಬಂಧಿಸಿದ ವಿಚಾರವಾದರೂ, ಪಾಕವಿದ್ಯೆಗೆ  ಕಲಾವಂತಿಕೆಯನ್ನು  ತೊಡಿಸಿ, ಲಘುಹಾಸ್ಯ ಬೆರೆಸಿ, ಔಷಧೀಯ ಗುಣಗಳನ್ನು ಪ್ರಸ್ತಾಪಿಸಿ, ದೇಸೀ ಸೊಗಡಿನಿಂದ ಕೂಡಿದ  ‘ಸೂಪರ್ ಪಾಕದ’ ಲೇಖನಗಳು  ಸೊಗಸಾದ ಲಘುಬರಹಗಳಂತಿವೆ, ವಿಭಿನ್ನವಾಗಿವೆ ಮತ್ತು  ಮಾಹಿತಿಪೂರ್ಣವಾಗಿವೆ  ಎಂದು ಬಹಳಷ್ಟು ಓದುಗರು ತಿಳಿಸಿರುವುದು ನಮಗೆ ಬಹಳ ಸಂತಸವಾಗಿ  ಮನಸ್ಸು “ಅರಳಿದ ಸಂಡಿಗೆ”ಯಂತಾಗಿದೆ!

ವಿಭಿನ್ನವಾಗಿರುವುದೇ  ನಮ್ಮ  ವಿಶಿಷ್ಟತೆ ಎಂದಾದ ಮೇಲೆ,  ವಿವಿಧ ಲೇಖಕರ, ಸಿಹಿ-ಖಾರದ ಅಡುಗೆಗೆ ಸಂಬಂಧಿಸಿದ  ಬರಹಗಳನ್ನು, ಒಟ್ಟಾಗಿ ಸೇರಿಸಿ, ಇ-ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ, ಇನ್ನಷ್ಟು ವಿಭಿನ್ನವಾಗಿ ಸಂಕ್ರಾಂತಿಯ ಎಳ್ಳು-ಬೆಲ್ಲದಷ್ಟೇ ಸುಮಧುರವಾಗಿರಬಹುದಲ್ಲವೇ ಎಂಬ ಆಲೋಚನೆಯಿಂದ   e-ಪುಸ್ತಕವನ್ನು ಹೊರತಂದಿದ್ದೇವೆ

ಈ  e -ಪುಸ್ತಕಕ್ಕೆ ತಪ್ಪಲೆಯೊಳಗಿಂದ..   ಎಂಬ ಹೆಸರಿಟ್ಟಿದ್ದೇವೆ.  ಇದರಲ್ಲಿ  ಶ್ರೀಮತಿಯರಾದ  ಚಂದ್ರಾವತಿ ಬಿ,  ಸಾವಿತ್ರಿ ಭಟ್ ಪುತ್ತೂರು, ಕೃಷ್ಣವೇಣಿ ಕಿದೂರು, ಹೇಮಮಾಲಾ. ಮೈಸೂರು ಮತ್ತು  ಸಹನಾ ಪುಂಡಿಕಾಯಿ  ಅವರ ಬರಹಗಳಿವೆ.

 ಎಲ್ಲರಿಗೂ  ಸಂಕ್ರಾಂತಿಯ ಶುಭಾಶಯಗಳು.

 

–  ಸಂಪಾದಕಿ    

 

7 Responses

 1. Yashu Vittla says:

  Good….. Olleya mahitiya barahagalu

 2. Balachandra Bhat says:

  ಒತ್ತಾಯದ ಬ್ರಹ್ಮಚಾರಿಯಾಗಿರುವ ನಾನು ಹೊಸ ರುಚಿ ಪ್ರಯತ್ನಿಸಿ ಬಿಡ್ತೇನೆ.

 3. ಸುರಹೊನ್ನೆ ಅನಿರೀಕ್ಷಿತವಾಗಿ ಹೀಗೆ “ತಪ್ಪಲೆಯೊಳಗಿಂದ” ಎದುರಿಗಿಟ್ಟರೆ ಅಚ್ಚರಿ ಆಗುವುದು ಸಹಜ . ಅತ್ತ್ಯುತ್ತಮ. ಹಗುರವಾಗಿ ಓದಿಸಿಕೊಂಡು ಹೋಗುತ್ತದೆ . ಅಲ್ಲದೆ ಬೇಕಾದವರಿಗೆ ಬೇಕಾದ್ದು “ತಪ್ಪಲೆಯೊಳಗಿಂದ” ಬಡಿಸಿಕೊಳ್ಳಬಹುದು . ಸಂಪಾದಕರಿಗೆ ಇದನ್ನು ಓದುಗರಿಗೆ ಕೊಟ್ಟಿದ್ದಕ್ಕೆ ಅಭಿನಂದನೆಗಳು.

 4. Shruthi Sharma says:

  ವಾಹ್..! ‘ತಪ್ಪಲೆ’ ಮುಚ್ಚಳ ತೆಗೆದಾಗ ಸಂಭ್ರಮವಾಯಿತು.. ಬಹಳ ಅಚ್ಚುಕಟ್ಟಾಗಿದೆ ತಪ್ಪಲೆಯೊಳಗಿನ ಖಾದ್ಯಗಳು – ಅರ್ಥಾತ್ ಬರಹ, ಚಿತ್ರಣ ಹಾಗೂ ಸಂಪಾದಕಿಯ ಎಂದಿನ ಶೈಲಿಯ ಸೊಗಸಿನ, ವ್ಯವಸ್ಥಿತ ಎಡಿಟಿಂಗ್ .. ನಾನಂತೂ ಆಗಾಗ ತಪ್ಪಲೆಯೊಳಗೆ ಇಣುಕಿ ನೋಡುತ್ತೇನೆ .. 🙂

  • Hema says:

   ಥ್ಯಾಂಕ್ಸ್…ನೀವೂ ಬರೆಯುತ್ತಿರಿ…ಮುಂದಿನ ಇ-ಪುಸ್ತಕದಲ್ಲಿ ನಿಮ್ಮ ಬರಹವನ್ನೂ ಸೇರಿಸೋಣ.

 5. Sneha Prasanna says:

  Fine Mam…supperb..Happy birthday surahonne….:)….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: