ಪುಸ್ತಕನೋಟ – ‘ಗೆಲುವಿನ ಗುಟ್ಟು’

Share Button

Geluvina guttu

ಗ್ರಂಥಾಲಯವು ನಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ, ನಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೂ ಹಂಚುವಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಎಂದರೆ ತಪ್ಪಾಗಲಾರದು.. ಹೊಸ ವಿಷಯವನ್ನು ತಿಳಿಯಬೇಕೆಂಬ ತವಕದ ನಡುವೆ ನಮ್ಮ ಶಾಲೆಯ ಗ್ರಂಥಾಯದ ಪುಸ್ತಕದ ಕಡೆಗೆ ಒಮ್ಮೆ ದೃಷ್ಠಿಯಿಟ್ಟಾಗ ನನಗೆ ದೊರಕಿದ್ದು ಈ ಅಪೂರ್ವ ಪುಸ್ತಕ ಅದುವೇ ಗೆಲುವಿನ ಗುಟ್ಟು

ಈ ಪುಸ್ತಕವನ್ನು ಬರೆದವರು ‘ಗಿರಿಮನೆ ಶ್ಯಾಮರಾವ್’. ಲೇಖಕರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲವಾದರೂ ಸಹ ಪುಸ್ತಕದಲ್ಲಿರುವ ವಿಚಾರ ಮಾತ್ರ ಬಹಳ ಉಪಯುಕ್ತವಾದದ್ದು. ಮಕ್ಕಳ ಮನೋಲೋಕ 3  ಆವೃತ್ತಿ ಮಾಲಿಕೆಯಲ್ಲಿ ಮೂಡಿಬಂದ ‘ಗೆಲುವಿನ ಗುಟ್ಟು’ ಮಕ್ಕಳ ಮಾನಸಿಕ ವಿಕಸನಕ್ಕಾಗಿ ಬಹಳ ಉಪಯುಕ್ತವಾದ ಮಾಹಿತಿಯನ್ನು ನೀಡಬಲ್ಲದು. 5 ರಿಂದ 10 ನೆಯ ತರಗತಿಯ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ತಾವೇ ಬೆಳೆಸಿಕೊಳ್ಳುವ ಕ್ರಮಗಳು ತುಂಬಾ ಸರಳ ಮತ್ತು ಆಸಕ್ತಿಯುಕ್ತವಾಗಿ ನಿರೂಪಿಸಲಾಗಿದೆ.

ಇನ್ನೂ ಪುಸ್ತಕದ ವಿಚಾರಕ್ಕೆ ಬಂದರೆ ಈ ಕೃತಿಗೆ ಮುನ್ನುಡಿಯನ್ನುಧರ್ಮಸ್ಥಳದ ಧರ್ಮಾಧಿಕಾರಿಯಾದ ಸನ್ಮಾನ್ಯ ‘ಶ್ರೀ ಡಾ. ವೀರೇಂದ್ರ ಹೆಗ್ಗಡೆ’ ಯವರು ಅತ್ಯಂತ ಅರ್ಥವತ್ತಾಗಿ ಬರೆದಿದ್ದಾರೆ. ಈ ಕೃತಿಯು 63 ವಿವಿಧ ಚಿಕ್ಕ ಚಿಕ್ಕ ಲೇಖನಗಳನ್ನು ಹೊಂದಿದ್ದು ಪ್ರತಿಯೊಂದು ಲೇಖನವು ಸಹ ಮಗುವಿನ ಮನಸ್ಸಿಗೆ ನಾಟುತ್ತದೆ. ಈ ಕೃತಿಯಲ್ಲಿ ಹಾಡು, ಕತೆ, ನೀತಿಕತೆ, ಪ್ರಶೋತ್ತರ, ತಮಾಷೆ ಮುಂತಾದ ಪ್ರಕಾರದ ಲೇಖನಗಳು ಇದ್ದು ಸಹಜವಾಗಿ ಮಕ್ಕಳಿಗೆ ಇಷ್ಟವಾಗುತ್ತದೆ. ಇಲ್ಲಿ ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಮುಂತಾದ ಮಗುವಿನ ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವ ವಿಷಯಗಳ ಬಗ್ಗೆ ವಿವರವಾಗಿ ನಮಗೆ ತಿಳಿಯುತ್ತದೆ. ಈ ಕೃತಿ ಕೇವಲ ಮಕ್ಕಳಿಗೆ ಮಾತ್ರ ಸೀಮಿತ ಎಂದು ನಮಗೆ ಅನಿಸುವುದಿಲ್ಲ.

ಈ ಕೃತಿಯಲ್ಲಿನ ‘ ಜಂಬ ಕೊಚ್ಚಿದರೆ ಅವಮಾನ ಖಚಿತ’ ‘ಚೆಂದದ ಮೊಬೈಲ್‌ನಲ್ಲಿ ಕೆಡುಕಿದೆಯಂತೆ’ ದೇವರನ್ನು ನಂಬಿದರೆ ಧೈರ್ಯ ಬರುತ್ತದೆ’ ‘ಗೆದ್ದಾಗ ತಗ್ಗಿ ನಡೆಯಬೇಕು’ ‘ನಾವು ಬೆಳೆದ ದಾರಿ ಮುಖ್ಯ’ ವ್ಯರ್ಥ ಕಾಲಹರಣ ಗಮನಕ್ಕೆ ಬರುವುದಿಲ್ಲ’ ‘ಇಷ್ಟದ ಕಲಿಕೆ ಕಷ್ಟ ಎನಿಸುವುದಿಲ್ಲ’ ಮುಂತಾದ ಹಲವು ಲೇಖನ ಮಾಲಿಕೆಗಳು ಮಕ್ಕಳಿಗೆ ಬಹಳ ಖುಷಿಯನ್ನು ನೀಡುತ್ತದೆ ಎಂದು ಹೇಳಬಹುದು.

ಈ ಕೃತಿಯು ಎಲ್ಲರ ಮನ ಮುಟ್ಟುವಂತೆ ಮಾಡುವಲ್ಲಿ ಲೇಖಕರಾದ ‘ಗಿರಿಮನೆ ಶ್ಯಾಮರವ್’ ರವರು ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುತ್ತಾರೆ ಎಂದು ಹೇಳಬಹುದು. ಈ ಕೃತಿಯು ಖಂಡಿತವಾಗಿಯು ಎಲ್ಲಾ ಪುಟ್ಟ ಮನಸ್ಸುಗಳನ್ನಯ ಆವರಿಸಿಕೊಳ್ಳುವುದೆಂಬ ಆಶಯ ನನ್ನದು॒


 – ಸುರೇಂದ್ರ ಪೈ , ಸಿದ್ಧಾಪುರ 

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: