ಶಿರಸಿಯಲ್ಲಿ “ಸಪ್ತಕ” ದಿಂದ ಸಂಗೀತ ಸಂಧ್ಯಾ ಕಾರ್ಯಕ್ರಮ: ಭಾಗ-2
ಇನ್ನೂ ಪ್ರೇಕ್ಷಕರ ಮನದಲ್ಲಿ ವೇಣು ವಾದನದ ಗುಂಗು ಇದ್ದಂತೆಯೇ ,ಎರಡನೆಯ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲು ಗಾಯಕ ಪಂಡಿತ ಸಂಜೀವ ಅಭ್ಯಂಕರ , ಮುಂಬೈ ತಬಲಾ ಪ್ರವೀಣ ಪಂಡಿತ ರವೀಂದ್ರ ಯಾವಾಗಲ್ ಮತ್ತು ಸುರೀಲೀ ಹಾರ್ಮೋನಿಯಂ ಪಟು ಪಂಡಿತ ವ್ಯಾಸ ಮೂರ್ತಿ ಕಟ್ಟಿ ಬೆಂಗಳೂರು ಇವರು ವೇದಿಕೆಗೆ ಆಗಮಿಸುತ್ತಿದ್ದಿಂತೆಯೇ ಸಭಿಕರು ಚಪ್ಪಾಳೆಗಳ ಮೂಲಕ ಸ್ವಾಗತಿಸಿದರು,, ಸಪ್ತಕದ , ಶ್ರೀ ಜಿ .ಎಸ್ . ಹೆಗಡೆಯವರು ಕಲಾಕಾರರ ಪರಿಚಯ ಮಾಡಿಕೊಟ್ಟರು.
ಶ್ರೀ ಸಂಜೀವ ಅಭ್ಯಂಕರರು, ಪದ್ಮ ವಿಭೂಷಣ ಪಂಡಿತ ಜಸರಾಜ ಅವರ ಹಿರಿಯ ಹಾಗು ಅಚ್ಚು ಮೆಚ್ಚಿನ ಶಿಷ್ಯರು.ದೇಶ, ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಭೇಷ್ ಎನ್ನಿಸಿಕೊಂಡಿದ್ದಾರೆ. ಎರಡನೆಯದಾಗಿ, ತಬಲಾ ಮಾಂತ್ರಿಕ ರವೀಂದ್ರ ಅವರು ಪಂಡಿತ ಲಾಲಜಿ ಗೊಖಲೆಯವರಲ್ಲಿ ಅಭ್ಯಾಸ ಮಾಡಿದ್ದೂ, ಹಿರಿಯ ಕೀರ್ತಿವಂತ,ಜನಾನುರಾಗಿಯಾದ ಇವರನ್ನು ಕರ್ನಾಟಕದ ಜನತೆಗೆ ಪರಿಚಯ ಮಾಡಿ ಕೊಡುವ ಅವಶ್ಯಕತೆಯೇ ಇಲ್ಲ, ಇನ್ನು ಪಂಡಿತ ವ್ಯಾಸಮೂರ್ತಿ ಕಟ್ಟಿಯವರು, ಮೂಲತಃ ಸಾಫ್ಟವೇರ ಇಂಜಿನಿಯರ್ ಆಗಿದ್ದು, ಸಂಗೀತ ಸೇವೆಗಾಗಿ (ಒಳ್ಳೆಯ ಸಂಬಳವಿದ್ದ ನೌಕರಿ ತ್ಯಜಿಸಿ ) ತಮ್ಮ ಜೀವನ ಮುಡುಪಾಗಿಇಟ್ಟಿದ್ದಾರೆ. ಅವರು ಉತ್ತಮ ಗಾಯಕರೂ ಹೌದು , ಇಂಥ ಮೂವರು ದಿಗ್ಗಜರ ಸಂಗೀತ ಕಾರ್ಯಕ್ರಮವನ್ನು ನೋಡೀ, ಕೇಳಿ ಆನಂದಿಸಲು ಅವಕಾಶ ಮಾಡಿಕೊಟ್ಟ ಎರಡು ಸಂಸ್ಥೆಗಳಿಗೆ ನಾವು ಆಭಾರಿಯಾಗಿದ್ದೇವೆ
ಸಂಗೀತ ಪ್ರಾರಂಭಿಸುವ ಪೂರ್ವದಲ್ಲಿ ನಾಲ್ಕು ಸಂಗೀತ ವಿದ್ಯಾರ್ಥಿಗಳಿಗೆ ಸಪ್ತಕ ಸಂಸ್ಥೆಯ ಪರವಾಗಿ ಪಂಡಿತ ಸಂಜೀವ್ ಅವರ ಅಮೃತ ಹಸ್ತದಿಂದ ವಿದ್ಯಾರ್ಥಿ ವೇತನದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಇನ್ನು ಎಲ್ಲರೂ ಆತುರದಿಂದ ಕಾಯುತ್ತಿರುವ ಸಂಗೀತ ಪ್ರಾರಂಭ ,ವೇದಿಕೆಮೇಲಿದ್ದ ಕಲಾವಿದ,. ಪ್ರೇಕ್ಷಕರ ನಡುವಿನ ಅಂತರ, ಸ್ಟೇಜ್, ಸಭಾಗ್ರಹದ ಸುವ್ಯವಸ್ಥೆ ಕುರಿತಾಗಿ ಶ್ರೀ ಅಭ್ಯಂಕರರು ತಮ್ಮ ಮೆಚ್ಚುಗೆ ಸೂಸುತ್ತಾ ರಾತ್ರಿ 7-30 ಕ್ಕೆ ರಾಗ್” ಯಮನ” ಮೂಲಕ ನಮ್ಮನ್ನೆಲ್ಲ ಸಂಗೀತ ಲೋಕಕ್ಕೆ ಕರೆದೊಯ್ಯಲು ಪ್ರಾರಂಭಿಸಿದರು . ಈ ರಾಗದ ವಿಸ್ತಾರ, ಅದರಲ್ಲಿ ಎಳೆ ಎಳೆಯಾಗಿ ತಮ್ಮ ಎಲ್ಲ ವಿದ್ವತ್ತನ್ನು ಹಂತ ಹಂತವಾಗಿ ಪ್ರದರ್ಶನ ಮಾಡಿದರು . ಮನಕ್ಕೆ ಮುದ ನೀಡಿದ ಅವರು ಹಾಡಿದ ರೀತಿ ಅವರ್ಣನೀಯ,ತದ ನಂತರ ರಾಗ .”ರಾಗೆಶ್ರೀ ” ಸಹ ನಮ್ಮನ್ನು ಗಂಧರ್ವ ಲೋಕಕ್ಕೆ ಎಳೆದೊಯ್ಯಿತು .