ಓ ಶಿವನೇ

Share Button

Nagaraj Bhadra

ಓ ಶಿವನೇ

ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ,

ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ,

ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ.

ಇವನಿಗೆ ಬದುಕಲು ಸುಂದರವಾದ ಪರಿಸರವನ್ನು ನೀ ನೀಡಿದೆ,
ಆದರೆ ಆ ಪರಿಸರವನ್ನೇ ನಾಶಮಾಡಿ,

ಸುಂದರ ಬದುಕು ಕಟ್ಟಲು ಹೊರಟಿದ್ದಾನೆ, ಅದು ಸಾಧ್ಯವೇ ಓ ಶಿವನೇ..

.

ಜೀವನದಲ್ಲಿ ಏನಾದರೂ ಸಾಧಿಸಲು ‘ನಾನು’ ಅನೋದನು ನೀ ನೀಡಿದೆ,
ಇಂದು ಇವನು  ಇಡೀ  ವಿಶ್ವಕ್ಕೆ ನಾನೇ ಅಧಿಪತಿ ಎಂದು,

ಹೇಗೆ ಹೊಡೆದಾಡಿಕೊಂಡು ಸಾಯುತ್ತಿದ್ದಾನೆ ನೋಡು ಓ ಶಿವನೇ, .

ಬಾಳಿನಲ್ಲಿ ಪ್ರೀತಿಯನ್ನು  ತುಂಬಲು  ಸಂಬಂಧಗಳ ಆಸರೆಯನ್ನು ನೀ ನೀಡಿದೆ 

ಆದರೆ  ಇವನು ಅವುಗಳನ್ನು ತನ್ನ ಸ್ವಾರ್ಥಕ್ಕೆ  ಬಳಿಸಿ,

ಅವುಗಳಿಗೆ ಬೆಲೆಯೆ ಇಲ್ಲದಾಗೆ ಮಾಡಿದ್ದಾನೆ ಓ ಶಿವನೇ,

ಈ ಭೂಮಿ ಮೇಲೆ ಬದುಕಲು ಪುಟ್ಟ ಜಾಗವನ್ನು ನೀ ನೀಡಿದೆ,
ಆದರೆ ಇವನು ದುಡ್ಡಿನ ವ್ಯಾಮೋಹದಲ್ಲಿ

ಇಡೀ  ಭೂಮಿಯನ್ನು ಕೊಂಡುಕೊಳ್ಳಲು ಹೊರಟಿದ್ದಾನೆ ಓ ಶಿವನೇ..

 

ಭೂಮಿಯ ಮೇಲೆ ನೀನು ಸೃಷ್ಟಿಸಿದ ಬುದ್ಧಿ ಜೀವಿ ಇವನೇ ಅಲ್ಲವೇ

ಆದರೆ ಇಂದು ಇವನು ಬುದ್ಧಿಯಿಲ್ಲದ ಜೀವಿಯಾಗಿ ಉಳಿದಿದ್ದಾನೆ ಓ ಶಿವನೇ.

ನೀನು ಮುಂದೆ ಸೃಷ್ಟಿಸಲು ಹೊರಟಿರುವ,

ಮಾನವನಲ್ಲಿ ಇವುಗಳನ್ನು ಸರಿಪಡಿಸಲಿಲ್ಲ ಎಂದರೆ,
ನೀನು ಸೃಷ್ಟಿಸಿದ ಈ ಸುಂದರ ಜಗತ್ತಿಗೆ ಉಳಿಗಾಲಿಲ್ಲ ಓ ಶಿವನೇ. 

 

–  ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: