ನಿನಗಾಗಿ ಕಾದಿರುವೇ ಓ ಒಲವೇ
ಪ್ರೀತಿಯೆಂಬ ಬೆಳೆಯು
ಮೊಳಕೆಯಲ್ಲೇ ಬಾಡುತ್ತಿರಲು
ಮಳೆಯಾಗಿ ಆವರಿಸು ನೀನು
ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು
ಬತ್ತುವ ಮುನ್ನವೇ
ಕಡಲಾಗಿ ಸೇರು ನನ್ನನು ನೀನು
ಬಾಳಿನ ಗಾಳಿಪಟದ ಸೂತ್ರವು
ಕಡಿಯುವ ಮುನ್ನವೇ
ಸೆರೆಯಾಗು ನನ್ನಲ್ಲಿ ನೀನು
ಜೀವನವೆಂಬ ಗಡಿಯಾರದ ಸಮಯವು
ನಿಲ್ಲುವ ಮುನ್ನವೇ
ಅದರ ಕೀಲಿಯಾಗಿ ಕೂಡಿಕೊಳ್ಳು ನೀನು
ನಿನ್ನ ನೆನಪಿನ ಅಂಗಳದಲ್ಲಿ
ನಾನು ಕಳೆದು ಹೋಗುವ ಮುನ್ನವೇ
ನನ್ನಲ್ಲಿ ಬೆರೆತುಬಿಡು ನೀನು
ನಿನ್ನ ದಾರಿಯ ಕಾಯುತ್ತಿರುವ
ಈ ಜೀವವು ಅಸುನಿಗುವ ಮುನ್ನವೇ
ಉಸಿರಾಗಿ ಆವರಿಸು ನೀನು
– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ