ಹನಿಗವನಗಳು
ಬೆಳದಿಂಗಳು
ಚಲಿಸುತಿದೆ ರೈಲು
ಜೊತೆಗೆ ಚಂದಿರನು
ಎಲ್ಲೆಡೆಯೂ ಇದೆ
ಬೆಳದಿಂಗಳು
ತೊಟ್ಟಿಲು
ಹುಣ್ಣಿಮೆಯ ಚಂದಿರ ಬೆಳದಿಂಗಳ
ಇಳೆಯ ಮಡಿಲಿಗಿಟ್ಟು
ಲಾಲಿ ಹಾಡುತ್ತಿದ್ದಾನೆ
ನಾನು ನಿನ್ನ ಕನಸುಗಳಿಗೆ
ತೊಟ್ಟಿಲು ಕಟ್ಟುತ್ತಿರುವೆ
ಇರುವೆ
ಸಿಹಿಯ ಹಾದಿ
ಹುಡುಕಿ ಬಂದ ಇರುವೆ
ಬಿಸಿ ಕಾಫಿ ಕಪ್ ನೊಳಗೆ
ಶವವಾಗಿ ತೇಲುವುದ ಕಂಡೆ
ಬೆಳವಣಿಗೆ
ಮಾವು ಬಿತ್ತಿದರೆ ಮಾವು
ಬೇವು ಬಿತ್ತಿದರೆ ಬೇವು
ನಿನ್ನ ನಗೆಯನ್ನು ಬಿತ್ತಿದೆ
ಅರೆ ಏನಾಶ್ಚರ್ಯ!
ನಿನ್ನ ಕನಸುಗಳು ಬೆಳೆಯುತ್ತಿವೆ
– ನವೀನ್ ಮಧುಗಿರಿ
ಮನಸ್ಸಿಗೆ ಮುದ ನೀಡುವ ಕವನಗಳು
ಧನ್ಯವಾದಗಳು