ನಾ ಸರಿ, ನೀ ಸರಿ..

Share Button

Nagesha MN

 

ನಾನು ಸರಿ, ನೀನು ಸರಿ
ಇಬ್ಬರು ಸರಿ ಸರಾಸರಿ
ಇರದಿದ್ದರೆ ದೂರ ದುಬಾರಿ
ದೂರ ಸರಿವುದೆ ಸರಿ ದಾರಿ ! ||

ನೀನಿಲ್ಲ ಸರಿ, ನಾನಿಲ್ಲ ಸರಿ
ಸರಿ..ಸರಿ ಆಕ್ರಂದನ ಭಾರಿ
ಕಂದನ ಅಸಹಾಯಕತೆ ಪರಿ
ಹುಟ್ಟಿದ ಗಳಿಗೆಯ ಸವಾರಿ.. ||

ನಾನಿಲ್ಲ ಸರಿ, ನೀವೆಲ್ಲ ಸರಿ
ಪಾರ್ಕು ಸಿನೆಮ ಎಲ್ಲೋ ಹೊರಟಿರಿ
ಹುಡುಕಿ ನನ್ನಿಲ್ಲೇ ಬಿಟ್ಟೋಗುವ ದಾರಿ
ಅಲ್ಲಾ, ಬೆಳೆಯುವುದೇಕಿಷ್ಟು ದುಬಾರಿ ? ||

ನೀವಿಲ್ಲ ಸರಿ, ನನದೇ ಸರಿ !
ಸರಿಯಿರಿ ಬಿಟ್ಟು ನನ್ನಾ ದಾರಿ
ನನ್ನ ಮೀಸೆ ನನ್ನ ದೇಶ ಕಾಣಿರಿ
ನಾನರಿತೆ ಸತ್ಯ ರೋಮ ನಿಮಿರಿ.. ||

ನನದೂ ಸರಿ, ನಿಮದೂ ಸರಿ
ಜ್ಞಾನೋದಯವಾಗೇ ಕುದುರಿ
ತಲುಪೆ ಬುದ್ಧ ಅಪಕ್ವತೆ ಮೀರಿ
ತಲುಪರೆಲ್ಲ ಬದುಕೇ ಪರಾರಿ..! ||

I am OK You are OK

(ಸೂಚನೆ: ವ್ಯಕ್ತಿತ್ವ ವಿಕಸನ ತತ್ವದ ‘Transaction Analysis ‘ ನಲ್ಲಿ ಬರುವ ‘I am OK , You are OK’ ಸೈದ್ದಾಂತಿಕ ಹಿನ್ನಲೆಯಲ್ಲಿ ಓದಿ)

.

– ನಾಗೇಶ ಮೈಸೂರು

 

4 Responses

  1. Hema says:

    Nice….even I had attended a training program on ‘Transaction Analysis’ few years ago and read the book ‘I am OK You are OK’, written by Thomas A Harris. But never imagined a poem in Kannada in those lines… Your creativity is too good..

  2. In companies it is a standard management program and I too attended it Long before. Hence felt somehow to create a poem on this which definitely not common – subjectwise. I did attempt another one on PAC ( parent, adult, child) pattern. Will send it next time. Thanks for the nice comment

  3. ನನಗೂ ಅತ್ಯಂತ ಕಾಡಿದ ಪುಸ್ತಕವಿದು….
    ನಿಮ್ಮ ಕವನವಾದ ಪರಿ ಚೆನ್ನಾಗಿದೆ ಧನ್ಯವಾದಗಳು

    • ಥ್ಯಾಂಕ್ಸ್ ವ್ಯಕ್ತಿತ್ವ ವಿಕಸನದಲ್ಲಿ ಮತ್ತು ವ್ಯಕ್ತಿ ಸಂಬಂಧ ನಿಭಾವಣೆಯಲ್ಲಿ ಈ ತತ್ವದ ಅಳವಡಿಕೆಯ ಪರಿಣಾಮ ಗಣನೀಯ. ಆದರೆ ಬಳಕೆಯಲ್ಲಿ ಅಳವಡಿಕೆ ಮಾತ್ರ ಅಷ್ಟು ಸುಲಭವಲ್ಲ.. !

Leave a Reply to Nagesha Mysore Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: