ಅಮ್ಮ ಎಂದರೆ ಎಂತ ಆನಂದ ಮನದಲ್ಲಿ…
ಅಮ್ಮ ಎಂದರೆ ಎಂತ ಆನಂದ ಮನದಲ್ಲಿ,
ಆತಂಕ ಕೇ ಕೇ ಹಾಕುವ ನೋವುಗಳಲ್ಲಿ.
ನನ್ನ ಮೊದಲ ಅರಿವಿನ ಸಿರಿ ಅವಳು,
ಅವಳಿಂದ ಕಲಿತದ್ದು ಎಂದು ಮರೆಯಲಾಗದು.
ಎಲ್ಲರನ್ನೂ ಕಾಯುವ ಆ ಶಿವನು,
ಅವಳ ಮಮತೆಯನ್ನು ಕಂಡು ಶರಣಾದನು.
ಭೂಮಿಯ ಮೇಲೆ ತ್ಯಾಗ ಪ್ರತೀಕ ಅವಳು,
ಅವಳಿಗೆ ಸಮಾನರು ಇನ್ಯಾರು?
ಕರುಣೆಯೇ ಅಳಿಸಿದ ಮಾನವ ಲೋಕದಲ್ಲಿ,
ಅದನ್ನು ಉಳಿಸಿದ ಕರುಣಾಮಯಿ ಅವಳು.
ನನ್ನ ಕಣ್ಣೀರಿನಲ್ಲಿ ಕಣ್ಣೀರಾಗುವವಳು,
ನಗುವಿನಲ್ಲಿ ನಗುವಾಗುವವಳು,
ತನ್ನ ಜೀವನವೇ ನನಗೆ ಮುಡುಪಾಗಿಡುವವಳು.
ನಾನು ಕಂಡಿಲ್ಲ ನಿಜವಾದ ದೇವರನ್ನು,
ಇರಬಹುದು ಇವಳಂತೆ ಅವನು.
ಪ್ರೀತಿಗೆ ಇನ್ನೊಂದು ಹೆಸರು ಅವಳು,
ಅವಳ ಪ್ರೀತಿಯ ಪಡೆದ ನಾನು ಪುಣ್ಯವಂತನು.
– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ