ಚುಕ್ಕೆ ಮತ್ತು ಮಕ್ಕಳು 

Share Button
Chandragouda Kulakrani1
ಚುಕ್ಕಿ ಬಳಗದ  ಚಂದ್ರನಶಾಲೆ
ಬಟ್ಟ ಬಯಲಿನ ಆಕಾಶ   |
ರಾತ್ರಿ ಹೊತ್ತು ಸುರುವಾದ್ರದಕೆ
ಬೆಳಗಿನ ವರೆಗೂ ಅವಕಾಶ |
 ‘
ಆಟ ಆಡ್ತಾ ಕಲಿಯುವ ಚುಕ್ಕೆಗೆ
ಬೇಸರವೆಂಬುದೆ ಗೊತ್ತಿಲ್ಲ |
ಗಾಳಿ ಆಡದ ಕ್ಲಾಸ್ ರೂಮಲ್ಲಿ
ಕೂಡಿ ಹಾಕಿದ ಭಯವಿಲ್ಲ |
 
ಟ್ಯೂಶನ್ ಗೀಶನ್ ಹೋಂ ವರ್ಕಂತ
ಚುಕ್ಕೆಗೆ ಚಂದ್ರನು ಕಾಡೊಲ್ಲ |
ಅಪ್ಪ ಅಮ್ಮ ಆಡ ಬ್ಯಾಡಂತ
ದಿನವೂ ಕಿರಿಕಿರಿ ಮಾಡೊಲ್ಲ |
 ‘
ನಗುತ ನಗುತ  ಕಲಿಯುವ ಚುಕ್ಕೆstar
ಫಳ ಫಳ ಫಳ ಫಳ ಹೊಳೆಯುವವು |
ಒತ್ತಡದಲ್ಲಿ ಕಲಿಯುವ ಮಕ್ಕಳು
ಚಣ ಚಣ ದಿನ ದಿನ ಬಳಲುವವು |
 ‘
ಪುಟ್ಟಾ ಪುಟ್ಟಾ ಪ್ರಯೋಗದಿಂದ
ಹೊಸಹೊಸದನ್ನು ಕಲಿಯುದಕೆ |
ಎಳ್ಳಷ್ಟಾದರೂ ಸಮಯವಿಲ್ಲ
ಅದಕೆ ಮಕ್ಕಳಿಗೆ ವಾಕರಿಕೆ |
 .
– ಚಂದ್ರಗೌಡ ಕುಲಕರ್ಣಿ
.
.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: