ಮಲೆನಾಡ ಕೋಗಿಲೆ ಬಿ.ಕೆ. ಸುಮಿತ್ರಮ್ಮ…

Share Button

BK sumitra

ಇದೊಂದು ಅಪರೂಪದ ಸಂದರ್ಭ.ನಾಡು ಕಂಡ ಅತ್ಯಂತ ಅಪರೂಪದ ಗಾಯಕಿ ಬಿ.ಕೆ.ಸುಮಿತ್ರಮ್ಮನಿಗೆ 75 ವಸಂತಗಳು ತುಂಬಿದ ಸಂಭ್ರಮದಲ್ಲಿ ನಾನು ಪಾಲ್ಗೊಂಡ ಕೆಲ ಕ್ಷಣಗಳನ್ನು ಬರವಣಿಗೆಯ ಮೂಲಕ ಓದುಗರೊಂದಿಗೆ ಹಂಚಿಕೊಳ್ಳುವ ಸದಾವಕಾಶ.ನಮ್ಮೂರು ತೀರ್ಥಹಳ್ಳಿ. ಅಲ್ಲಿ ಸಾಮಾನ್ಯವಾಗಿ ಶಾಲಾ ಕಾಲೇಜಿನ ದಿನಗಳ ನಡುವೆ ಬರುತ್ತಿದ್ದ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ನಾವು ದಾರಿಯಲ್ಲಿ ಕೇಳುತ್ತಿದ್ದ ಹಾಡುಗಳೆಂದರೆ, ನಂಬಿದೆನಿನ್ನಾ ನಾಗಾಭರಣ, ನಿಂಬೀಯಾ ಬನಾದ ಮ್ಯಾಗಳ ಹೀಗೆ ಅನೇಕ ಗೀತೆಗಳನ್ನು ಆಲಿಸುತ್ತಾ ದಾರಿ ಸಾಗಿಸುತ್ತಿದ್ದೆವು. ಆಗೆಲ್ಲಾ ಅನಿಸುತ್ತಿತ್ತು. ಯಾರ ದನಿಯೋ ಇದು..ಎಷ್ಟು ಚಂದ ಹಾಡ್ತಾರೆ ಅಂತಾ ಸ್ನೇಹಿತರೆಲ್ಲರೂ ಮಾತಾಡ್ತಿದ್ವಿ.

ಕಾಲೇಜು ದಿನಗಳು ಕಳೆದು ಕೆಲಸಕ್ಕಾಗಿ ಬೆಂಗಳೂರು ಸೇರಿದಾಗ ನನ್ನದೇ ಕಾಯಕದ ನಂಟು ಬಿಡಲಿಲ್ಲ.ಅವರಿವರ ಪರಿಚಯದಿಂದ ವೇದಿಕೆಯಲ್ಲಿ ನಿರೂಪಿಸುವ ಅಕಾಶಗಳು ಲಭ್ಯವಾಗುತ್ತಾ ಹೋಯಿತು.ಪ್ರತೀ ಕಾರ್ಯಕ್ರಮದಲ್ಲೂ ಅನೇಕರ ಪರಿಚಯವಾಗುತ್ತಿತ್ತು.ಅಂತೆಯೇ ಒಂದು ಕಾರ್ಯಕ್ರಮ..ಆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ನಾಡೋಜ ಬಿ.ಕೆ.ಸುಮಿತ್ರಮ್ಮ, ಕಾರ್ಯಕ್ರಮದ ಕೊನೆಯಲ್ಲಿ ಕರೆದು ನಿನ್ನ ಹೆಸರೇನು ಮರಿ ಎಂದರು….ಅವರ ಮಾತಿನಲ್ಲೇ ಮಲೆನಾಡಿನ ಪ್ರೀತಿ,ವಾತ್ಯಲ್ಯ,ಮಮಕಾರ ತುಂಬಿತ್ತು ಎಂದಲ್ಲಿ ಉತ್ಪ್ರೇಕ್ಷೆಯಲ್ಲ. ನಿಧಾನವಾಗಿ ಮಾತನಾಡಿಸುತ್ತಾ ಒಂದು ಬಾಂಧವ್ಯ ಬೆಳೆಯಿತು.ತದನಂತರ ಅನೇಕ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಮಾತನಾಡುತ್ತಾ ವಿಶ್ವಾಸವೂ ಬೆಳೆಯುತ್ತಾ ಹೋಯಿತು.

ಈ ಮೇರು ಗಾಯಕಿಗೆ 75 ರ ಹುಟ್ಟು ಹಬ್ಬವನ್ನು ಮಾಡಲು ತೀರ್ಮಾನಿಸಿದಾಗ ನನ್ನನ್ನು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿಸಿಕೊಂಡು ಅನೇಕ ಜವಾಬ್ದಾರಿ ಕೆಲಸಗಳನ್ನು ಮಾಡಲು ಅವಕಾಶಿಸಿದ್ದು ಅವರ ದೊಡ್ಡತನ ಎನ್ನಬಹುದು..ಯಾವತ್ತೂ ತುಂಬಿದ ಕೊಡ ಬಿ.ಕೆ.ಸುಮಿತ್ರಮ್ಮ. ಅವರ ಮನೆಗೂ ಅನೇಕ ಬಾರಿ ಆಹ್ವಾನವಿತ್ತರು. ಒಮ್ಮೆ ಬಿಸಿ-ಬಿಸಿ,ಗರಿ-ಗರಿ ಮಸಾಲದೋಸೆ ಮಾಡುತ್ತೇನೆಂದು ತಿಂಡಿಗೇ ಕರೆದಾಗ ಅಮ್ಮನ ಮನೆಗೆ ಹೋಗುವಷ್ಟು ಸಂಭ್ರಮದಿಂದ ರೆಡಿಯಾಗಿ ಹೋಗಿ ಅವರ ಉಪಾಚಾರವನ್ನೂ ಸ್ವೀಕರಿಸಿದ್ದಾಯಿತು. ನಂತರ ಆ ಕಾರ್ಯಕ್ರಮದ ಕುರಿತು ಕೆಲವು ವಿಚಾರಧಾರೆಗಳನ್ನು ಮಾತನಾಡಿ ಅವರ ಬಗೆಗಿನ ಗ್ರಂಥ ಹೊರತರುವ ಕಾಯಕದಲ್ಲಿ ನನ್ನನ್ನೂ ಆ ಕಮಿಟಿಗೆ ಸೇರಿಸಿ,ಅದರ ಸಹಸಂಪಾದಕತ್ವದ ಹೊಣೆ ಹೊರಿಸಿದರು.

ಆದರೂ ಬೆಂಬಿಡದೇ ಅವರ ಮಾರ್ಗದರ್ಶನದಲ್ಲಿ ಆ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡೆ. ನಂತರದ ದಿನಗಳಲ್ಲಿ ಅವರ ಕುರಿತ ಕಿರುಚಿತ್ರದ ಶೂಟಿಂಗ್‌ನಲ್ಲೂ ಭಾಗಿಯಾದೆ.ಹೀಗೆ ಸಂಪೂರ್ಣವಾಗಿ ಅವರೊಟ್ಟಿಗೆ ಅವರ ಆ ಶುಭಸಂದರ್ಭಕ್ಕಾಗಿ ಮೂರು ತಿಂಗಳಕಾಲ ಅವಿರತ ಶ್ರಮ ಸಾರ್ಥಕ ಮನೋಭಾವ ತಂದಿತು.ಅವರ ಬಗೆಗೆ ಅವರ ಸ್ನೇಹಿತರು ಬರೆದ ಲೇಖನಗಳನ್ನು ಓದುತ್ತಾ ಓದುತ್ತಾ, ಸುಮಿತ್ರಮ್ಮ ಅವರ ಕಾರ್ಯ ವೈಖರಿಯ ಅಂತರಾಳದ ಮನನವಾಯಿತು.ಅಲ್ಲದೇ ಚಿತ್ರಗೀತೆ,ಭಕ್ತಿಗೀತೆ,ಭಾವಗೀತೆಗಳ ಸಾಲು ಸಾಲು ಕಣ್ಮುಂದೆ ಸಾಗುತ್ತಿತ್ತು.

 

Sandhya-BK Sumitra    Sandhya Bhat

ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು, ಮಧುರ ಮಧುರವೀ ಮಂಜುಳಗಾನ, ಅ,ಆ,ಇ,ಈ,ಕನ್ನಡದ ಅಕ್ಷರ ಮಾಲೆ,  ಗೀತೆಗಳು ವೇದಿಕೆಯಲ್ಲಿ ಕೇಳುತ್ತಿದ್ದಾಗ ಒಂದೊಮ್ಮೆ ಸುಮಿತ್ರಮ್ಮನನ್ನು ಹತ್ತಿರದಿಂದ ಕಂಡ ನಾನು ಧನ್ಯೆ ಎಂಬ ಭಾವನೆ ಮೂಡುತ್ತಿತ್ತು.ಬೆಂಗಳೂರಿನ ರವೀಂದ್ರಕಲಾಕ್ಷೇತ್ರ ಅಂದು ತುಂಬಿ ತುಳುಕುತ್ತಿತ್ತು.ಅದಕ್ಕೆ ಕಾರಣ ಅವರ ಸ್ನೇಹಬಳಗ..ಹಬ್ಬದ ದಿನವಾಗಿ ಮಾರ್ಪಟ್ಟ ಆ ಗಳಿಗೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಅಂದೂ ಕೂಡಾ ಆ ಕಾರ್ಯಕ್ರಮದ ನಿರೂಪಣೆಯ ನಿರ್ವಹಣೆ ನನ್ನದು ಎನ್ನುವ ಹೆಗ್ಗಳಿಕೆ. ಸಮರ್ಥವಾಗಿ ನಿಭಾಯಿಸಿ ಅವರುಗಳ ಆಶೋತ್ತರದ ರೂವಾರಿಯಾಗಿ,ವಿವರಿಸುವಾಗ ಮಲೆನಾಡಿನ ಮಗಳೆನ್ನುವ ಸ್ನೇಹ,ಪ್ರೀತಿ ಎಲ್ಲವೂ ಪದಗಳ ಜೋಡಣೆಯಲ್ಲಿ ಸೇರಿ ಹೊರಬರುತ್ತಿತ್ತು.

ಒಟ್ಟಾರೆ ನಾಡು ಕಂಡ ಹೆಸರಾಂತ ಹಿರಿಯ ಗಾಯಕಿ ಬಿ ಕೆ ಸುಮಿತ್ರಮ್ಮ ಅಂದು ರಾಣಿಯಂತೆ ಕಂಗೊಳಿಸಿದರು..ಜೊತೆಗೆ ನಮ್ಮನ್ನೂ ಮೆರೆಸಿದರು.ಅವರಲ್ಲಿನ ಸರಳತೆ,ಸಜ್ಜನಿಕೆ,ನೋಡಿ,ತಿಳಿಯುವ ಅದೆಷ್ಟೋ ವಿಚಾರಗಳು,ಹಿರಿಯರಾಗಿ ಎಲ್ಲರನ್ನು ಪ್ರೀತಿಸುವ ಅವರ ಮನಸ್ಸು ಯಾವಾಗಲೂ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಭಾಗಿಯಾಗುತ್ತಾ ಮಿಕ್ಕವರನ್ನೂ ಪ್ರೋತ್ಸಾಹಿಸುವ ಅವರ ಗುಣ ನನ್ನನ್ನು ಆವರಿಸಿದ್ದು ಸುಳ್ಳಲ್ಲ.

ಸುಮಿತ್ರಮ್ಮ always love you ..

 

 – ಸಂಧ್ಯಾ ಭಟ್

3 Responses

  1. Krishnamurthy kulkarni says:

    ನೈಸ್ ಜೀ really she is THE BEST.

  2. Ranganna Nadgir says:

    There was a program of Smt.Sumitra @Dharawad On 21-06-16, She sung “sampige marada Hasurele naduve kogile hadittu” and other old songs.

  3. ಸತೀಶ್ ಜೋಷಿ says:

    ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ನಾನು ಚಿಕ್ಕವನಾಗಿದ್ದಾಗ ಸಂಪಿಗೆ ಮರದಾ ಹಾಡನ್ನು ಊರವರೆಲ್ಲಾ ಹಾಡಿಸಿ ಕೇಳ್ತಿದ್ರು, ಆಗಿನಿಂದಾ ನನಗೆ ಬಿ.ಕೇ. ಸುಮಿತ್ರ ಅವ್ರ ಧ್ವನಿಯ ಪರಿಚಯ ಆಗಿದ್ದು. ಆಗಾಗ ಅವರ ಬಗ್ಗೆ ಲೇಖನಗಳನ್ನ ಓದ್ತಾ ಇರ್ತೀನಿ, ಕನ್ನಡದ ಗಾಯಕಿಗೆ ಅವರ ಸಮಕಾಲೀನರಷ್ಟು ಸ್ಥಾನಮಾನ ಸಿಗಲಿಲ್ಲಾ ಅನ್ನೋದು ನಿಜವಾಗಿಯೂ ಬೇಸರದ ವಿಷಯ. ಅದೆಲ್ಲವನ್ನೂ ಲೆಕ್ಕಿಸದೆ ಸಂಗೀತ ಸೇವೆಯಲ್ಲಿ ಮುಳುಗಿರುವ ಈ ಕನ್ನಡದ ಕೋಗಿಲೆ ನಿರಂತರವಾಗಿ ಹಾಡುತ್ತಿರಲಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: