ಕೋಗಿಲೆ
ಈ ನಡುವೆ ಪದೇ ಪದೇ ಕೋಗಿಲೆ ಕೂಗು ನಿಮ್ಮ ಕಿವಿಗೆ ಕೇಳಿಸುತ್ತಿದೆ ಅಲ್ಲವೇ? ಆದರೆ ಕಣ್ಣಿಗೆ ತಕ್ಷಣಕ್ಕೆ ಕಾಣುವುದಿಲ್ಲ ಕಂಡರು ಗಂಡು ಹೆಣ್ಣು ಜೊತೆಯಲ್ಲಿ ಸಿಗುವುದಿಲ್ಲ ಅಲ್ಲವೆ…ನೀವು ಪಕ್ಷಿ ವೀಕ್ಷಣೆ ಮಾಡೊ ಹವ್ಯಾಸ ಬೆಳಸಿ ಕೊಂಡರೆ ಇದೆಲ್ಲಾ ಸಾದ್ಯವಾಗುತ್ತದೆ (ಕೆಲವು ನಿಯಮಗಳನ್ನು ಪಾಲಿಸ ಬೇಕಾಗುತ್ತದೆ) ನಿಮಗೆ ಇನ್ನಷ್ಟು ಕುತೂಹಲ ಹೆಚ್ಚಿಸಲು.. ಕೋಗಿಲೆಗಳಲ್ಲಿ ಎಂಬತ್ತು ಥರ ಇದೆಯಂತೆ. ಅಬ್ಬಾ ..ಯಾವ ಮಾವಿನ ಮರದ ಚಿಗರು ಎಲೆ ಹಿಂದೆ ಅಡಗಿವೆಯೊ ಅಲ್ಲವೇ?
ಅವುಗಳು ಉಳಿಯ ಬೇಕೆಂದರೆ ನಾವು ಮರಗಳನ್ನು ಬೆಳಸ ಬೇಕು…ಅವು ಮುಂದಿನವರಿಗೂ ನೋಡಲು ಸಿಗಬೇಕು.
ಮೇಲಿನ ಚಿತ್ರದಲ್ಲಿ, ಕಪ್ಪು ಬಣ್ಣದ ಹಕ್ಕಿ ಗಂಡು ಕೋಗಿಲೆ. ವಸಂತ ಮಾಸದಲ್ಲಿ ‘ಕುಹೂ ..ಕುಹೂ..’ ಎಂದು ಹಾಡುವ ಕೀರ್ತಿ ಇದಕ್ಕೆ ಸಲ್ಲುತ್ತದೆ. ಹೆಣ್ಣು ಕೋಗಿಲೆಯ ಗರಿಗಳಲ್ಲಿ ಬಿಳಿ ಚುಕ್ಕೆಗಳಿರುತ್ತವೆ. ಹೆಣ್ಣು ಕೋಗಿಲೆಯು ತನ್ನ ಮೊಟ್ಟೆಗಳನ್ನು ಕಾಗೆಯ ಗೂಡಿನಲ್ಲಿ ಇಟ್ಟು ಕಾವು ಕೊಡಿಸುವ ಪಕ್ಷಿ ಎಂಬ ಕುಖ್ಯಾತಿ ಪಡೆದಿದೆ!
– ಶೈಲಜೇಶ್ ರಾಜ, ಮೈಸೂರು
ಅಪರೂಪದ ಛಾಯಾಚಿತ್ರ…ಧನ್ಯವಾದಗಳು…
Very nice information and well narrated.. Of course nice picture! Please keep writing about birds 🙂