ತೇನಸಿಂಗ್ …ಗೋಪಮ್ಮ…ಅನ್ನಪೂರ್ಣ…!

Share Button

gopakka-annapoorna-sept-2016

ಹಸನ್ಮುಖಿಯರಾಗಿ ಫೋಟೊಕ್ಕೆ ಫೋಸ್ ಕೊಟ್ಟ ಇವರು ಶ್ರೀಮತಿ ಗೋಪಮ್ಮ ಮತ್ತು ಶ್ರೀಮತಿ ಅನ್ನಪೂರ್ಣ ಕುರುವಿನಕೊಪ್ಪ. ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಗಂಗೋತ್ರಿ ಘಟಕದ ಆಜೀವ ಸದಸ್ಯೆಯರು. ಜೀವನದಲ್ಲಿ ಒಮ್ಮೆಯಾದರೂ ಹಿಮಾಲಯಕ್ಕೆ ಚಾರಣ ಕೈಗೊಳ್ಳಬೇಕೆಂಬ ಹಪಾಹಪಿ ಇರುವ ಯುವ ಮನಸ್ಸುಗಳಿಗೆ ಅಚ್ಚರಿಯಾಗುವಂತೆ, ಈ ಹಿರಿಯ ನಾಗರಿಕರಿಗೆ ಹಿಮಾಲಯವೇ ತವರುಮನೆಯಾಗಿದೆ.

ಕೈಲಾಸ ಮಾನಸ ಸರೋವರ ಯಾತ್ರೆ, ಅನ್ನಪೂರ್ಣ ಪರ್ವತ ಸುತ್ತು ಚಾರಣ, ಅಮರನಾಥ ಯಾತ್ರೆ , ಚಂದ್ರಕಾಣಿ ಪಾಸ್, ಸರ್ಪಾಸ್, ಕುಲು-ಮನಾಲಿಯ ಸುತ್ತುಮುತ್ತಲಿನ ಪರ್ವತಗಳಿಗೆ ಚಾರಣ ಇತ್ಯಾದಿ ಇದುವರೆಗೆ ಇಪ್ಪತ್ಮೂರು ಬಾರಿ ಹಿಮಾಲಯದ ಮಡಿಲಿಗೆ ಹೋಗಿ ಬಂದ ಹೆಗ್ಗಳಿಕೆ ಇವರದು. ಇದಲ್ಲದೆ, ಕರ್ನಾಟಕ ಮತ್ತು ದೇಶದ ಇನ್ನಿತರ ರಾಜ್ಯಗಳ ನೂರಾರು ಚಿಕ್ಕ – ದೊಡ್ಡ ಪರ್ವತಗಳ ನೆತ್ತಿಯಲ್ಲಿ ತಮ್ಮ ಹೆಜ್ಜೆ ಮೂಡಿಸಿದ್ದಾರೆ.

ಇವರ ಆತ್ಮೀಯ ನಡವಳಿಕೆ, ನಾಯಕತ್ವ ಗುಣ, ತಂಡ ಸ್ಪೂರ್ತಿ ಮತ್ತು ಸಾಹಸ ಪ್ರವೃತ್ತಿಯನ್ನು ಗಮನಿಸಿದ ರಾಷ್ಟ್ರೀಯ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಸಂಸ್ಥೆಯು ತಾನು ಆಯೋಜಿಸುವ ಹಲವಾರು ಕಾರ್ಯಕ್ರಮಗಳಲ್ಲಿ ಕ್ಯಾಂಪ್ ಲೀಡರ್ , ಫೀಲ್ಡ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಲು ಹಲವಾರು ಬಾರಿ ಆಮಂತ್ರಣ, ಅವಕಾಶ ನೀಡಿ ಗೌರವಿಸಿದೆ.

ಅತಿ ಸೂಕ್ಷ್ಮ ಸ್ವಭಾವವನ್ನು ಮೈಗೂಡಿಸಿಕೊಂಡು ಚಾರಣ ಮಾಡಲು ನಮ್ಮ ಕೈಲಾಗುವುದಿಲ್ಲ ಎಂದು ಹಿಂಜರಿಯುವ ಮನೋಸ್ಥಿತಿ ಇರುವ ಎಳೆಯ ಯುವಕ, ಯುವತಿಯರ ನಡುವೆ, ತಮ್ಮ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಕ್ಯಾರೇ ಅನ್ನದೆ, ಪ್ರಕೃತಿಯ ನೈಜ ಸೊಬಗನ್ನು ಸವಿಯುವ ಇವರ ಉತ್ಸಾಹಕ್ಕೆ ಶರಣು. ಚುರುಕಾಗಿ ಓಡಾಡುತ್ತಾ, ಅರಳು ಹುರಿದಂತೆ ಮಾತನಾಡುತ್ತಾ, ಸಾಂದರ್ಭಿಕವಾಗಿ ಲಾವಣಿ ಹಾಡನ್ನು ಹಾಡುತ್ತಾ ಕಲಾವಂತಿಕೆಯನ್ನೂ ಪ್ರಸ್ತುತಪಡಿಸುತಾರೆ.

ಶ್ರೀಮತಿ ಗೋಪಮ್ಮ ಕೆ.ಎಮ್. (ಚಿತ್ರದಲ್ಲಿ ಎಡಭಾಗದಲ್ಲಿರುವವರು) ಅವರು ಮೂಲಕ: ಹಾಸನ ಜಿಲ್ಲೆಯ ಸಕಲೇಶಪುರ ಜಿಲ್ಲೆಯವರು. ತಮ್ಮ ವಿದ್ಯಾಭ್ಯಾಸದ ನಂತರ ಸಹಕಾರ ಇಲಾಖೆಯಲ್ಲಿ 38 ವರ್ಷಗಳ ಕಾಲ ಉದ್ಯೋಗ ನಿರ್ವಹಿಸಿ ಸೇವೆಯಿಂದ ನಿವೃತ್ತರಾದವರು. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದು ಚಾರಣ, ಪರಿಸರ, ಸಮಾಜಸೇವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

ಶ್ರೀಮತಿ ಅನ್ನಪೂರ್ಣ (ಚಿತ್ರದಲ್ಲಿ ಬಲಭಾಗದಲ್ಲಿರುವವರು) ಅವರು ಮೂಲತ: ಹಾವೇರಿ ಜಿಲ್ಲೆಯವರು. ಬಾಲ್ಯದಲ್ಲಿ ‘ಹಂಪಮ್ಮ ಕೋಟಿ’ ಎಂಬ ಹೆಸರನ್ನು ಹೊಂದಿದ್ದು ವಿವಾಹಾನಂತರ ಹೆಸರು ಬದಲಾಯಿಸಿಕೊಂಡರು. ಮೈಸೂರಿನಲ್ಲಿ ವಾಸವಾಗಿದ್ದಾರೆ. ಇವರು ಸದ್ಗೃಹಿಣಿ. ಚಾರಣ, ಹೊಲಿಗೆ, ಅಡುಗೆ ಇತ್ಯಾದಿಗಳಲ್ಲಿ ಆಸಕ್ತಿ. ಇವರೊಂದಿಗೆ ಪ್ರವಾಸ ಹೊರಟವರೆಲ್ಲರಿಗೂ ಸಾಕಾಗುವಷ್ಟು ರುಚಿ-ರುಚಿಯಾದ ವಿವಿಧ ಅಡುಗೆಯನ್ನು ತಯಾರಿಸಿ ಕೈಯಾರೆ ಬಡಿಸಿ ತಾನು ಸಂತೋಷಪಡುತ್ತಾ ‘ಅನ್ನಪೂರ್ಣ’ ಹೆಸರನ್ನು ಅನ್ವರ್ಥಗೊಳಿಸುತ್ತಾರೆ.

ಸೆಪ್ಟೆಂಬರ್ 09 ರಿಂದ 25, 2016 ವರೆಗೆ, ಚಾರ್ ಧಾಮ್ ಯಾತ್ರೆಯಲ್ಲಿರುವ ನಮ್ಮ ತಂಡದ ಹಿರಿಯ ಯಾತ್ರಾರ್ಥಿಗಳಿವರು. 65 ರ ವಯಸ್ಸಿನ ಇವರಿಬ್ಬರಿಗೂ, ಚಾರಣದ ಬಗ್ಗೆ ಆಸಕ್ತಿ ಬರಲು ಮೂಲ ಕಾರಣ ತಮ್ಮ ಬಾಲ್ಯದಲ್ಲಿ, ಅಂದಿನ ಐದನೆಯ ತರಗತಿಯ ಪಠ್ಯದಲ್ಲಿದ್ದ ‘ತೇನಸಿಂಗ್’ ನ ಬಗ್ಗೆ ಇದ್ದ ಅಧ್ಯಾಯವಂತೆ.

tenzing-norgay

ಎತ್ತಣ ತೇನಸಿಂಗ್’…..ಎತ್ತಣ ಸಕಲೇಶಪುರ……ಎತ್ತಣ ಹಾವೇರಿ…!!! ಹಿಮಾಲಯದ ಪರ್ವತಾರೋಹಣಕ್ಕೆ ಒಂದು ಭಾಷ್ಯವನ್ನೇ ಬರೆದ ಮಹಾನ್ ತೇನಸಿಂಗ್ ಅವರಿಗೂ, ಇಂದಿನ ಕಿರಿಯ ಚಾರಣಾಸಕ್ತರಿಗೆ ಸ್ಪೂರ್ತಿ ತುಂಬುವ ಈ ಮಹಿಳಾಮಣಿಯರಿಗೂ ಗೌರವಪೂರ್ವಕವಾದ ಸೆಲ್ಯೂಟ್!!

 

 – ಹೇಮಮಾಲಾ.ಬಿ. ಮೈಸೂರು

 

7 Responses

 1. Pushpa Nagathihalli says:

  ಮೂರುವರ್ಷದ ಹಿಂದೆ ನಮ್ಮ ಸ್ನೇಹಿತೆಯರ ಗುಂಪಿನೊಂದಿಗೆ ಚಾರ್ ಧಾಮ್ ಯಾತ್ರೆ ಮಾಡಿದ್ದೆ.ಅದೊಂದು ಅದ್ಭುತ ಅನುಭವ.ನೆನೆಸಿಕೊಂಡಾಗಲೆಲ್ಲಾ ಮನಸ್ಸಿಗೆ ಮುದಕೊಡುತ್ತದೆ.ಈನಿಮ್ಮಯಾತ್ರೆಯ ಖುಷಿ ನೋಡಿ ಮತ್ತೊಮ್ಮೆ ಹೋಗಬೇಕೆನಿಸುತ್ತಿದೆ

 2. Rama Mv says:

  Hip hip hurray GOPi n Annapurna.

 3. Shyamala Kashyap says:

  ನಿಜ ಹೇಮ ಮೇಡಂ . ಗೋಪಕ್ಜನ ಜೊತೆ ಚಾರಣ ಮಾಡುವುದೆ ಒಂದು ಅದ್ಭುತವಾದ ಅನುಭವ . . . ಆವರ ಉತ್ಸಾಹ . ಚೈತನ್ಯ ವಾಹ್ ವರ್ಣಿಸಲು ಅಸಾದ್ಯ . . . ನನ್ನದು ಒಂದು ಸೆಲ್ಯೂಟ್ !

 4. Shruthi Sharma says:

  Hats Off to both!

  I remember my small trips with them which are now very good memories for me 🙂 They are the most energetic among all in the group and they maintain the same energy level from start to end and spread that energy and liveliness to all the members, which is very much inspiring!

  As usual, nice write up 🙂

 5. h.s.vathsala says:

  ಗೋಪಮ್ಮ ಇಸ್ ದಿ ಸೀಕ್ರೆಟ್ of ಮೈ ಎನರ್ಜಿ ಅಲ್ವಾ ಹೇಮಾ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: