ಕನ್ನಡಾಮೃತಂ

Share Button

Nagesha MN

ಸುರಲೋಕಂ, ಸುರಗಂಗಾ ಸ್ನಾನಂ
ಕಾಮಧೇನು, ಕಲ್ಪತರು ಸಮಾನಂ
ಆಲಿಸೆ ಸರ್ವದಾ, ಕರ್ಣಾನಂದಕರಂ
ಕನ್ನಡ ಕನ್ನಡ, ನಲ್ನುಡಿ ಸವಿ ಮಧುರಂ ||

ತ್ರಿಮೂರ್ತಿಗಣ, ಸಂಭಾಷಿತ ಪೂಜ್ಯಂ
ಸೃಜಿತಂ ಸೃಜನಂ, ಸಜ್ಜನ ವಾದ್ಯಂ
ಸೃಷ್ಟಿ ಸ್ಥಿತಿ ಲಯಂ, ಭೌತಿಕ ವಿಶೇಷಂ
ಅಭೌತಿಕ ಅಲೌಕಿಕ, ಕನ್ನಡ ಸಾಹಿತ್ಯಂ ||

ಚತುರ್ಮುಖ ಬ್ರಹ್ಮ, ಲೇಖ ಸಮೂಲಂ
ಸೃಷ್ಟಿಕರ್ತೃ, ಕ್ರಿಯಾತ್ಮಕ ಸಾಧನಂ
ವೀಣಾಪಾಣಿ, ಸರಸ್ವತಿ ಸುಭಾಷಿತಂ
ವೇದೋಚ್ಚಾರ, ಜೇಂಕಾರ ಅನುರಣಂ ||

ಹರಿಗಾನಾಮೃತ, ನಾರದ ನಮನಂ
ಸುಸ್ಥಿತಿಕಾರಕ, ನಾರಾಯಣ ಪ್ರೀತಂ
ಹೃದಯಲಕ್ಷ್ಮೀ, ಸರಸ ಸಲ್ಲಾಪ ದಿವ್ಯಂ
ಜೇನ್ನುಡಿ ಕನ್ನಡ, ವೈಕುಂಠಮೆ ಜಪಿತಂ ||

ಲಯಕಾರಕ ಶಿವಂ, ಹಿಮಾಲಯ ದೇವಂ
ಪಾರ್ವತೀ ಸಮೇತಂ, ವಾಸಿಪ ತಾಣಂ
ಲಯವಾಗದ ನುಡಿ, ಕನ್ನಡ ಜಪ ತಪಂ
ನಿರ್ಭೀತ ಗಣಂ, ಆರಾಧನ ಮಹೋತ್ಸವಂ ||

ಮುಕ್ಕೋಟಿ ದೇವಗಣ, ಸ್ತುತಿಪ ಕನ್ನಡಂ
ಎದೆಗೂಡ ಗಾಢ, ನಿಗೂಢ ಅಸಮಂಜಸಂ
ಚಾಮರಂ ವಿಶಾಲ, ಆಶ್ರಿತ ರಕ್ಷಾ ಸದನಂ
ಅರಿ ಭಾವ ಮಧುರಂ, ಮುಗುಳ್ನಗು ವದನಂ ||

kannada-rajyotsava

– ನಾಗೇಶ ಮೈಸೂರು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: