ನಲುಗಿದೆ ಹೃದಯ
ಕಾಣದ ಕೈಗಳ ನಡುವೆ ನಲುಗಿದೆ ಹೃದಯ
ನಿನ್ನ ಕುಡಿ ನೋಟ ಇಂದು ಮಾಯವಾಗಿ ಹೋಗಿದೆ
ಪ್ರತಿ ಗಳಿಗೆಯ ಜೊತೆಯಾಗಿ ಮುನ್ನೆಡೆಸಿದೆ
ಆದರೂ ನೀ ನನ್ನ ಜೊತೆ ಇಲ್ಲವೆಂಬುದೆ
ಬೇಸರದ ಸಂಗತಿ ಜೀವನ ಜೋಕಾಲಿಯ
ತೂಗುವ ಕೈಗಳು ಇಂದು ಅದೃಶ್ಯವಾಗಿವೆ
ಅದೇಕೋ ಗೊತ್ತಿಲ್ಲ ಇಂದು ನಿನ್ನ
ನೆನಪುಗಳೆ ಸುಳಿಯುತ್ತಿವೆ
.
ನಿನ್ನ ಕೋಮಲ ಚಲುವು
ಸಹಿತ ನನಗೆ ಅಪರೂಪವಾಗಿದೆ
ಎಲ್ಲಿ ನೋಡಿದರೂ ನಿನ್ನ ಧ್ವನಿಯ
ಮಾಧುರ್ಯ ಕೇಳಿಸುತ್ತಿತ್ತು
ಇಂದೇಕೋ ಅದರ ಗಾಳಿಯು ಸಹ
ನನ್ನ ಕರ್ಣಗಳಿಗೆ ಬಡಿಯುತ್ತಿಲ್ಲ.
.
ಒಮ್ಮೆ ನಿನ್ನ ಕಣ್ಣ ಮಿಂಚಿನ ಸ್ವರ
ನನ್ನ ಹೃದಯದೀ ಬಂದು ಸುಳಿಯಬಾರದೆ
ಅಂತ ಮನ ಸಾರಿ ಸಾರಿ ಹೇಳುತ್ತಿರುವುದು
ನಿನಗೆ ಕೇಳಿಸದೆ? ಆದರೂ ಬೇಸರವಿಲ್ಲ ಗೆಳತಿ
ಒಂದಲ್ಲ ಒಂದು ದಿನ ನಮ್ಮ ಪ್ರೀತಿಯ ಒಂದಾಗುವುದು
ಎಂಬ ಭರವಸೆಯಲ್ಲಿ ದಿನಗಳ ದೂಡುತ್ತಿರುವೆ
ಬೇಗ ಬಂದು ಸೇರು ನನ್ನ ಮನದರಸಿ.
.
– ನಾಗಪ್ಪ.ಕೆ.ಮಾದರ