ಪಯಣ
ಖಗ-ಮೃಗ ಜೋಡಿಯಂತೆ
ಹೀಗೇ ಸಾಗುತಿರಲಿ
ನಮ್ಮ ಈ ಜೋಡಿ
ನಾ ನಿನಗಾದರೆ
ನೀನೆನಗೆ ಎಂಬಂತೆ
ನನ್ನೊಂಟಿತನಕ್ಕಾಗುತ್ತಿರುವೆ
ಸದ್ಯ ನಿನ್ನ ಜೊತೆ
ಸವೆಯುತಿದೆ ದಾರಿ,
ಮುಂದೇನೋ ಬಲ್ಲೋರು ಯಾರು
ಗೊತ್ತು ಗುರಿಯಿಲ್ಲದೇ
ಸಾಗುತಿದೆ ಪಯಣ
ಗೊತ್ತಿಲ್ಲದ ತಾಣಕೆ ಯಾನ
ದೇವರು ಬೆಸೆದ ಸ್ನೇಹದ
ದಾರ,ಎಲ್ಲ ಗಂಟು
ಗೊಡವೆಗಳೊಡನೆ ಸಾಗಲಿ ಹೀಗೇ
.
– ಸುಮನ ದೇವಾನಂದ