ಹೊಸಗಾಲ
ಹರ್ಷವರ್ಷದ ಒಸಗೆ ತಂತು ಹೊಸಗಾಲ
ಖುಷಿಗಡಲನು ಕಡೆವ ಮಂತು ಹೊಸಗಾಲ
ಸುಡುವ ಕೊಳ್ಳಿಗಳೆದೆಯ ಸುತ್ತುವರಿದಿರುವಲ್ಲಿ
ಅಭಯ ಹಸ್ತವನೆತ್ತಿ ಬಂತು ಹೊಸಗಾಲ
ಅಪಸ್ವರದ ಅಪಶ್ರುತಿಯ ಗೋಳೆ ಬಾಳಾದಾಗ
ಕರುಳಒಳಗನು ಮಿಡಿವ ತಂತು ಹೊಸಗಾಲ
ಮುಖಹೀನ ದಿಗಿಲು ಪರಕೀಯ ತಲ್ಲಣವ ನೀಗಿ
ಇರವ ಬೆಳಗಿದೆ ಪ್ರೀತಿಯಲಿ ನಿಂತು ಹೊಸಗಾಲ
ಶಿಶಿರನಿದ್ರೆಗೆ ಜಾರಿಯೇ ಇದೆ ಕನಸ ಹಕ್ಕಿ ‘ವಿಶು’
ವಸಂತ ಭರವಸೆಯ ಮೊದಲ ಕಂತು ಹೊಸಗಾಲ
.
– ಡಾ.ಗೋವಿಂದ ಹೆಗಡೆ
ಚಂದದ ವರ್ಣನೆ..
ಕವನ ಚೆನ್ನಾಗಿದೆ