ಕುಂದಗೋಳ ಕಾರಹುಣ್ಣಿಮೆ

Share Button
 
ಕುಂದಗೋಳ ಎಂದರೆ   ನಮಗೆ ತುಂಬ ಹೆಮ್ಮೆಯಮ್ಮಾ,
ಸೃಷ್ಟಿಕರ್ತ ಬ್ರಹ್ಮನೇ ಈ ಊರಲಿರುವನಮ್ಮಾ…
ಇಲ್ಲಿನ ಕಾರಹುಣ್ಣಿಮೆ ನಮಗೆ ಖುಷಿ ತರುವ ಹಬ್ಬವಮ್ಮಾ,
ಅಂದು ಸೃಷ್ಟಿಕರ್ತನ ಜಾತ್ರೆ ನೋಡಲು ಬಲು ಸೊಗಸಮ್ಮಾ…

ಈ ಜಾತ್ರೆಯ ನೋಡಲೆಂದು ಭಕ್ತರು ಹರಿದು ಬರುವರಮ್ಮಾ,
ಬ್ರಹ್ಮದೇವರ ದರುಶನ ಪಡೆದು ಧನ್ಯತೆಯಿಂದ ಮರಳುವರಮ್ಮಾ…
 .
ಅಂದು ಸಿಂಗರಿಸಿದ ಎತ್ತುಗಳನು ಹುರಿದುಂಬಿಸಿ ಓಡಿಸುವರಮ್ಮಾ,
ಅವು ಓಡುವಾಗ ಕೇಳುವ ಘಂಟಾನಾದ
ಮನಸಿಗೆ ಮುದನೀಡುವದಮ್ಮಾ…
 .
ಜಾತಿಪಂಥವ ಮೀರಿ ಆಚರಿಸುವ ಈ ಜಾತ್ರೆ ತುಂಬ ವೈವಿಧ್ಯಮಯವಮ್ಮಾ.
ಅಂದು ವೀರಗಾರರಿರುವ ಬಂಡಿ ಓಡಿಸುವ ಪರಿ
ನೋಡಲೆರಡು ಕಣ್ಣು ಸಾಲದಮ್ಮಾ…
 .
ಇಲ್ಲಿನ ಕಾರಹುಣ್ಣಿಮೆಯ ಮಹಿಮೆ ಅಪಾರವಮ್ಮಾ,
ಜಯಬ್ರಹ್ಮಲಿಂಗೋಮ್ ಲಕ್ಷ್ಮೀನಾರಸಿಂಹೋಮ್ ಎಂದು ಹೇಳುತ
ಬ್ರಹ್ಮದೇವರ ಆಶೀರ್ವಾದ ಪಡೆಯೋಣ ಬನ್ನಿರಮ್ಮಾ…
.
– ಮಾಲತೇಶ ಹುಬ್ಬಳ್ಳಿ
.

1 Response

 1. Ranganath Nadgir says:

  ಪ್ರೀಯ ಮಾಲತೇಶ್ , ಕುಂದಗೋಳ್ ಕಾರ ಹುಣ್ಣಿವೆಯ ಕುರಿತಾಗಿ
  ಬರೆದ ಕವನ ತುಂಬಾ ಚನ್ನಾಗಿದೆ .ಜಾತ್ರೆಯ ಯಥಾವತ್ ಚಿತ್ರಣ
  ಮೂಡಿ ಬಂದಿದೆ . ಬಾಲ್ಯದ ದಿನಗಳು. ಸಿಂಗರಿಸಿದ ಎತ್ತುಗಳ ಮೆರವಣಿಗೆ ,ವೀರಗಾರರ
  ಬಂಡಿಗಳು ಬ್ರಹ್ಮದೇವರ ಜಯ ಜಯಕಾರ , ಭಕ್ತರಿಂದ್ ದೀಡನಮಸ್ಕಾರ, ಮಕ್ತುಮ್ ಸಕ್ರಿ ವಿತರಣೆಗಳು ,ಕುಂದಗೋಳದ
  ನಿಮ್ಮ ಮನೆಯ ಮುಂದಿನ ಜನ ಜಾತ್ರೆ ಇತ್ತ್ಯಾದಿ ಕಣ್ಣಮುಂದೆ ಬಂದವು,.ನಿಮ್ಮ ಸಾಹಿತ್ಯ ಕೃಷಿ
  ಹೀಗೆಯೇ ಮುಂದುವರೆಯಲಿ, ನಿಮ್ಮ ಕವಿತೆ ಸಕಾಲದಲ್ಲಿ ಪ್ರಕಟಿಸಿದ್ದಕ್ಕ್ಕೆ ಶ್ರೀಮತಿ ಹೇಮಕ್ಕ ಅವರಿಗೆ ಸಹ
  ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: