ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 3
ದಿಲ್ಲಿಯಲ್ಲಿರುವ ‘ಸಾರಸ್ವತ ಸಾಂಸ್ಕೃತಿಕ ಮಂದಿರ’
08 ಅಕ್ಟೋಬರ್ 2017 ರಂದು ಬೆಳಗ್ಗೆ ದಿಲ್ಲಿಯ ನಿಜಾಮುದ್ದೀನ್ ರೈಲ್ವೇಸ್ಟೇಷನ್ ತಲಪಿದ ನಮ್ಮನ್ನು ತಂಡದ ನಾಯಕರಾಗಿದ್ದ ಮಾರ್ತೇಶ್ ಪ್ರಭು ಅವರು ‘ಸಾರಸ್ವತ ಸಂಸ್ಕೃತಿ ಮಂದಿರ’ಕ್ಕೆ ಕರೆದೊಯ್ದರು. ಅಲ್ಲಿ ಸುಂದರವಾದ ಕೃಷ್ಣನ ಮಂದಿರವಿದೆ. ಯಾತ್ರಿಗಳಿಗೆ ಸ್ನಾನ, ವಿಶ್ರಾಂತಿಗೆ ಅನುಕೂಲಕರವಾದ ವ್ಯವಸ್ಥೆಯಿದೆ. ಈ ಮಂದಿರದಲ್ಲಿ ಪ್ರತಿ ತಿಂಗಳಿನ, ಒಂದು ಭಾನುವಾರದ ದಿನ, ದಾನಿಗಳಿಂದ ಪ್ರಾಯೋಜಿಸಲ್ಪಡುವ ದಾಸೋಹ ಕಾರ್ಯಕ್ರಮವಿದೆ.
ಸಾಮಾನ್ಯವಾಗಿ ಸುತ್ತುಮುತ್ತಲಿನ ಶ್ರಮಿಕ ವರ್ಗ ಮತ್ತು ಬೀದಿಯಲ್ಲಿ ಓಡಾಡುವ ಬಡ ಮಕ್ಕಳು ಈ ದಾಸೋಹದ ಫಲಾನುಭವಿಗಳು. ನಾವು ಹೋಗಿದ್ದ ದಿನ, ನೂರಾರು ಮಂದಿ ಪಂಕ್ತಿಗಳಲ್ಲಿ ಕುಳಿತು, ಪೂರಿ, ಪಲ್ಯ, ಆನ್ನ, ದಾಲ್, ಮತ್ತು ಸಿಹಿಯನ್ನೊಳಗೊಂಡ ಶುಚಿ-ರುಚಿಯಾದ ಭೋಜನ ಸವಿಯುವುದನ್ನು ನೋಡಿದೆವು. ಮಂದಿರದ ಆವರಣದಲ್ಲಿ ಶುಚಿತ್ವ ಮತ್ತು ದಾಸೋಹ ನಿರ್ವಹಣೆಯ ಶಿಸ್ತು ಬಹಳ ಮೆಚ್ಚಿಗೆಯಾಯಿತು. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ.
ಊಟದ ನಂತರ, ನಮಗೆ ಹೊರಡುವ ತಯಾರಿ.ತಂಡದ ಎಲ್ಲರಿಗೂ ಗುರುತಿಸುವಿಕೆಗಾಗಿ ಕೇಸರಿ ಬಣ್ಣದಲ್ಲಿ ‘ಜೈಮಾತಾ’ ಎಂದು ವರೆದಿದ್ದ ಶಾಲೊಂದನ್ನು ಕೊಟ್ಟಿದ್ದರು. ಅದನ್ನು ಕತ್ತಿಗೆ ಹಾಕಿಕೊಂಡು ಗ್ರೂಪ್ ಫೊಟೋ ತೆಗೆದಾಯಿತು. ಮಾರ್ತೇಶ್ ಪ್ರಭು ಅವರು ಮುಂದಿನ ಪ್ರಯಾಣದ ಬಗ್ಗೆ ಮಾಹಿತಿ ಕೊಟ್ಟರು. ಕ್ಯಾಬ್ ಗಳಲ್ಲಿ ನಮ್ಮ ಸರಂಜಾಮುಗಳನ್ನು ಹೇರಿಕೊಂಡು ರೈಲ್ವೇಸ್ಟೇಶನ್ ಗೆ ಬಂದೆವು.
….ಮುಂದುವರಿಯುವುದು..
ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 2 : http://surahonne.com/?p=18454
– ಹೇಮಮಾಲಾ.ಬಿ, ಮೈಸೂರು
ಇಷ್ಟಿಷ್ಟೇ ಆಸೆ ತೋರಿಸಿ ಮುಂದುವರೆಸುತ್ತಿದ್ದೀರಲ್ಲ! ತಡವಾಗಿ ಬಂದ ಓದುಗಳಾದ ಕಾರಣ ಪುಣ್ಯಕ್ಕೆ ಇನ್ನೂ ಹಲವು ಭಾಗಗಳನ್ನು ಒಟ್ಟಿಗೇ ಓದುವ ಸೌಕರ್ಯ ನನಗೆ 😀