ಅಮ್ಮ ದಿನಮಣಿ
ಅಮ್ಮನವಳು ಬಲು ಜಾಣೆ,ಜೀವದಾನವ ಮಾಡುವ ಮಹಾತ್ಯಾಗಿ
ತನ್ನೆಲ್ಲ ತುಮುಲಗಳ ಸೆರಗೊಳಗಿಟ್ಟು ನಗು ನಗುವ ಅನುರಾಗಿ
ನೇಸರನ ಹಿಡಿದು ಬುಟ್ಟಿಯಲಿ ಇಟ್ಟು ನಡೆದಿಹಳು ಬದುಕಿಗೇ ಸ್ಪರ್ದಿಯಾಗಿ.
ತನ್ನ ಶಿರವೇರಿಸಿದ ಹೆಮ್ಮೆಯಲಿಹ
ಅವಳೆಲ್ಲರ ಮಾರ್ಗದರ್ಶಿಯಾಗಿ .
ಹೆಣ್ಣವಳು ಅಬಲೆಯೆಂದೆನುವ ಸತ್ಯ
ನೋವು ದುಗುಡ ದಿನಗಳೆದುರಿಸೆ ನಿತ್ಯ ಸದೃಡ ಆತ್ಮವಿಶ್ವಾಸದ ನಿಲುವಲ್ಲಿಪಥ್ಯ
ತನ್ನ ಹಾದಿಗೂ ಬೆಳಕನೀಯುವ ಆದಿತ್ಯ
.
.
ಕರಪಿಡಿದು ಹೆಜ್ಜೆ ಹಾಕುತಿದೆ ತನ್ನೊಡಲ ಪುಟಾಣಿ ಮಗುವು.
ಜಗಕೆಲ್ಲ ಬೆಳಕ ಚೆಲ್ಲುವ ಸೂರ್ಯನನೇ
ಹೊತ್ತೊಯ್ದಂತೆ ಮನವು.
ಕಲ್ಲು ಮುಳ್ಳುಗಳೊಳಗೆ ಸಾಗಿದರಷ್ಟೇ
ತಿಳಿವುದೀ ಜಗವು.
ಎಂದೆನುವ ಭಾವದಲಿ ತುಂಬುತಿಹಳಲ್ಲಿ
ಶಿಶುವಿನಲಿ ಛಲವು.
.
.
ಧನ ಕನಕ ಏನಿದ್ದರೂ ಅಮ್ಮ ನಿನಗಿಲ್ಲ ಯಾರೂ ಸಾಟಿ ಈ ಜಗದೊಳಗೆ.
ದಿನಕರನೂ ತಾನೊಬ್ಬನಿರದಿರೆ ಎಂತು
ಕಾಣುವರು ಹಗಲು ಮೊಗದೊಳಗೆ.
ನಿತ್ಯ ಸೂರ್ಯನುದಯವೇ ಉಲ್ಲಾಸದಿ ಮೀಯಿಸುತಿದೆಲ್ಲರನು ಬೆಳಕ ಕೊಳದೊಳಗೆ.
ಅಮ್ಮನುಣಿಸುವ ತುತ್ತು ಮುತ್ತಿನ ಸುಖದಲಿಯೆ ಬೆಳೆವುದು ನೋಡು ರಕ್ಷಣೆಯ ಒಡಲೊಳಗೆ.
.
– ಲತಾ(ವಿಶಾಲಿ) ವಿಶ್ವನಾಥ್
.
ಅಮ್ಮ ತನ್ನ ಮಗುವಿಗೆ ಏನು ಬೇಕಾದರೂ ತ್ಯಾಗ ಮಾಡಲು ತಯಾರು