ಅಮ್ಮನೆಂಬ ದೇವತೆ ಇರಲು

Share Button
 
ಅಮ್ಮನೆಂಬ ನೆರಳಿನ
ಅಡಿಯಲಿ ನಾನೊಂದು ಚಿಗುರು
ಈ ಬದುಕು ಕೊಟ್ಟ ದೇವತೆಗೆ
ನಾವಿಟ್ಟಿಹೆವು ಅಮ್ಮ ಎಂಬ ಹೆಸರು
 
ಎಲ್ಲಾ ನೋವು ತಾನೆ ನುಂಗಿ
ನಗುತಲಿರುವ ಮಗುವಿನಂಹವಳು
ತನ್ನ ಹಸಿವ ತೋರಗೊಡದೆ
ಎಲ್ಲರ ಹಸಿವ ನೀಗೋ ಅನ್ನಪೂರ್ಣೆ ಅವಳು
 .
ಏನೇ ಕಷ್ಟ ಬಂದರೂ ಮೊದಲು
ನುಡಿವ ಮಾತೇ ಅಮ್ಮ
ಬೇಗ ಎದ್ದು ಕೊನೆಗೆ ಮಲಗುವ
ನಿಸ್ವಾರ್ಥದ ಕೆಲಸಗಾರ್ತಿ ಅಮ್ಮ
.
ಗಂಡ ಮನೆ ಮಕ್ಕಳನ್ನು
ಸಲಹುವ ಶಕ್ತಿಯೇ ಅಮ್ಮ
ಬಡತನವಿರಲಿ ಸಿರಿತನವಿರಲಿ
ಅವಳದೊಂದೇ ರೀತಿಯ ಪ್ರೇಮ
 .
ಬೆಟ್ಟದಂತ ಕಷ್ಟವನ್ನು ಕರಗಿಸುವುದು
ಅಮ್ಮನೊಲುಮೆಯ ಮಡಿಲು
ಅವಳ ಪ್ರೀತಿಯ ವಿಸ್ತಾರ ಕಂಡು
ಚಿಕ್ಕದಾಯ್ತು ಆ ಮಹಾ ಕಡಲು
ಅಮ್ಮನಂತಹ ದೇವತೆ ಇರಲು
ಬೇರೆ ದೇವರ ಬೇಡುವುದೇಕೆ
ಅಮ್ಮನನ್ನೊಮ್ಮೆ ಖುಷಿ ಪಡಿಸಲು
ಸಾಕವಳಿಗೆ ಅದುವೆ ಕಾಣಿಕೆ

 .

-ಅಮು ಭಾವಜೀವಿ.

1 Response

  1. Shankari Sharma says:

    ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ಅಲ್ಲವೇ.?..ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: