ಅಪ್ಪ ಎಂದರೆ ಹಾಗೆಯೇ..
ಕಣ್ಣೀರು ಹರಿಯುವುದ ನಾನು ಕಾಣಲಿಲ್ಲ
ಮುಖದ ಚಹರೆ ಬದಲಾಗುವುದ ನಾ ನೋಡಲಿಲ್ಲ
ಮುಗುಳ್ನಗೆಯ ಹಿಂದೆ ಏನಿದೆ ಗೊತ್ತಾಗಲೇ ಇಲ್ಲ..
ಅವರು ಹಾಗೆಯೇ..ಏನೂ ತೋರುವುದಿಲ್ಲ..!
ಎಲ್ಲರ ಮುಂದೆ ನನ್ನ ಹೊಗಳುವರು
ಪತ್ನಿಯ ಮುಂದೆ ಗರ್ವ ಪಡುವರು..
ನಾಳೆಯ ನೆನೆದು ಕೊಂಚ ವಿಚಲಿತರಾಗುವರು..
ಅವರು ಹಾಗೆಯೇ..ಏನೂ ತೋರುವುದಿಲ್ಲ..!
ಅವರನ್ನು ಆಕಾಶವೆನ್ನಲೆ?
ಮೋಡ ಸರಿದಾಗ ಕಾಣುವ ವಿಶಾಲತೆಯಂತೆ..
ತಾಯಿ ಮಡಿಲಲಿ ನನ್ನ ಕಂಡು ಖುಶಿ ಪಡುವರು
ಆಕಾಶದಷ್ಟು ಆಸೆ ಇಟ್ಟವರು..
ಅವರು ಹಾಗೆಯೇ..ಏನೂ ತೋರುವುದಿಲ್ಲ..!
ಅರೆಗಳಿಗೆ ಕಣ್ಮರೆಯಾದರೆ ನಾ..
ಜಲಪಾತ ಧಾರೆ ಇಳಿವವು ನನ್ನ ತಾಯಿ ಕಂಗಳಲಿ
ದುಖಃ ಸಾಗರವೇ ತುಂಬಿರಲಿ ಅಪ್ಪನ ಹೃದಯದಲಿ
ಒಂದು ಹನಿವೂ ಹರಿಯದು ನನ್ನೆದುರಲಿ..
ಅವರು ಹಾಗೆಯೇ..ಏನೂ ತೋರುವುದಿಲ್ಲ..!
-ನಾಗರಾಜ್ ಮುಕಾರಿ (ಚಿರಾಭಿ) , ಕೈಗಾ ಕಾರವಾರ
ಅಪ್ಪನ ನೆನೆದು ಬರೆದ ಕವನ ಚೆನ್ನಾಗಿದೆ.
ಅಪ್ಪ ಎಂದರೆ ನಮಗೆ ಚಪ್ಪರದಂತಿರುವ ಆತ, ಅನಾಮಿಕನಂತಿರುವುದನ್ನು ಕವಿತೆಯಲ್ಲಿ. . . .(ವಿಷಾದದಿಂದ ಹೇಳುವುದಾದರೆ) ಚನ್ನಾಗಿ ಚಿತ್ರಿಸಿದ್ದಿರಿ.