ಕುರುಡು ಕನಸು
ಮೆತ್ತಗಾದ ಮೈ ಕತ್ತಲಾದ ಮನಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು
ಬಳಲಿ ತೊಳಲಿ ಬೆಂದು ನೊಂದು ನೋವು ನುಂಗಿ
ಅಡರಿ ದೇಹ, ತಬ್ಬಿ ತನುವ ಬಿಗಿದು ಕೈ
ಸೆಟೆದು ಮೈ, ದುಡಿದು ದಣಿದು ದಿನವು ತಣಿದು
ಸೋತು ಸತ್ತ ಸಂಭ್ರಮವೆಷ್ಟೊ? ಬರಿಯ ಬೆವರು!
ಮೆತ್ತಗಾದ ಮೈ ಕತ್ತಲಾದ ಮನಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು
ಬಾಳು ಗೋಳು ಬದುಕು ಬರಡು ಬಯದ ನೆರಳು
ನಿತ್ಯ ನರಕ ಬಾಳ ನಾಕ ಬವಿತಕ್ಕಿಲ್ಲ ಬೆಳಕ ಲಾಂದ್ರ
ಕಂಡ ಕನಸು ಮಸುಕು-ಮಸುಕು ಮಬ್ಬಿನಂತೆ
ಮಬ್ಬು ಕವಿದೀ-ಮನ ಮಣ್ಣು ಬೇಡುತಿದೆ ಮೈಗೆ
ಮೆತ್ತಗಾದ ಮೈ ಕತ್ತಲಾದ ಮನಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು
ತಿದ್ದಿ ತೀಡಿ, ಜಾಡು ಹೊಡೆದು,ಕಸವ ಗುಡಿಸಿ
ಬಣ್ಣ ಬಳಿಯಬೇಕಾಗಿದೆ ಗರ್ಭಗುಡಿಗೆ !
ಕೆಸರು ತುಂಬಿದ ಬಸಿರಿನಲಿ ಕಾಯುತಿದೆ ನೊಂದು
ಬಯಕೆ ಹೂವು ಬರುವುದೆಂದೊ ಬತ್ತಿ ನಿಂತ ಮೊಗ್ಗಿನಿಂದ!
ಮೆತ್ತಗಾದ ಮೈ ಕತ್ತಲಾದ ಮನಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು
– ಜಿ ಶಿವಕುಮಾರ ಸೋಗಿ , ಕೈಗಾ, ಕಾರವಾರ
ಕಾರವಾರ ನಿನ್ನಲ್ಲಿ ಇದ್ದ ಕವಿತ್ವದ ಶಕ್ತಿಯನ್ನು ಹೆಚ್ಚಿಸುತ್ತದೆ
ಸೂಪರ್
ಸೂಪರ್ sogi
Ninna manada mathu kurudu kanusu balalli bendu nadeva gataneve e kurudu kanusu super shivu