ಸ್ವಾತಂತ್ರ್ಯೋತ್ಸವ

Share Button
ಬಂತು ನೋಡು ತಂತು ನೋಡು
ಸ್ವಾತಂತ್ರ್ಯದ ನೆನಪು ಹೊತ್ತು ಸ್ವಾತಂತ್ರ್ಯದ ಶುಭದಿನ.
ದಾಸ್ಯದಿಂದ ಮುಕ್ತವಾಗಿ ತನ್ನತನವ ಕಂಡಂತ ಸಿಹಿದಿನ.

.

ಕೆಂಪು ಜನರ ಗುಂಡಿಗಂದು ಎದೆಯೊಡ್ಡಿದ ವೀರರು.
ಮಾತೃಭೂಮಿ ಭಾರತದ ಘನತೆ ಕಾಯ್ದ ಧೀರರು..
ಹಸಿರು ಉಸಿರು ಒಂದೂ ಬಿಡದ ಕೆಂಪು
ಜನರ ಕ್ರೌರ್ಯವು,
ಸ್ವಾಭಿಮಾನ ನಮ್ಮ ಸೊತ್ತು ಎಂದೆನುವ
ಸೇನೆಗಿದ್ದ ಶೌರ್ಯವು.
.
ಭೋಸರಂತೆ ವಲ್ಲಭಬಾಯ್ ಭಗತ್ ಸಿಂಗ್
ಗಾಂಧಿ, ನೆಹರು,ಲಾಲ್ ಬಾಲ್ ಪಾಲರಂತೆ,
ಅವರವರ ತತ್ವದೊಳಗೆ,ಒಂದೇ ಗುರಿ, ಒಂದೇ ಛಲ,ದಾಸ್ಯ ಮುಕ್ತ, ಭಾರತ.
,
ನೂರಾರು ದಂಗೆ ನಡೆಸಿ,ಯೋಧರೆಲ್ಲ
ಜೀವತೆತ್ತು ಪಡೆದರಂದು ಸ್ವಾತಂತ್ರ್ಯ.
ಕೇಸರಿ ಬಿಳಿ ಹಸಿರು ಮೂರು ಬಣ್ಣ
ನಡುವೆ ಚಕ್ರವಿರುವ ಧ್ವಜವದಂದು ಹಾರಿಸಿದ ಧನ್ಯತೆ.
,
ಮೂರು ಬಣ್ಣ ಮೂರು ತತ್ವ,ಚಕ್ರದೊಳಗೂ
ಒಂದು ಸಾರ,ಸರ್ವಜನಾಂಗದ ಅರಿವಿಗೆ.
ಸಾಮರಸ್ಯ, ಶುಭ್ರಮನ ಸಮೃದ್ದಿಯ ಭಾರತ,ಶೌರ್ಯತನದ ತಿಳಿವಿಗೆ‌.
.
ಉರಿವ ಬಿಸಿಲಿರಲಿ,ಸುರಿವ ಹಿಮವಿರಲಿ
ಧೋ ಎನುವ ಮಳೆಯಿರಲಿ,ನಡುಗೊ
ಚಳಿಯಿರಲಿ,ಯೋಧನವನವನ ತನು
ದೇಶ ಸೇವೆಗೆ ಮೀಸಲು.
ಅವನಿಗೆಲ್ಲಿಯ ಗೌರವ ಎಲ್ಲೆ ಮೀರಿದ ನಮ್ಮ  ನಡೆಯಲಿ ಸ್ವೇಚ್ಛಾಚಾರವು ಬೀಸಲು.
,
ತ್ಯಾಗ ಬಲಿದಾನದ ಸತ್ಕಾರ್ಯದ ಫಲವದು
ಇಂದೆಲ್ಲರು ಸುಖಿಗಳು
ಅರಿತು ಬಾಳಿರೆಲ್ಲರೂ ಆಗದೆಯೆ ನೀತಿ
ಮರೆತ ಭ್ರಷ್ಟತೆಗೆ ಮುಖಿಗಳು.
,
ಹಾರಲಿ ಬೆಳಗಲಿ  ಅರಳಲೆಮ್ಮ ರಾಷ್ಟ್ರಧ್ವಜ.ತಿರಂಗವನು ನಮಿಸುತ ರಾಷ್ಟ್ರಗೀತೆ ಹಾಡುವ.
ಎಚ್ಚರಿಕೆಯ ಮಾತದೊಂದ ಗಮನಿಸಿ
ರಾಷ್ಟ್ರಧ್ವಜವನೆಲ್ಲೋ ಹೇಗೋ ಬಳಸುವಂತ ನಿರ್ಲಕ್ಷ್ಯವ ತೊರೆಯಿರಿ.

,

-ಲತಾ(ವಿಶಾಲಿ) ವಿಶ್ವನಾಥ್
,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: