ಬದಲು

Share Button

ಪಟಾಕಿ, ಮತಾಪುಗಳ ಗುಂಪಲ್ಲಿ
ಹೂಕುಂಡಗಳ ನೋಡಿದ್ದೀರಲ್ಲ?
ಹಚ್ಚಿದರೆ ಎರಡಾಳು ಎತ್ತರಕ್ಕೆ
ಕೆಳಗಿನಿಂದ ಮೇಲೆ ಬೆಳಕಿನ
ಮಳೆ ಸುರಿದು- ಕರಗುತ್ತದೆ
.
ಉರಿವ ಹೂಕುಂಡಗಳ ಕಣ್ಣಲ್ಲಿ
ಸದಾ ಇರಿಸಿದಂಥ ಆ ಹುಡುಗ
ಎಷ್ಟು ಹೊತ್ತಿಗೂ ಬಿಳಿಬಿಳಿಯ ಪುಟ್ಟ
ಮೊಲವನ್ನು ಅಂಗಿ ಜೇಬಲ್ಲಿ
ಇರಿಸಿಯೇ ಇದ್ದ
ನಡೆಯುವಾಗ ನಿಲ್ಲುವಾಗ ಮಾತಾಡು
-ವಾಗಲೂ ಕೈಯೊಂದನ್ನು ಮೊಲದ
ಮೊಲದ ಮೇಲೇ ಇರಿಸಿರುತ್ತಿದ್ದ
ಅದರ ಗುಲಗಂಜಿ ಕಣ್ಣುಗಳ ನಾನೂ ಕಂಡವನೇ
.

ತೀರ ಮೊನ್ನೆ ಅವನು ಮತ್ತೆ ಸಿಕ್ಕಾಗ
ಮೊಲ ಇರಲಿಲ್ಲ- ಬದಲಿಗೆ
ಸ್ಯಾಟಿನ್ ನಲ್ಲಿ ಮಾಡಿದ ಗೊಂಬೆ- ಜೂಲು
ಹರಿದು ಬಂದ ಮೈ, ಕಿತ್ತು ಹೋದ ಕಣ್ಣು
.

ಅವನ ಕಣ್ಣಲ್ಲಿ ಬೆಳಗಿದ್ದ ಹೂ ಕುಂಡಗಳು
ಎಲ್ಲಿ ಹೋದವು..
.

-ಡಾ.ಗೋವಿಂದ ಹೆಗಡೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: