ನಡೆ

Share Button

ನಡೆಯುತ್ತಲೇ ಇದ್ದೇನೆ
ಬೆಳಗಿನಿಂದ
ನಡು ಹಗಲು ದಾಟಿದೆ
ಸೂರ್ಯ ಕೊಂಚ ವಾಲಿದ್ದಾನೆ ಈಗ.
ದಾಟುತ್ತ ಬಂದಿರುವೆ
ಹೂವಿನ ದಾರಿಗಳನ್ನು
ಬೆಂಕಿಯ ಬೆಟ್ಟಗಳನ್ನು
ಏರನ್ನು ಇಳಿಜಾರನ್ನು
ಮುಂದಿನ ದಾರಿಯಲ್ಲಿ ಇದ್ದೀತು ಏನು
ಇರಬಹುದೇ ಬಣ್ಣದ ಹಬ್ಬ – ಗಂಧದದೌತಣಗಳು
(ಸದ್ಯ! ಕನಸಿಗಿಲ್ಲ ಸುಂಕ !)

ನಡೆಯುವೆ-
ಮುಗಿಲೋಳಿಯಲ್ಲಿ ಕಣ್ಣ ನೆಟ್ಟು
ಖಾತ್ರಿ- ಈ ಪಯಣ ಮುಗಿಯುತ್ತದೆ
ಸಂಜೆಯಲ್ಲಿ, ಪಡುವಣದಲ್ಲಿ
ಕಾಯುವೆ ಮತ್ತೆ –
ಇನ್ನೊಂದು ಮುಗಿಲಿಗೆ
ತೆರೆಯುವ ಹಗಲಿಗೆ.
.

-ಗೋವಿಂದ ಹೆಗಡೆ

1 Response

  1. Shankari Sharma says:

    ಭಾವ ಯಾನ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: