ಹೇಗೆ ಮರೆತೇನು ಆ ಸುದಿನ

Share Button

ಅಂದು ನಾ ನೂರು ಕನಸುಗಳ ಹೊತ್ತು ಬಂದ ಮುಗ್ಧೆಯಾಗಿದ್ದೆ !
ತಗ್ಗಿದ ತಲೆಯ ಮೇಲೆತ್ತದೆ ಹರಕೆಯ ಕುರಿಯಂತೆ !
ಕೊರಳನೊಡ್ಡಿದೆ ನಿನ್ನ ಮುಂದೆ !
ಅದೆಷ್ಟೋ ವರುಷಗಳ ಹಿಂದೆ !!

ಇಂದು ವಸಂತಗಳುರುಳಿವೆ !
ನೆನಪುಗಳು ಹೃದಯವ ಮೀಟಿವೆ !!
ಅಂತರಂಗ ಶುಧ್ಧ -ಪರಿಶುದ್ಧ ಮನಸು ನಿನದು !
ಸರಳ ಸಜ್ಜನಿಕೆಯ ನಿರ್ಮಲ ಹೃದಯ ನಿನದು !!

ನಿನ್ನೊಳಗೇ ನಾ ಕರಗಿ ನೀರಾದೆ !
ಹೊಸ ಜನ್ಮ ಪಡೆದೆ !!
ಸುಂದರ ನದಿಯಾದೆ !
ಹರಿದು ಸಾಗರ ಸೇರಿದೆ !!

ನಿನ್ನ ಹೃದಯ ಸಾಗರ ಸೇರಿದೆ !
ನಿನ್ನ ಜೊತೆ ಜೊತೆಗೇ ನಡೆದೆ !!
ನೀನೊಂದು  ಚೆಲುವಿನ ಚಿತ್ತಾರಬಿಡಿಸಿ !
ಉಸಿರಾಗಿ ಜೀವತುಂಬಿ ಮುನ್ನಡೆಸಿ !!

ನನ್ನೊಳಗೆ ನೀನೆಲ್ಲವೂ ಆಗಿರಲು !
ನಾನಿತ್ತ  ಪ್ರೀತಿಯ  ಬೆಳೆಸಿ ಹಾರೈಸಿರಲು !!
ಮುನ್ನಡೆವ ದಾರಿಯಲಿ !
ಒಲವ ಚಿಲುಮೆಗಳ  ಪ್ರೀತಿ-ಅಕ್ಕರೆಯಿರಲು !!

ಹೇಗೆ ಮರೆತೇನು ಆ  ದಿನ ಸುದಿನ !
ನನ್ನ ನಿನ್ನಯ ಭಾವಗಳ ಬೆಸೆದ ದಿನ !!

-ಪ್ರಮೀಳ ಚುಳ್ಳಿಕಾನ.
.

3 Responses

  1. Anonymous says:

    Very nice!

  2. Shankari Sharma says:

    ಮದುವೆಯ ದಿನವೇ ?? ಕವನ ಚೆನ್ನಾಗಿದೆ

  3. ಆಶಾ says:

    Wa ,.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: