ಎಳ್ಳು ಬೆಲ್ಲ

Share Button

ಎಳ್ಳು ಬೆಲ್ಲವ ಮೆಲ್ಲೋಣಾ
ಎರಡೊಳ್ಳೆ ಮಾತನಾಡೋಣಾ…
.
ಮಾತನಾಡುವಾಗ ವಿವೇಕ ಕಳೆದುಕೊಳ್ಳದಿರೋಣಾ,
ಅವಾಚ್ಯ ಶಬ್ದಗಳನ್ನು ಮನದ ಕಡತದಿಂದ ತೆಗೆದು ಹಾಕೋಣಾ,
ಎಳ್ಳು ಬೆಲ್ಲವ ಮೆಲ್ಲೋಣ
ಎರಡೊಳ್ಳೆ ಮಾತನಾಡೋಣಾ…
.
ದ್ವೇಷ ಅಸೂಯೆಗಳೆಂಬ ಕಹಿ ಬೀಜಗಳನ್ನು ಕಿತ್ತು ಎಸೆಯೋಣಾ,
ಸ್ನೇಹ ಕರುಣೆಯೆಂಬ ಸಿಹಿ ಬೀಜಗಳ ಸಸಿಯನ್ನಷ್ಟೇ ನೆಡೋಣಾ,,
ಎಳ್ಳು ಬೆಲ್ಲವ ಮೆಲ್ಲೋಣಾ,
ಎರಡೊಳ್ಳೆ ಮಾತನಾಡೋಣಾ..
.
ಮಕ್ಕಳಿಗೆ, ಯುವಕರಿಗೆ ಉತ್ತಮ ಸಂಸ್ಕಾರ ನೀಡೋಣಾ,
ನಮ್ಮ ಹಬ್ಬ ಹರಿದಿನಗಳ ಬಗ್ಗೆ ತಿಳಿಸೋಣಾ,
ಉತ್ತಮ ಪ್ರಜೆಗಳನ್ನಾಗಿಸಲು ನಮ್ಮ ಕೈಲಾದ ಪ್ರಯತ್ನ ಮಾಡೋಣಾ,
ಎಳ್ಳು ಬೆಲ್ಲವ ಮೆಲ್ಲೋಣ
ಎರಡೊಳ್ಳೆ ಮಾತನಾಡೋಣಾ..
.
ನಭೋಮಂಡಲದ ಕನಕಾಭರಣ, ಕಾಣುವ ದೇವ ಸೂರ್ಯನಿಗೆ,
ಸಂಕ್ರಾಂತಿಯ ಶುಭ ದಿನದಂದು  ಭಕ್ತಿಯಿಂದ ನಮಿಸೋಣಾ,
ಸೂರ್ಯನಮಸ್ಕಾರದ ಮಹಿಮೆಯನ್ನು ಅರಿಯೋಣಾ,
ಆರೋಗ್ಯವಂತರಾಗಿರೋಣಾ,
ಎಳ್ಳು ಬೆಲ್ಲವ ಮೆಲ್ಲೋಣಾ,
ಎರಡೊಳ್ಳೆ ಮಾತನಾಡೋಣಾ..
.
ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸೋಣಾ.
ಒಳ್ಳೆಯವರಾಗೇ ಇರೋಣಾ,
ಒಳ್ಳೆಯತನದಿಂದ ಎಲ್ಲರ ಮನಗೆದ್ದು
ಮತ್ತೊಬ್ಬರಿಗೆ ಮಾದರಿಯಾಗಿರೋಣಾ,
ಎಳ್ಳುಬೆಲ್ಲವ ಮೆಲ್ಲೋಣಾ,
ಎರಡೊಳ್ಳೆ ಮಾತನಾಡೋಣಾ…

.

– ಮಾಲತೇಶ ಎಂ ಹುಬ್ಬಳ್ಳಿ

1 Response

  1. Ranganath Nadgir says:

    ಕರ್ನಾಟಕದ ಸಮಸ್ತ ಪ್ರಜೆಗಳಿಗೆ “ಸಂಕ್ರಾಂತಿ ಹಬ್ಬಕ್ಕಾಗಿ ” ಶುಭವನ್ನು ಕೋರುತ್ತಾ , ಮಾಲತೇಶ್ ಹುಬ್ಬಳ್ಳಿ ಇವರು ರಚಿಸಿದ ಸುಂದರ ಪದ್ಯದಲ್ಲಿ
    ಸೂಚಿಸಿದಂತೆ ಒಳ್ಳೆಯ ಮಾತನ್ನು ಆಡುತ್ತ ಅವರು ನೀಡಿದ ಉಳಿದ ಸಲಹೆಗಳನ್ನು ಪಾಲಿಸೋಣ ,ಪದ್ಯವನ್ನು “ಸುರಹೊನ್ನೆ” ಯಲ್ಲಿ ಪ್ರಕಟಿಸಿದ
    ಶ್ರೀಮತಿ ಹೇಮಾಮಾಲಾ ಅವರಿಗೂ ಧನ್ಯವಾದಗಳು .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: