ಉಗ್ರರ ದಮನ

Share Button

ಉಗ್ರರ ಪೋಷಿಸುತ ಶತ್ರು ರಾಷ್ಟ್ರ ಹಾಕುತಿದೆ ಪದೇ ಪದೇ ನಮ್ಮ ಬೆನ್ನಿಗೆ ಚೂರಿ.
ನಂಬಿಕೆಗೆ ಅರ್ಹವಲ್ಲವೆಂದು ಅದು ಹೇಳುತಿದೆ ಸಾರಿ ಸಾರಿ.
ಯೋಧರ ಮೇಲೆ ನಡೆದ ಪಾಪಿ ಉಗ್ರರ
ಭೀಭತ್ಸ ಕೃತ್ಯ ಕಂಡು ಕಲುಕಿದೆ ಹೃದಯ
.
ಉಗ್ರರ ನೆಲೆ ಧ್ವಂಸ ಮಾಡಿ ಅವರ ನಿರ್ನಾಮ ಮಾಡಲು
ಬಂದಿದೆ ಇದೀಗ ಸರಿಯಾದ ಸಮಯ.
ಅವರನ್ನು ಮಟ್ಟ ಹಾಕಲು ದೇಶ ತೆಗೆದುಕೊಳ್ಳುವ
ಯಾವುದೇ ಕ್ರಮವನ್ನು ಸ್ವಾಗತಿಸೋಣ
ಗಡಿ ರಕ್ಷಣೆ ಸಮಯದಲ್ಲಿ ಹುತಾತ್ಮರಾಗುವ
ವೀರಯೋಧರ ಕುಟುಂಬಕ್ಕೆ ಸಹಾಯಹಸ್ತ ನೀಡೋಣ
ನಮ್ಮ ಅಳಿಲು ಸೇವೆಯಿಂದ ಈ ಮೂಲಕವಾದರೂ ದೇಶಪ್ರೇಮ ತೋರೋಣ
..
ನಮ್ಮಲ್ಲೇ ಇಹರು ಕೆಲ ದೇಶದ್ರೋಹಿಗಳು
ನಮ್ಮದೇ ಸವಲತ್ತ್ತು ಪಡೆದು ದೌಲತ್ತಿನಿಂದ ಮೆರೆಯುತಿಹರಿವರು,
ಉಂಡಮನೆಗೆ ಎರಡು ಬಗೆಯುತಿಹರಿವರು.
ಉಗ್ರರಿಗೆ ಅಭಿನಂದನೆ ಸಲ್ಲಿಸಿ ಶತ್ರುರಾಷ್ಟ್ರಕ್ಕೆ ಜೈಕಾರ ಹಾಕುತಿಹರಿವರು,
ಸಾಮಾಜಿಕ ಜಾಲತಾಣದ ದುರ್ಬಳಕೆ ಮಾಡುತ್ತ ಸಮಾಜದ ಸ್ವಾಸ್ಥ್ಯ ಕೆಡಿಸುತಿಹರಿವರು,
ನಮ್ಮಲ್ಲೇ ಇರುವ ಉಗ್ರರಿವರು,
ಯಾರ ಒತ್ತಡವಿದ್ದರೂ ಬೇಡ ಇವರಿಗೆ ರಕ್ಷೆ
ಆಗಲಿ ಇವರಿಗೆ   ಘನಘೋರ ಶಿಕ್ಷೆ..


– ಮಾಲತೇಶ ಎಂ ಹುಬ್ಬಳ್ಳಿ

3 Responses

  1. Vasanth Shenoy says:

    Beautiful.!! I appreciate it

  2. Ranganath Nadgir says:

    Wow.Surahonne sampadakaru Hagu NIMAGE dhanyawadagalu. NIMMA Hagu Smt hemamala AWARA bhetti sarthakawayitu. Munduwaresalu aagraha.

  3. Nayana Bajakudlu says:

    ಯಸ್ , ದೇಶದ ಅಭಿವೃದ್ದೀಯಾ ಪಥದಲ್ಲಿ ನಮ್ಮೆಲ್ಲರ ಸಹಕಾರ ಬಹಳ ಮುಖ್ಯ , ಬಹಳ ಚೆನ್ನಾಗಿ ಹೇಳಿದ್ರಿ ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: