ಭ್ರಮೆ
‘ಆಕಾಶಕ್ಕೆ ಮೂರೇ ಗೇಣು’
ಇದು ನಿಜವಲ್ಲ ಅಂಥ ಗೊತ್ತು
ಆದರೂ ಕೆಲವರು ಹೇಳುವಾಗ
ನಿಜವೇ ಹೌದು ಎಂಬ ನಂಬಿಕೆ
ಕಾರಣ ಮನಸ್ಸು ಯಸುತ್ತದೆ ಭ್ರಮೆ
ದಿಗ್ಭ್ರಮೆಯ ವಿಷಯವೂ ಸಹಜ
ಹೇಳುವವರ ಮೇಲಿನ ಅಂಧ ವಿಶ್ವಾಸ
ಸತ್ಯಾಸತ್ಯತೆ ಅರಿಯುವಾಗ ಮನಸ್ಸು ಮಾಡುತ್ತೆ ಮೋಸ
ಮನಸ್ಸು ಹೀಗೆ
ದಕ್ಕದೇ ಇರುವುದಕ್ಕೇ ಸೋಲುತ್ತದೆ
ಕನಸಿನಾಗೆ ಕಲ್ಪನೆಯ ಕನವರಿಸಿ
ಭ್ರಮೆ ಆವರಿಸಿಕೊಳ್ಳುತ್ತದೆ
ಕಟ್ಟ ಕನಸಿಗೆ ನೆಟ್ಟ ಮನಸ್ಸಿಗೆ
ಕೆಟ್ಟ ನನಸೆಂದೂ ಸೊಗಸಾಗದು
ಇದು ಸತ್ಯವಾದರೂ
ಭಾವ ಜೀವದ ಮನಸ್ಸಿಗೆ ಮಿಥ್ಯವೇ!
ಕೇವಲ ಕಲ್ಪನೆಗೇ ಸೋಲುವ ಮನಸ್ಸಿಗೆ
ಕನಸೇ ಸೊಗಸು
ವಾಸ್ತವ ಸತ್ಯವಾಗಿದ್ದರೂ
ಮಿಥ್ಯವೇ ಪಥ್ಯ, ಭ್ರಮೆಯೇ ಬ್ರಹ್ಮಾಂಡ.
-ಡಿ. ಯಶೋದಾ
ನಿಜ…ಚೆಂದದ ಕವನ.
ಸುಂದರವಾದ ಕವನ . ಕೊನೆಯ ಪ್ಯಾರ ಬಹಳ ಇಷ್ಟ ಆಯಿತು . ನಿಜ, ನನಸಾಗದಿದ್ದರೂ ಕನಸೇ ಸುಂದರ.
ಸುಂದರವಾದ ಕವನ . ಕೊನೆಯ ಪ್ಯಾರ ಬಹಳ ಇಷ್ಟ ಆಯಿತು . ನಿಜ, ನನಸಾಗದಿದ್ದರೂ ಕನಸೇ ಸುಂದರ.
‘ಕೇವಲ ಕಲ್ಪನೆಗೇ ಸೋಲುವ ಮನಸ್ಸಿಗೆ ಕನಸೇ ಸೊಗಸು’… ಈ ಸಾಲು ಆಪ್ತವೆನಿಸಿತು. ಇದು ಭ್ರಮೆಯ ಬಗ್ಗೆ ಇರುವ ‘ವಾಸ್ತವ’..ಕವನ ಇಷ್ಟವಾಯಿತು.
ಚೆನ್ನಾಗಿದೆ ಕವನ