ಮೆಟ್ಟಿಲು

Share Button

ಓ ಮಾತನಾಡದ
ಮುದ್ದಿನ ಗಿಣಿಯೇ,
ನೋಡು…
ಅದೆಷ್ಟು ಮೆಟ್ಟಿಲುಗಳಿವೆ
ಆಕಾಶಕ್ಕೆ!
ಏರಬೇಕಲ್ಲವೆ ನೀನು
ಆ ಅಂಬರದ ಬೆರಗಿಗೆ?
ಜೋಕೆ!
ಉಸಿರು ಕಟ್ಟಿಸುವ ಗಾಳಿ,
ಸಂದು, ಸಡಿಲಗಳಿಗೆ
ಸತತ ಗಮನವಿಡುತ್ತಿರಲಿ
ನಿನ್ನ ಪುಟ್ಟ ಪುಟ್ಟ ಹೆಜ್ಜೆ!
.
ನಿನ್ನ ಚಂಚಲ ಅಲೆಮನವನ್ನು ಹಿಡಿತದಲ್ಲಿಟ್ಟುಕೋ
ಕಂಡೀತು ಸ್ಪಷ್ಟ,
ತಾರೆ ತಾರೆಯ ಮಿರುಗು!
.
ಗೆದ್ದೆ ಎಂದಾದಲ್ಲಿ, ಕೆಳಗೆ
ದೃಷ್ಟಿ ಹಾಯಿಸಬೇಡ!
ನೀ ಏರಿದ ಮೆಟ್ಟಿಲುಗಳು,
ಕಂಡರೂ
ನಿಜವಾಗಿ ಅಲ್ಲಿಲ್ಲ!
ಅದು ಕೇವಲ ಭ್ರಮೆಯಷ್ಟೆ!
ನೀ ದಾಟಿದುದೂ ಅದನ್ನೇ!
ತರ್ಕ, ವಾದಕ್ಕೆ ಆಸ್ಪದವೇಕೆ?
.
ಸುಮ್ಮನೆ  ಸ್ವಚ್ಛಂದ ಹಾರಿಕೊ, ಆನಂದದಿಂದ,
ಪರಮಾನಂದದಿಂದ!


-ಕೆ.ಆರ್.ಎಸ್.ಮೂರ್ತಿ

4 Responses

 1. ಕಲಾ ಚಿದಾನಂದ says:

  ಚೆನ್ನಾಗಿದೆ

 2. Krishnaprabha says:

  ಉತ್ತಮ ಕವನ

 3. ನಯನ ಬಜಕೂಡ್ಲು says:

  ಸುಂದರವಾಗಿದೆ ಕವನ.

 4. Shankari Sharma says:

  ಸೊಗಸಾದ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: