ಶಿಕ್ಷಕ ಹಾಗೂ ಶಿಷ್ಯ(ಭಾಗ-1)

Share Button

ಒಂದು ನಾಡಿನ ಸಂಪತ್ತೆಂದರೆ ಅಲ್ಲಿಯ ಮಕ್ಕಳು. ಈ ಸಜೀವಸಂಪತ್ತನ್ನು ಉಳಿಸಿ ಬೆಳೆಸಿ ಯೋಗ್ಯ ಪ್ರಜೆಯನ್ನಾಗಿ ಮಾಡುವವನೇ ಶಿಕ್ಷಕ. ‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲಗುರುವು’ ಎಂಬ ಕವಿವಚನವನ್ನು ನಾವು ಕೇಳಿದ್ದೇವೆ. ಇದು ಶೈಶವ ಕಾಲದಲ್ಲಾದರೆ ಮುಂದೆ ಬಾಲ್ಯಾವಸ್ಥೆಯಲ್ಲಿ ಗುರುಮಖೇನ ಕಲಿಕೆ ಪ್ರಾರಂಭ. ಆಮೇಲೆ ವ್ಯಕ್ತಿತ್ವ ವಿಕಸನಕ್ಕಾಗಿ ಕಲಿಕೆ. ಈ ಹಂತದಲ್ಲಿ ಮಕ್ಕಳಿಗೆ ಒಳ್ಳೆಯ ಸಹವಾಸ ಹಾಗೂ ಉತ್ತಮ ಗುರುಗಳ ಅವಶ್ಯಕತೆ ಅನಿವಾರ್‍ಯ. ಪೋಷಕರಿಗಿರುವಷ್ಟೇ ಹೊಣೆ,ಕಾಳಜಿ ಶಿಕ್ಷಕರಿಗೂ ಬೇಕಾಗಿದೆ. ಶಾಲೆಯಲ್ಲಿ ಕೇವಲ ಪಠ್ಯಪುಸ್ತಕದ ಕಲಿಕೆಯಾಗಿರದೆ; ಅವರನ್ನು ತಿದ್ದಿತೀಡಿ ಯೋಗ್ಯ ಪ್ರಜೆಗಳನ್ನಾಗಿ ಮಾಡಬೇಕಿದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣವೇ ಅವರ ವಿದ್ಯಾಭ್ಯಾಸದ ತಳಹದಿ.ಈ ಹಂತದಲ್ಲಿ ಮಗುವು ಒಂದು ಹಸಿಮಣ್ಣಿನ ಗಡಿಗೆ. ಅದನ್ನು ಹೇಗೆ ತಟ್ಟಿ ಆಕಾರ ಕೊಡುತ್ತೇವೋ ಹಾಗೆ ಅದು ರೂಪುಗೊಳ್ಳುತ್ತದೆ.

ದಿನದ ಮಹತ್ವ- ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ರವರ ಜನ್ಮದಿನವನ್ನು ಅವರೇ ಸೂಚಿಸಿದಂತೆ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ಉತ್ತಮ ಶಿಕ್ಷಕರಾಗಿದ್ದರು. ಒಮ್ಮೆ ಅವರ ವಿದ್ಯಾರ್ಥಿಗಳು ಅವರ ಬಳಿಬಂದು ನಿಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತೇವೆ. ಆ ಕಾರ್ಯಕ್ರಮಕ್ಕೆ ತಾವು ಬರಬೇಕು ಎಂದು ಆಮಂತ್ರಿಸಿದಾಗ ಈ ದಿನವನ್ನು ಕೇವಲ ನನ್ನೊಬ್ಬನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ಶಿಕ್ಷಕರ ದಿನವನ್ನಾಗಿ ಆಚರಿಸಿ. ಹೀಗಾದಲ್ಲಿ ನನಗೆ ಹೆಚ್ಚು ಸಂತೋಷವಾಗುವುದು ಎಂದರಂತೆ. ವಿದ್ಯಾರ್ಥಿಗಳು ಸಂತೋಷದಿಂದ ಒಪ್ಪಿಕೊಂಡು ಹಾಗೆ ಆಚರಿಸಿದರಲ್ಲದೆ ಮುಂದೆ ಆ ದಿನವನ್ನು ಭಾರತದೆಲ್ಲೆಡೆ ಸಪ್ಟಂಬರ 5 ನೇ ದಿನಾಂಕವನ್ನು ಶಿಕ್ಷಕರ ದಿನವಾಗಿ ಆಚರಿಸುವುದು ರೂಢಿಯಾಯ್ತು.

(ಮುಂದಿನವಾರ ಮುಂದಿನ ಭಾಗ)

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

3 Responses

  1. ನಯನ ಬಜಕೂಡ್ಲು says:

    “ವಿದ್ಯಾಭ್ಯಾಸದ ಹಂತದಲ್ಲಿ ಮಗು ಒಂದು ಹಸಿ ಮಣ್ಣಿನ ಗಡಿಗೆ “- ಈ ವಾಕ್ಯ ಬಹಳ ಇಷ್ಟ ಆಯಿತು . Nice article

  2. ವಿಜಯಾಸುಬ್ರಹ್ಮಣ್ಯ , says:

    ಧನ್ಯವಾದ ನಯನಾ ಬಜಕೂಡ್ಲು

  3. Shankari Sharma says:

    ಸೊಗಸಾದ ಲೇಖನ ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: