ಆವಿಷ್ಕಾರದ ಅಗತ್ಯ
ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ಸ್ಮಾರ್ಟಫೋನ್ ಕೈಜಾರಿ ಬಿದ್ದು ಒಡೆಯಿತು. ಅದನ್ನು ರಿಪೇರಿ ಮಾಡಿಸಲು ಸಾಧ್ಯವಾದರೆ, ಸಾಕಷ್ಟು ಹಣ ಖರ್ಚು ಮಾಢಬೇಕು. ಇಲ್ಲದಿದ್ದರೆ ಹೊಸ ಫೋನ್ ಖರೀದಿ ಮಾಡಬೇಕು.
ಹೃದಯದ ಸಮಸ್ಯೆ ಎದುರಿಸುತ್ತಿರುವ ಕೆಲವರಿಗೆ ಸಹಾಯವಾಗಲು, ವೈದ್ಯರು ಸರ್ಜರಿ ಮಾಡಿ ಪೇಸ್‍ಮೇಕರ್ ಆಳವಡಿಸುತ್ತಾರೆ. ಆದರೆ ಪೇಸ್‍ಮೇಕರ್ ನಲ್ಲಿರವ ಲೋಹದ ಬಿಡಿಭಾಗಗಳಿಂದಾಗಿ, ಪೇಸ್ ಮೇಕರ್ ಅಳವಡಿಸಿಕೊಂಡವರು, ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳಿಂದ ಅಂತರ ಕಾಯ್ದುಕೊಂಡಿರಬೇಕಾಗುತ್ತದೆ. ಉದಾಹರಣೆಗೆ, ಮೊಬೈಲ್ ಫೋನ್, ಎಂಪಿ3 ಪ್ಲೇಯರ್, ಗೃಹೋಪಯೋಗಿ ಉಪಕರಣಗಳು, ಮೈಕ್ರೋವೇವ್ ಓವನ್ ಮೊದಲಾದವುಗಳನ್ನು ಬಳಸುವಾಗ, ವಿಮಾನ ನಿಲ್ದಾಣ ಅಥವಾ ಮಾಲ್‍ಗಳಲ್ಲಿರುವ ಮೆಟಲ್ ಡಿಟೆಕ್ಟರ್ ಗಳಿಂದ ಸೆಕ್ಯೂರಿಟಿ ಚೆಕ್ ನೆಡೆಯುವಾಗ, ಪೇಸ್‍ಮೇಕರ್ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆಗಳಿರುತ್ತವೆ.
ಲೇಸರ್ ಬಳಸಿ ಮಾಡಲಾಗುವ ಸೆರಮಿಕ್ ವೆಲ್ಡಿಂಗ್ ಎನ್ನುವ ಈ ಹೊಸ ತಂತ್ರಜ್ಞಾನವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞರ ತಂಡವೊಂದು ಅಭಿವೃದ್ಧಿಪಡಿಸಿದೆ. ಅಲ್ಟ್ರಾವೇಗದ ಫಲ್ಸಡ್ ಲೇಸರ್ ಬಳಸಿ ಸೆರಮಿಕ್ ವೆಲ್ಡಿಂಗ್ ಮಾಡುವ ಈ ವಿಧಾನದಲ್ಲಿ 50 ವ್ಯಾಟ್‍ಗಳಿಗಿಂತ ಕಡಿಮೆಯ ಲೇಸರ್ ಬಳಸಲಾಗುತ್ತದೆ.
ಅಲ್ಟ್ರಾವೇಗದ ಫಲ್ಸಡ್ ಲೇಸರ್ ಬಳಸುವ ವಿಧಾನದಲ್ಲಿ ಸೆರಮಿಕ್ ವಸ್ತುಗಳನ್ನು ವೆಲ್ಡಿಂಗ್ ಮಾಡಬೇಕಾದ ಪ್ರದೇಶದಲ್ಲಿ ಮಾತ್ರ ಲೇಸರ್ ಶಕ್ತಿಯನ್ನು ಕೇಂದ್ರಿಕೃತ ಗೊಳಿಸಲಾಗುತ್ತದೆ. ಹೀಗಾಗಿ ಇಡೀ ಸೆರಮಿಕ್ ವಸ್ತು ವಿಪರೀತ ಬಿಸಿಯಾಗುವುದಾಗಲಿ, ಅದರ ಜೊತೆಗಿರುವ ಎಲ್ಕೆಟ್ರಾನಿಕ್ ವಸ್ತುಗಳು ಸುಟ್ಟು ಹಾಳಾಗುವುದಾಗಲಿ ಆಗುವುದಿಲ್ಲ.
ಆವಿಷ್ಕಾರಕ್ಕೆ ಈಗಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಜನಸಾಮಾನ್ಯರು ಬಳಸುವ ಹಲವಾರು ತಂತ್ರಜ್ಞಾನ ಮತ್ತು ವಿಧಾನಗಳಲ್ಲಿ ಇರುವ ಕೊರತೆಗಳನ್ನು ಸರಿಪಡಿಸುವ ತಂತ್ರಜ್ಞಾನದ ಅಭಿವೃದ್ಧಿ ಕೂಡಾ ಮಹತ್ವದ ಆವಿಷ್ಕಾರವಾಗುತ್ತದೆ.
-ಉದಯಶಂಕರ ಪುರಾಣಿಕ
ವೆರಿ ನೈಸ್ . ವಿದ್ಯಾರ್ಥಿಗಳೂ ಓದಬಹುದಾದಂತಹ ಉಪಯುಕ್ತವಾದ ಲೇಖನ.
ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ಬಹಳಷ್ಟು ಅವಕಾಶಗಳಿವೆ. ಸ್ನಾತಕೋತ್ತರ ಪದವಿ ಪಡೆದು, ಸಂಶೋಧನೆ ಮಾಡಿ ಎಂದು ಪದವಿ ವಿದ್ಯಾರ್ಥಿಗಳಿಗೆ ಆಗಾಗ ಹೇಳುತ್ತಿರುತ್ತೇನೆ. ಒಳ್ಳೆಯ ಲೇಖನ